ಕಲಬುರಗಿ: ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವ್ಯವಹಾರಿಕ ದೃಷ್ಟಿಕೋನ ಹೆಚ್ಚುತ್ತಿದೆ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ತೊಡಗಿರುವ ಹೊತ್ತಿನಲ್ಲಿ ಮಾನವೀಯ ಸಂಬಂಧಗಳು ಬಲಪಡಿಸಲಾಗುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ. ದಯಾನಂದ ಅಗಸರ ಹೇಳಿದರು.
ಮತೊಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ಭಾನುವಾರ ನಗರದ ಕಲಾ ಮಂಡಳ ದಲ್ಲಿ ಹಮ್ಮಿಕೊಂಡಿದ್ದ ಐದನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತು ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ನಮ್ಮೊಳಗಿನ ಮಾನವ ಸಂಬಂಧಗಳು ದೂರವಾಗಬಾರದು ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಶಿತಿಲ್ ವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಪರಿವಾರಿಕ ವಾತಾವರಣ ಸೃಷ್ಟಿಯಾಗಬೇಕಿದೆ. ನಮ್ಮತನ ಮಾತ್ರ ನಮ್ಮ ಸಂಸ್ಕೃತಿಯ ಉಳಿವು ಸಾಧ್ಯ ಎಂದರು.
ತಾಯಿ ಪರಿವಾರದ ಕೇಂದ್ರ ಬಿಂದು ಆಕೆಯನ್ನು ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಮಕ್ಕಳಿಗಾಗಿ ತನ್ನ ಬದುಕೆಲ್ಲ ಸವೆಸುವ ತಾಯಿ ಋಣ ತೀರಿಸಲು ಯಾವತ್ತಿಗೂ ಸಾಧ್ಯವಿಲ್ಲ ಅಣ್ಣ-ತಮ್ಮ ಅಕ್ಕ-ತಂಗಿ ಚಿಕ್ಕಪ್ಪ ದೊಡ್ಡಪ್ಪ ಸೇರಿದಂತೆ ಇತರೆ ಸಂಬಂಧಗಳು ಮತ್ತೆ ಗ ಟ್ಟಿಕೊಳ್ಳಬೇಕಿದೆ. ಇವತ್ತಿನ ಸ್ವಾರ್ಥ ಬದುಕಿನಲ್ಲಿ ಕಡಿಮೆಯಾಗುತ್ತಿರುವುದು ನಮ್ಮ ಸಂಕೇತವಾಗಿದೆ ಎಂದು ಹೇಳಿದರು.
ಅತ್ತಿವೇರಿ ಬಸವ ಧಾಮದ ಪೂಜಶ್ರೀ ಬಸವೇಶ್ವರಿ ಮಾತಾಜಿ ಮಾತನಾಡಿ, ಅವ್ವನಿಲ್ಲದ ಬದುಕು ಉ ಹಿಸಿಕೊಳ್ಳುವುದು ಕಷ್ಟಸಾಧ್ಯ. ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಾಯಿ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಬಸವರಾಜ ಕೊನೇಕ್ ಅವರು ಡಾ.ಅಶೋಕ ಕುಮಾರ ಮಟ್ಟಿ ದಂಪತಿಗಳು ರಚಿಸಿರುವ 7 ಪುಸ್ತಕಗಳ ಬಿಡುಗಡೆ ಮಾಡಿದರು.
ರುದ್ರಾಣಿ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ರವೀಂದ್ರ ಮಾಲಿಪಾಟೀಲ್ ಡಾ. ವಿಜಯಕುಮಾರ್ ಪರುತೆ, ಕಾಶಿಬಾಯಿ ವಿಶ್ವನಾಥ ಹರಕಂಚಿ, ಶಂಕರಯ್ಯ ಸ್ವಾಮಿ ಹಿರೇಮಠ, ಸಂಗಪ್ಪ ಚಿಗೋಣ, ನಿಂಗಶೇಟ್ಟೆಪ್ಪ ರಾಂಪುರ, ಶರಣಗೌಡ ಪಾಟೀಲ್ ಪಾಳಾ , ಬಿ ಎಚ್. ನಿರಗುಡಿ ಡಾ. ನಾಗಪ್ಪ ಗೋಗಿ, ಡಾ. ಎನ್. ಎಚ್ ಪಾಟೀಲ,ಕುಪೇಂದ್ರ ಪಾಟೀಲ್, ವಿಶ್ವನಾಥ್ ಮಂಗಲಗಿ, ಅರುಣ್ ಕುಮಾರ್ ಲಗಶೆಟ್ಟಿ, ಚಿ. ಸಿ ನಿಂಗಣ್ಣ, ಡಾ. ಮಲ್ಲಿಕಾರ್ಜುನ, ಬಸವರಾಜ ವಡ್ಡನಕೇರಿ ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಡಾ. ಪದ್ಮಿನಿ ನಾಗರಾಜು, ಚಾಂದ್ ಪಾಷ, ಸಿದ್ದರಾಮಪ್ಪ ಮೂಲಗೆ, ಬಿ.ಪಿ ಹೂಗಾರ್, ಡಾ. ಶಾಂತಾ ಅಸ್ಟಿಗೆ, ವಿಶ್ವೇಶ್ವರಯ್ಯ ಟಿ ಎನ ಅವರಿಗೆ 2021 ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಅಂಬಾರಾಯ ಮಡ್ಡೆ ಕಾರ್ಯಕ್ರಮ ನಿರೂಪಿಸಿದರು.