ಸಿಯುಕೆಯಲ್ಲಿ ವಿಭಿನ್ನವಾಗಿ ಕನ್ನಡ ರಾಜೋತ್ಸವ ಆಚರಣೆ

0
18

ಕಲಬುರಗಿ: ಸಿಯುಕೆಯು ನವೆಂಬರ್‌ ಒಂದ ರಂದು ವಿಶ್ವವಿದ್ಯಾಲಯದಲ್ಲಿ ಕನ್ನಡರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿದೆ. ಕಲ್ಯಾಣಕರ್ನಾಟಕ ಕೃಷಿ, ಮಾನವ ಸಂಪನ್ಮೂಲ ಹಾಗು ಸಾಂಸ್ಕೃತಿಕ ಸಂಘ, ಕಲಬುರಗಿಯ ಅಧ್ಯಕ್ಷರಾಗಿರುವ ಬಸವರಾಜ ಪಾಟೀಲ್, ಸೇಡಂ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕರ್ನಾಟಕಕೇಂದ್ರೀಯ೩೧ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಯಣ ಅವರುಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಕುಲಸಚಿವ ಪ್ರೊ. ಬಸವರಾಜ್‌ಡೋಣೂರಅವರುಕಾರ‍್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

Contact Your\'s Advertisement; 9902492681

ಇದೇ ಸಂದರ್ಭದಲ್ಲಿಉತ್ತಮ ಸಂಶೋಧಕ ಪ್ರಶಸ್ತಿ’ಯನ್ನು ಪ್ರಧಾನ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ನೀಡುತ್ತಿರುವ ಪ್ರಶಸ್ತಿಗೆ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಡಾಎನ್ ಸಂದೀಪ್‌ಅವರುಆಯ್ಕೆಯಾಗಿದ್ದಾರೆ. ಅವರ ಶೈಕ್ಷಣಿಕ ಸಂಶೋಧನೆಯನ್ನು ಗುರುತಿಸಿ ಸಮಿತಿಯುಡಾ ಸಂದೀಪ್‌ಅವರನ್ನು ಮೊದಲ ಅತ್ಯುತ್ತಮ ಸಂಶೋಧನಾ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಯು.ಎಸ್.ಎಯ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತುಎಲ್ಸೆವಿಯರ್ ಬಿವಿ ನೆದಲ್ಯಾಂಡ್ಸ್ ಮೂಲದ ಪ್ರಕಾಶನಕಂಪನಿಯು ಸಿದ್ಧಪಡಿಸಿದ ವಿಶ್ವದಅಗ್ರ ೨% ವಿಜ್ಞಾನಿಗಳ ಪಟ್ಟಿಯಲ್ಲಿ ಸತತಎರಡನೇ ಬಾರಿಗೆಡಾ.ಸಂದೀಪ್ ಕಾಣಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿರುವಡಾ ಸಂದೀಪ್‌ಅವರನ್ನು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here