ಯಾದಗಿರಿ: ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಹಿಪಾಲರೆಡ್ಡಿ (ಆರೋಗ್ಯ ಇಲಾಖೆ) ಚುನಾಯಿತರಾದರು.
ತೀವ್ರ ಕುತುಹಲ ಕೆರಳಿಸಿದ್ದ ಚುನಾವಣೆಯಲ್ಲಿ ಮಹಿಪಾಲರೆಡ್ಡಿ ಅವರು ೨೫ ಮತ ಪಡೆದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಂದಾಯ ಇಲಾಖೆಯ ಗಿರೀಶ ರಾಯಕೋಟಿ ೧೮ ಮತ ಪಡೆದರೆ ಬಸವರಾಜ ಅಂಗಡಿ ಅರಕೇರಾ ಶಿಕ್ಷಕ ೧೪ ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಯಮರೆಡ್ಡಿ ಮುಂಡಾಸ (ಕೃಷಿ ಇಲಾಖೆ) ೪೦ ಮತ ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿಯಾಗಿದ್ದ ಜಿಲ್ಲಾಸ್ಪತ್ರೆಯ ಶರಣಗೌಡ ೧೭ ಮತ ಪಡೆದು ಸೋಲಪ್ಪಿದರು.
ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂತೋಷಕುಮಾರ ನೀರಟಗಿ ಗುರುಮಠಕಲ್ ಸರ್ಕಾರಿ ಐಟಿಐ ಅವರು ೩೦ ಮತ ಗಳಿಸಿ ಆಯ್ಕೆಯಾದರು ಪ್ರತಿಸ್ಪರ್ಧಿ ಸಾಯಪ್ಪ ಚಂಡ್ರಕಿ ಹೆಡಿಗಿಮುದ್ರ ಪ್ರೌಢಶಾಲೆ ಶಿಕ್ಷಕ ೨೭ ಮತ ಪಡೆದು ಸೋಲಪ್ಪಿದರು.
ಚುನವಣಾಧಿಕಾರಿಯಾಗಿ ಪಿ. ಮಲ್ಲಿಕಾರ್ಜುನ ಪೊಲೀಸ್, ಸಹಾಯಕ ಚುನಾವಣಾಧಿಕಾರಿಯಾಗಿ ವಿಶ್ವನಾಥ ಲದ್ದಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವ: ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ವಿಜಯಿ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಪರಮರೆಡ್ಡಿ, ಸಾಬರೆಡ್ಡಿ, ಆರ್.ಎಂ. ನಾಟೇಕರ್, ಬಸವರಾಜ ಯಡ್ಡಳ್ಳಿ, ಹಂಪೇಶ, ಸಂತೋಷಕುಮಾರ, ಗೋವಿಂದಮೂರ್ತಿ ಇನ್ನಿತರರು ಇದ್ದರು.