ಚಿಂಚೋಳಿ : ತಾಲೂಕು ಆಡಳಿತ ಹಾಗೂ ಪುರಸಭೆ ಯವರ ಸಂಯುಕ್ತಾಶ್ರಯದಲ್ಲಿ ಕನ್ನಡ ಉಳಿಸಿ ಕನ್ನಡದ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಚಿಂಚೋಳಿ ಪುರಸಭೆ ಅಧ್ಯಕ್ಷೆ ಜಗದೇವಿ ಶಂಕರರಾವ ಗಡಂತಿ ಉದ್ಘಾಟಿಸಿದರು.
ಚಿಂಚೋಳಿಯ ಮುಖ್ಯರಸ್ತೆಯಲ್ಲಿ ಶಾಲಾ ಮಕ್ಕಳು, ಸಿಬ್ಬಂದಿ ವರ್ಗದವರು ಜಾಗೃತಿ ಜಾಥಾದಲಿ, ಕನ್ನಡ ಉಳಿಸಿ ಕನ್ನಡವನ್ನು ಬೆಳೆಸಿ ನಾಮಫಲಕಗಳೂಂದಿಗೆ , ಕನ್ನಡ ಉಳಿಸಿ ಕನ್ನಡವನ್ನು ಬೆಳೆಸಿ ಜಯ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ್ ಧನ್ನಿ ಮಾತನಾಡಿ ಎಲ್ಲಾ ಅಂಗಡಿಗಳ ಮುಂದೆ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಬೇಕು, ಕನ್ನಡ ಉಳಿಸಿ ಕನ್ನಡವನ್ನು ಬಳಸಿ, ಪ್ಲಾಸ್ಟಿಕ್ ನಿಷೇಧಿಸಬೇಕು ಎಲ್ಲರೂ ಇದನ್ನು ಕೈಜೋಡಿಸಬೇಕು. ಸಾರ್ವಜನಿಕರಲ್ಲಿ ಡೆಂಗು ಜ್ವರ ಬಗ್ಗೆ ಚಿಕಂಗುನ್ಯ ನಿಯಂತ್ರಣ , ಡೆಂಗು ಜ್ವರ ಲಕ್ಷಣಗಳು, ರೋಗಕ್ಕೆ ಚಿಕಿತ್ಸೆ, ರೋಗದ ನಿಯಂತ್ರಣ, ಬಗೆ ಜನರಲ್ಲಿ ಅರಿವು ಮೂಡಿಸಿದರು.
ನಗರದಲ್ಲಿ ಉಚಿತವಾಗಿ ಕರೋನಾ ಲಸಿಕೆ ನಿಡುತಿದ್ದು ದಯವಿಟ್ಟು ಇದರ ಸದುಪಯೋಗ ಪಡೇದುಕೋಳ್ಳಿ.ಕರೋನಾ ಲಸಿಕೆ ಬಗ್ಗೆ ಭಯ ಬೇಡಾ.ನಾವು ಸಹಾ ತೇಗೆದುಕೊಂಡಿದ್ದೆವೆ ನೀವು ಸಹಾ ತಗೇದುಕೋಳ್ಳಿ . ಹಾಗೆ ಕಸವನ್ನು ಹೊರಗಡೆ ಹಾಕದೆ ಒಂದು ಕಡೆ ಶೇಖರಣೆ ಮಾಡಿ ಪುರಸಭೆಯ ಕಸವನ್ನು ವಯ್ಯುವ ವಾಹನದಲ್ಲಿ ಹಾಕಬೇಕು ಯಂದು ಸೂಚಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸೈಯದ್ ಶಬ್ಬೀರ್, ವೆಂಕಟೇಶ್ ಬೀರಪ್ಪ, ಏಜಾಜ್, ಗುಂಡಪ್ಪ,ಜಗನ್ನಾಥ್ ಶಾಲಾ ಮಕ್ಕಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.