ಕರ ವಸೂಲಿಗಾರ ಹುದ್ದೆಗೆ ನಿಯಮಾವಳಿಯಂತೆ ಭರ್ತಿಗೆ ಆಗ್ರಹಿಸಿ ಮನವಿ

0
5

ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತಿಯಲ್ಲಿ ಸುಮಾರು ಒಂದು ವರ್ಷದಿಂದ ಖಾಲಿ ಇರುವ ಕರ ವಸೂಲಿಗಾರ ಹುದ್ದೆಗೆ ಸರಕಾರದ ನಿಯಮಾವಳಿಯಂತೆ ಭರ್ತಿ ಮಾಡಬೇಕೆಂದು ಆಗ್ರಹಿಸಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಪಂ ಪಿಡಿಓ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈಗಾಗಲೇ ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತಿಯಲ್ಲಿ ಕರ ವಸೂಲಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರಪ್ಪ ಸಂಗಣ್ಣ ಇಟಗಿ ಎಂಬುವವರು ಗ್ರೇಡ್-೨ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿರುವ ಕಾರಣ, ಆ ಸ್ಥಾನ ಒಂದು ವರ್ಷದಿಂದ ಖಾಲಿ ಇದೆ.ಈಗ ಈ ಹುದ್ದೆಗೆ ಪಂಪ್ ಆಪರೇಟರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಪೈಕಿ ಜೇಷ್ಠತೆ ಹೊಂದಿರುವವರನ್ನು ನೇಮಕಾತಿ ಮಾಡಿಕೊಳ್ಳಲು ಸರಕಾರದ ನಿಯಮಾವಳಿ ಇದ್ದರೂ ಸಹಿತ ಇಲ್ಲಿಯವರೆಗ ಕ್ರಮಕೈಗೊಂಡಿಲ್ಲ.

Contact Your\'s Advertisement; 9902492681

ಅಲ್ಲದೇ ಈ ಬಗ್ಗೆ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ಅನಿರ್ದಿಷ್ಟ ಧರಣಿ ಮಾಡಿದರೂ ಕಾರ್ಯಗತಗೊಂಡಿಲ್ಲ.ಆದ್ದರಿಂದ ಒಂದು ವಾರದ ಒಳಗಾಗಿ ಸರಕಾರದ ನಿಯಮಾವಳಿಯಂತೆ ಜೇಷ್ಠತೆ ಆಧಾರದ ಮೇಲೆ ದುಂಡಪ್ಪ ಶಿವಶರಣಪ್ಪ ಸಿಬ್ಬಂದಿಯನ್ನು ಕರವಸೂಲಿಗಾರ ಹುದ್ದೆಗೆ ಪದೋನ್ನತಿ ನೀಡಬೇಕು. ತೊನಸನಹಳ್ಳಿ(ಎಸ್) ಗ್ರಾಪಂ ಸಹಾಯಕ ಬಿಲ್ ಕಲೆಕ್ಟರ್ ಆಗಿ ನೇಮಕಾತಿ ಹೊಂದಿದ್ದು, ಅದನ್ನು ರದ್ದುಪಡಿಸಬೇಕು. ಅಲ್ಲದೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಬೆಳ್ಳಪ್ಪ ಖಣದಾಳ,ಶ್ರೀಕಾಂತ ನಾಗಪ್ಪ, ಡಿ.ಸಿ.ಹೊಸಮನಿ,ಕೃಷ್ಣಪ್ಪ ಕರಣಿಕ್, ರವಿಕುಮಾರ ಸಣತಮ್, ಶರಣಪ್ಪ ದೊಡ್ಡಮನಿ,ವಿಶ್ವರಾಜ ಫೀರೋಜಾಬಾದ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here