ಆಳಂದ: ಗಡಿನಾಡಿನಲ್ಲಿ ಗನ್ನಡಿಗರು, ಶೈಕ್ಷಣಿಕ, ಆರೋಗ್ಯ, ಸಾಹಿತ್ಯ ಸೇರಿದಂತೆ ವಲಯದಲ್ಲಿ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಿಶೇಷವಾಗಿ ಆರೋಗ್ಯದ ಸಮಸ್ಯೆ ಬಂದಾಗ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ನೆರೆಯ ಮಹಾರಾಷ್ಟ್ರ ಸೇರಿ ಜಿಲ್ಲಾ ಕೇಂದ್ರಗಳಿಗೆ ಹೋಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ ಚಿಕಿತ್ಸೆ ನೀಡಿದರೆ ಬಡವರಿಗೆ ನೆರವಾಗುತ್ತದೆ. ಈ ನಿಟ್ಟನಲ್ಲಿ ಆಸ್ಪತ್ರೆಯ ವೈದ್ಯರು ಮುಂದಾಗಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ಅವರು ಮನವಿ ಮಾಡಿದರು.
ಸೋಮವಾರ ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಘಟಕದ ಆಶ್ರಯದಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವ ನಿಮಿತ್ತ ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಕೊರೊನಾ ಸಮಯದಲ್ಲಿ ಉತ್ತಮ ಕಾರ್ಯ ಮಾಡಿದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸಾಮಾನ್ಯ ದಿನಗಳಲ್ಲೂ ರೋಗಿಗಳಿಗೆ ಉತ್ತಮ ಸೇವೆ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಸಹ ಆಸ್ಪತ್ರೆಯ ಕುಂದು ಕೊರತೆಗಳನ್ನು ಆಲಿಸಬೇಕಾಗಿದೆ ಎಂದರು.
ವೇದಿಕೆಯ ತಾಲೂಕು ಅಧ್ಯಕ್ಷ ನಾಗರಾಜ ಘೋಡಕೆ, ಉಪಾಧ್ಯಕ್ಷ ಸುನೀಲ ಐರೋಡಗಿ, ಪ್ರಧಾನ ಕಾರ್ಯದರ್ಶಿ ಶರಣ ಕುಲಕರ್ಣಿ ಅವರು ಮಾತನಾಡಿರು.
ವೇದಿಕೆಯ ವಲಯ ಅಧ್ಯಕ್ಷ ಧರೆಪ್ಪ ಜಕಾಪೂರೆ, ನಿಂಬರಗಾ ವಲಯ ಅಧ್ಯಕ್ಷ ನೀಲಕಂಠ ಶೇರಿಕಾರ, ಚೆಕಪೋಸ್ಟ್ ಅಧ್ಯಕ್ಷ ದರ್ಶನ ಐರೋಡಗಿ, ಮಲ್ಲು ಕೋರಳ್ಳಿ, ಪ್ರಸಾದ ಮಂಠಾಳೆ, ಗಣಪತಿರಾವ್ ಪಾಟೀಲ, ಶಾಂತವೀರ ನಾವದಗಿ ಮತ್ತಿತರು ಉಪಸ್ಥಿತರಿದ್ದರು.
ಇದೇ ವೇಳೆ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಚಂದ್ರಕಾಂತ ನರಬೋಳೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ರೋಗಿಗಳ ಸೇವೆಯ ದೇವರ ಸೇವೆಯಂದು ಒಟ್ಟು ಸಿಬ್ಬಂದಿಗಳ ಮೇಲೆ ನಿಗಾವಹಿಸಿ ಕಾರ್ಯನಿರ್ವಹಿಸಸಲಾಗುತ್ತದೆ. ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಈ ವೇಳೆ ಇನ್ನಿತರ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.