ಕಬ್ಬಿನ ದರ ನಿಗದಿ, ಬಾಕಿ ೮.೫೦ ಕೋಟಿ ಪಾವತಿಗೆ ವಿಳಂಬ: ರೈತರಿಗೆ ಎಫ್‌ಆರ್‌ಪಿ ದರ ಸಕಾಲಕ್ಕೆ

0
13

ಆಳಂದ: ತಾಲೂಕಿನ ಭೂಸನೂರ ಹತ್ತಿರದ ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಯು ಬಹುವರ್ಷದ ಗುತ್ತಿಗೆ ಪಡೆದು ನಡೆಸುತ್ತಿರುವ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಿಂದ ಕಳೆದ ಸಾಲಿನಲ್ಲಿ ಕಬ್ಬು ನೀಡಿದ ರೈತರ ೨೦೦ ರೂಪಾಯಿ ಪ್ರತಿಟನ್ ಕಬ್ಬಿನ್ ಬಾಕಿ ಒಟ್ಟು ೮.೫೦ಕೋಟಿ ರೂಪಾಯಿ ಹಾಗೂ ಪ್ರಸಕ್ತ ಹಂಗಾಮಿನ ಕಬ್ಬು ಖರೀದಿಸುವ ದರ ನಿಗದಿ ಘೋಷಣೆಗೆ ವಿಳಂಬವಾಗಿದ್ದು ಬೆಳೆಗಾರರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಬಾಕಿ ಪ್ರತಿಟನ್ ಕಬ್ಬಿನ ೨೦೦ ರೂಪಾಯಿ ದೀಪಾವಳಿ ಹಬ್ಬಕ್ಕಾದರು ಕೈಸೇರಬಹುದು ಎಂದು ನಿರೀಕ್ಷಿಸಿದ ಬೆಳೆಗಾರರಿಗೆ ಸದ್ಯಕ್ಕೆ ಸಿಕ್ಕಿದ್ದು ವಿಳಂಬದ ಭರವಸೆ ನವೆಂಬರ ಅಂತ್ಯ ಅಥವಾ ಡಿಸೆಂಬರ್ ತಿಂಗಳಲ್ಲಿ ೨೦೦ ರೂಪಾಯಿ ಪ್ರತಿಟನ್ ಬದಲು ೧೦೦ ರೂಪಾಯಿ ಒಟ್ಟು ೪.೨೫ ಕೋಟಿ ರೂಪಾಯಿ ಕೊಡುವ ಭರವಸೆ ಎನ್‌ಎಸ್‌ಎಲ್ ಕಾರ್ಖಾನೆಯಿಂದ ದೊರೆತ್ತಿದ್ದು, ಆದರೆ ಕಬ್ಬು ಕೊಟ್ಟವರಿಗೆ ವರ್ಷವಾದರು ಪೂರ್ಣ ಬಿಲ್ ಪಾವತಿ ಆಗದೆ ವಿಳಂಬವಾಗಿದ್ದು, ಜಿಲ್ಲಾಡಳಿತವೂ ಸಂಪೂರ್ಣವಾಗಿ ಕಾರ್ಖಾನೆಯ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.

Contact Your\'s Advertisement; 9902492681

ಎರಡು ವಾರಗಳ ಹಿಂದೆ ಶಾಸಕ ಸುಭಾಷ ಗುತ್ತೇದಾರ ಸೇರಿದಂತೆ ಭೂಸನೂರಿನ ಹಳೆಯ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಪ್ರತಿಟನ್ ಕಬ್ಬಿನ ೨೦೦ ರೂಪಾಯಿ ಹಾಗೂ ಹಂಗಾಮಿನ ಕಬ್ಬು ನುರಿಸುವ ಮೊದಲೇ ದರ ಘೋಷಣೆಗೆ ಒತ್ತಾಯಿಸಿದ್ದರು.
ಈ ವೇಳೆ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ದೇವರಾಜಲು ಅವರು ಆಗಲೂ ಡಿಸೆಂಬರ್ ತಿಂಗಳಲ್ಲಿ ೧೦೦ ರೂಪಾಯಿ ಕೊಡುವುದು ಹಾಗೂ ದರ ನಿಗದಿಯ ಕುರಿತು ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಮತ್ತಷ್ಟು ವಿಳಂಬವಾಗಿದ್ದು ಕಬ್ಬು ಬೆಳೆಗಾರರಲ್ಲಿ ಅನುಮಾನಕ್ಕೆ ಎಡೆಮಾಡಿದೆ.

ಅಲ್ಲದೆ, ಇಷ್ಟಕ್ಕೆ ತೃಪ್ತರಾಗದ ಕಬ್ಬು ಬೆಳೆಗಾರರು ಸಾಮೂಹಿಕವಾಗಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ಕಬ್ಬು ಬೆಳೆಗಾರ ಸಂಘ ಹಾಗೂ ಜನ ಪ್ರತಿನಿಧಿಗಳನ್ನು ಹೊರಗಿಟ್ಟು ಧರಣಿ ಆರಂಭಿಸುವ ಮೂಲಕ ಎನ್‌ಎಸ್‌ಎಲ್ ಕಾರ್ಖಾನೆ ಮುಂದೆ ೨ ದಿನಗಳ ಕಾಲ ಧರಣಿ ನಡೆಸಿದರು. ಆದರೂ ಕಾರ್ಖಾನೆಯಿಂದ ಹಳೆಯ ಭರವಸೆಯೇ ಪುನಾರಾವರ್ತನೆಯಾಗಿದ್ದು ರೈತರಿಗೆ ದೀಪಾವಳಿ ಹಬ್ಬಕ್ಕೆ ಹಣ ಕೈಸೇರುವ ಭರವಸೆ ಹುಸಿಯಾಗಿದೆ.

ಅತಿವೃಷ್ಟಿ ಅನಾವೃಷ್ಟಿಯಿಂದ ಕೃಷಿಯ ದುಬಾರಿಯ ವೆಚ್ಚದಿಂದ ತತ್ತರಿಸಿ ಹೋಗಿರುವ ರೈತರು ಮತ್ತು ಕಬ್ಬು ಬೆಳೆಗಾರರಿಗೆ ಭರವಸೆಯ ಮೂಡಿಸುವ ಹೊತ್ತಿನಲ್ಲಿ ಅವರ ಬಾಕಿಬಿಲ್ ಪಾವತಿ ಆಗದೆ ಇರುವುದು ಹಾಗೂ ಹಂಗಾಮಿನಲ್ಲಿನಲ್ಲಿ ಪ್ರತಿಟನ್ ಕಬ್ಬಿನ್ ದರ ಘೋಷಣೆ ಆಗದೆ ಒಂದೊಮ್ಮೆ ಕಾರ್ಖಾನೆಯಿಂದ ಕಬ್ಬು ನುರಿಸುವ ಕಾರ್ಯ ಪ್ರಾರಂಭವಾದರೆ ರೈತರಿಗೆ ಹಳೆಯ ಸಮಸ್ಯೆಯ ಮುಂದೆಯೂ ಪುನರಾವರ್ತನೆ ಆಗಲಿದೆ ಎಂದು ಹಂಗಾಮಿನ ಕಬ್ಬು ಬೆಳೆಗಾರರು ಆತಂಕ ಹೊರಹಾಕಿದ್ದಾರೆ.

ಈ ಸಕ್ಕರೆ ಕಾರ್ಖಾನೆಯ ಜಿಲ್ಲೆಯ ಇತರ ತಾಲೂಕಿನ ವ್ಯಾಪ್ತಿ ಹೊರತು ಪಡಿಸಿ ಒಟ್ಟು ತಾಲೂಕಿನ ಐದು ಹೋಬಳಿ ಕೇಂದ್ರಗಳಿಗೆ ಮಾತ್ರ ಸಂಬಂಧಿತ ಆಳಂದ, ನಿಂಬರಗಾ, ಖಜೂರಿ, ನರೋಣಾ ಮತ್ತು ಮಾದನಹಿಪ್ಪರಗಾ ವಲಯದಲಿ ಹೊಸ ಕಬ್ಬಿನ ಬೆಳೆ ೧೨೦೦ ಹೆಕ್ಟೇರ್ ಗುರಿಯ ಪೈಕಿ ೧೨೪೫ ಕಬ್ಬಿನ ಲಭ್ಯತೆ ಇದೆ. ಹಳೆಯ ನಾಟಿ ಕಬ್ಬಿನ ಬೆಳೆಯ ಲಭ್ಯತೆ ಒಟ್ಟು ೪೦೩೧ ಗುರಿ ಪೈಕಿ ೪೦೩೧ ಬೆಳೆಯ ಒಟ್ಟು ೫.೨೭೬ ಹೆಕ್ಟೇರ್ ಬೆಳೆಯ ಪೈಕಿ ಮಳೆಯಿಂದಾಗಿ ೮೮೬ ಹೆಕ್ಟೇರ್ ಹಾನಿಯಾಗಿ ಬಾಕಿ ಉಳಿದ ೪,೩೯೦ ಹೆಕ್ಟೇರ್ ಬೆಳೆ ಕಟ್ಟಾವಿಗೆ ಲಭವಾಗಿದೆ ಎಂಬ ಅಂಕಿಅಂಶಗಳು ದೃಢಪಡಿಸುತ್ತಿವೆ.

ಈಗಾಗಲೇ ಕಾರ್ಖಾನೆಗೆ ಭೇಟಿ ನೀಡಿ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಬಾಕಿ ಪ್ರತಿಟನ್ ಕಬ್ಬಿನ ೨೦೦ ರೂಪಾಯಿ ಹಾಗೂ ಹಂಗಾಮಿನ ದರ ನಿಗದಿಗೆ ಸೂಚಿಸಿದ್ದೇನೆ. ಅವರು ಬಾಕಿ ೧೦೦ ರೂಪಾಯಿ ಕೊಡುವುದಾಗಿ ಹೇಳಿದಂತೆ ಬಿಲ್ ತಕ್ಷದಿಂದಲೇ ಪಾತಿಗೆ ಕ್ರಮಕೈಗೊಳ್ಳಬೇಕು. ಕಬ್ಬು ಬೆಳೆಗಾರರಿಗೆ ಕಾರ್ಖಾನೆಯುವರು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾರ್ಖಾನೆ ಹಂಗಾಮಿಗೆ ರೈತರು ಸಹ ಸಕರಿಸುವರು. – ಸುಭಾಷ ಗುತ್ತೇದಾರ ಶಾಸಕರು ಆಳಂದ.

ದರ ನಿಗದಿ ಪಡಿಸದೆ ಕಾರ್ಖಾನೆ ಆರಂಭಿಸಿದ್ದಾರೆ. ತಕ್ಷಣ ದರ ಘೋಷಿಸಬೇಕು. ಅವರು ನೀಡಿದ ಭರವಸೆಯಂತೆ ನ. ೧೦ ಅಥವಾ ೧೫ನೇ ತಾರೀಖಿನೊಳಗೆ ಪ್ರತಿಟನ್ ೧೦೦ ರೂಪಾಯಿ ಕೊಡಬೇಕು. ಪ್ರಸಕ್ತ ಹಂಗಾಮಿನ ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ದರದಂತೆ ಬಿಲ್ ಪಾವತಿಸಬೇಕು. ಪ್ರತಿ ೧೫ ದಿನಕ್ಕೆ ಬಿಲ್ ಪಾವತಿಸಬೇಕು. ೯ಸಾವಿರ ಮಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಶೇರಿದಾರರಿದ್ದಾರೆ. ಅವರ ಕಬ್ಬು ಮೊದಲು ಸರಬರಾಜು ಮಾಡಬೇಕು. ಮತ್ತೊಂದು ಕಾರ್ಖಾನೆಗೆ ಕಬ್ಬು ಕೊಡುವುದಿಲ್ಲ. ಕಾರ್ಖಾನೆ ಸುವ್ಯವಸ್ಥೆಗೆ ರೈತರೆಯಲ್ಲರು ಸಹಕಾರ ನೀಡುತ್ತವೇ. – ಧರ್ಮರಾಜ ಸಾಹ ಕಬ್ಬು ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here