ಕಲಬುರಗಿ: ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಪರಮಪೂಜ್ಯ ಕಲ್ಲಯ್ಯಜ್ಜನವರಿಗೆ ಏಷಿಯನ್ ವೇದಿಕೆ ಕಲ್ಚರಲ್ ಫೌಂಡೇಶನ್ ಬೆಂಗಳೂರು ಇವರ ಅಡಿಯಲ್ಲಿ ನಾಡಿನ ಸಾವಿರಾರು ಅಂಧ ಅನಾಥ ಅಂಗಹೀನರ ಬದುಕಿನ ಏಳ್ಗೆಗಾಗಿ ಹಗಲಿರುಳು ಶ್ರಮ ವಹಿಸುತ್ತಾ ಉಚಿತ ಅನ್ನ, ಸಂಗೀತ ,ಸಾಹಿತ್ಯ , ಶಿಕ್ಷಣ ನೀಡುತ್ತಾ ಅಂಧರಾಗಿರುವ ಶ್ರೀಗಳಿಗೆ ಗೌರವ ಡಾಕ್ಟರೇಟ್ ಒದಗಿಬಂದಿರುವುದು ಕಲಬುರಗಿ ನಗರದ ಎಲ್ಲಾ ಕಲಾವಿದರಿಗೆ ತುಂಬಾ ಸಂತೋಷದ ವಿಷಯ ಎಂದು ಕಲಾವಿದ ಶ್ರೀ ಬಂಡಯ್ಯ ಸ್ವಾಮಿ ಸುಂಟನೂರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಇದು ನಾಡಿನ ಅಂಧ ಅನಾಥರಿಗೆ ಸಂದ ಗೌರವ