ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವ ಆಚರಣೆ

0
20

ಕಲಬುರಗಿ: ಕರ್ನಾಟಕ ಸರಕಾರದ ಆದೇಶದ ಮೇರೆಗೆ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ದಿಸೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಕ್ಟೋಬರ್ ೨೮ನೇ ತಾರೀಖಿನಿಂದ ವಿಶ್ವವಿದ್ಯಾಲಯದಲ್ಲಿ ಕನ್ನಡ ನಾಡ ಗೀತೆಯನ್ನೊಳಗೊಂಡಂತೆ ಹಲವು ಕನ್ನಡಪರ ಹಾಡುಗಳ ಗೀತಗಾಯನ ಕಾರ್ಯಕ್ರಮ ಜರುಗಿತು.

ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಬೋಧಕ/ಬೋಧಕೇತರ ಸಿಬ್ಬಂದಿಯವರಿಗೆ ಕನ್ನಡ ಪರ ಹಾಡುಗಳ ಗಾಯನ ಸ್ಪರ್ದೆ ಮತ್ತು ನೃತ್ಯ ಸ್ಪರ್ದೆ ಏರ್ಪಡಿಸಲಾಗಿತ್ತು. ದಿನಾಂಕ ೩೦.೧೦.೨೦೨೧ ರಂದು ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸ್ಪರ್ದೆಯಲ್ಲಿ ಭಾಗವಹಿಸಿ ವೀಚೇತರಾದ ವರಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿಇದೆ. ದಿನಾಂಕ ೦೧.೧೧.೨೦೨೧ ರಂದು ಬೆಳಿಗ್ಗೆ ೯:೦೦ ಗಂಟೆಗೆ ಕನ್ನಡ ರಾಜ್ಯೋತ್ಸವ ನಿಮಿತ್ತ ಮಾನ್ಯ ಕುಲಪತಿಗಳಾದ ಪ್ರೊ. ದಯಾನಂದ ಅಗಸರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂದೆ ದ್ವಜಾರೋಹಣ ಮಾಡುವರು.

Contact Your\'s Advertisement; 9902492681

ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಖ್ಯಾತ ಸಾಹಿತಿಗಳಾದ ಪ್ರೊ. ಶಾಂತಿನಾಥ ದಿಬ್ಬದ ಅವರು ಕನ್ನಡ ನಾಡು-ನುಡಿ ಕುರಿತು ಸಂದೇಶ ನೀಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಸುರೇಶ ಬಡಿಗೇರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೋಧಕ/ಬೋಧಕೇತರ ಸಿಬ್ಬಂದಿಯವರು ಸಾಂಪ್ರದಾಯಿಕ ದೇಶೀಯ ಉಡುಪುಗಳನ್ನು ಧರಿಸಿ ಕಾರ್ಯಸೌಧದಿಂದ ಕನ್ನಡ ಅಧ್ಯಯನ ಸಂಸ್ಥೆಯವರೆಗೆ ದೇಶಿಯ ವಾದ್ಯಾಗಳೊಂದಿಗೆ ಮೆರವಣಿಗೆ ಮೂಲಕ ಬಂದು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಗ್ರಂಥಾಲಯ ಮತ್ತು ಕನ್ನಡ ನಾಡು-ನುಡಿಯ ಚಿಂತಕರ ಭಾವಚಿತ್ರಗಳನ್ನು ವೀಕ್ಷಿಸುವರು.

ಇಲ್ಲಿ ದೇಶೀಯ ಚಹಾ ಮತ್ತು ಚೂಡಾದ ಸವಿರುಚಿಯನ್ನು ಸವೆದು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದವರೆಗೆ ಮೆರವಣಿಗೆಯಲ್ಲಿ ಸಾಗುವುರು. ದೈಹಿಕ ಶಿಕ್ಷಣ ವಿಭಾಗದ ಒಳಾಗಂಣ ಕ್ರೀಡಾಂಗಣದಲ್ಲಿ ದೇಶೀಯವಾಗಿ ಸಿದ್ದಪಡಿಸಿದ ವಿವಿಧ ಬಗೆಯ ಖಾದ್ಯಗಳನ್ನು ಸವಿಯುವರು. ದೇಶೀಯ ಉಡುಗೆ ಧರಿಸಿದವರಲ್ಲಿ ಅತ್ಯಾಕರ್ಷಕವಾಗಿ ಉಡುಪ ಧರಿಸಿದವರಿಗೂ ಕೂಡಾ ಬಹುಮಾನ ನೀಡಲಾಗುವುದು.

ಹೀಗೆ ಗುಲಬರ್ಗಾ ವಿಶ್ವವಿದ್ಯಾಲಯದ ವಿನೂತನದವಾದ ಕಾರ್ಯಕ್ರಮಗಳ ಮೂಲಕ ಕನ್ನಡ ರಾಜ್ಯೋತ್ಸವವನ್ನು ವಿಶ್ವವಿದ್ಯಾಲಯವು ಸಂಭ್ರಮಿಸುವ ಮೂಲಕ ಕನ್ನಡ ನಾಡು-ನುಡಿ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ಹೆಮ್ಮೆಯಿಂದ ಮಾಡುತ್ತಿದೆ. ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here