ಪುನೀತ್ ಇಲ್ಲದ ಕನ್ನಡ ಚಿತ್ರರಂಗ ಬಡವಾಗಿದೆ: ಸುರೇಶ ಮೆಂಗನ್

0
52

ಶಹಾಬಾದ: ಪುನೀತ್ ಇಲ್ಲದ ಕನ್ನಡ ಚಿತ್ರರಂಗ ಬಡವಾಗಿದೆ ಎಂದು ದಲಿತ ಮುಖಂಡ ಸುರೇಶ ಮೆಂಗನ್ ಹೇಳಿದರು.
ಅವರು ಶನಿವಾರ ತಾಲೂಕಿನ ಭಂಕೂರ ಗ್ರಾಮದ ವೃತ್ತದಲ್ಲಿ ಪುನಿತ್ ರಾಜಕುಮಾರ ಅಭಿಮಾನಿ ಬಳಗದ ವತಿಯಿಂದ ಪುನಿತ್ ರಾಜಕುಮಾರ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಚಿತ್ರರಂಗದಲ್ಲಿ ಅಪ್ರತಿಮ ಸಾಧಕ ಅಲ್ಲದೆ ನಾಡಿನ ಜನರ ಸೇವೆಗೆ ತಾನೂ ದುಡಿದ ಹಣದಲ್ಲಿಯೇ ಸ್ವಲ್ಪ ಮೀಸಲಿಟ್ಟ ಪ್ರತಿಭಾವಂತ. ಕೊರೊನಾ ಸಂದರ್ಭದಲ್ಲೂ ಜನರ ಆರೋಗ್ಯದ ಹಿತಕ್ಕಾಗಿ ಆಗಿನ ಸಿಎಂ ಯಡಿಯೂರಪ್ಪನವರಿಗೆ ೪೦ ಲಕ್ಷ ರೂ. ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಇಂತಹ ಅಪರೂಪದ ನಟ ಪುನೀತ್ ಇಲ್ಲ ಎನ್ನುವದು ತುಂಬ ನೋವು ತರಿಸುತ್ತಿದೆ ಎಂದು ಹೇಳಿದರು.

Contact Your\'s Advertisement; 9902492681

ಸಾಮಾಜಿಕ ಚಿಂತಕ ಈರಣ್ಣ ಕಾರ್ಗಿಲ್ ಮಾತನಾಡಿ,ಬಾಲ್ಯದಲ್ಲಿಯೇ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ನಟ ಪುನೀತ್ ರಾಜಕುಮಾರ ಆಗಿದ್ದರು. ಪುನೀತ್ ಅವರು ನಾಡಿನಲ್ಲಿ ಅಪಾರ ಸಮಾಜ ಸೇವೆ ಕೈಗೊಂಡಿದ್ದರೂ ಆ ಕುರಿತು ಅವರು ಎಲ್ಲೂ ಪ್ರಚಾರಗಿಟ್ಟಿಸಿಕೊಂಡಿಲ್ಲ. ಇದು ಅವರಲ್ಲಿರುವ ಮೇರುಗುಣಕ್ಕೆ ಸಾಕ್ಷಿ. ಪುನೀತ್ ಅವರು ನಾಡಿನ ಆಸ್ತಿಯಾಗಿದ್ದರೂ ಅವರಿಲ್ಲದ ನಾಡು ದುಃಖದಲ್ಲಿ ಮುಳುಗಿದೆ. ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ ಪಾಟೀಲ, ವಿಜಯಕುಮಾರ ಗುತ್ತೆದಾರ, ಯಲ್ಲಾಲಿಂಗ ಪೂಜಾರಿ, ಭೀಮಯ್ಯ ಗುತ್ತೆದಾರ,ಉಮೇಶ ಗುತ್ತೆದಾರ,ಈರಪ್ಪ ಹೂಗಾರ,ಶಿವಕುಮಾರ ಗುತ್ತೆದಾರ, ಕರಣ್ ಗುತ್ತೆದಾರ,ಶಿವಕುಮಾರ ಭೋಸಗಾ, ಚಂದ್ರಕಾಂತ ಗುತ್ತೆದಾರ, ಬಸವರಾಜ ಗುತ್ತೆದಾರ,ಶಿವಕುಮಾರ ಭಜಂತ್ರಿ, ಬಸವರಾಜ ಜಾಮಗೊಂಡ ಇತರರು ಇದ್ದರು.

ಮುಂಚಿತವಾಗಿ ಎರಡು ನಿಮಿ? ಮೌನಾಚರಣೆ ಮಾಡುವ ಮೂಲಕ ಪುನೀತ್ ಅವರ ಆತ್ಮಕ್ಕೆ ಶಾಂತಿ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here