ಸುರಪುರ: ಅಖಿಲ ಕರ್ನಾಟಕ ಕೊಲಿ,ಕಬ್ಬಲಿಗ ಬುಡಕಟ್ಟು ಸುಧಾರಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಲಚ್ಚಪ್ಪ ಜಮಾದಾರ್ ರವರ ಸಹೋದರ, ಕೊಲಿ,ಕಬ್ಬಲಿಗ ಸಮಾಜದ ಯುವ ಮುಖಂಡರಾದ ದುಂಡಪ್ಪ ಜಮಾದಾರ್ ರವರ ಮೇಲೆ ಕಲ್ಬುರ್ಗಿ ನಗರದ ಚೌಕ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಆರು ಜನ ಪೋಲಿಸ್ ಸಿಬ್ಬಂದಿಯವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮಂಗಳವಾರ ಅಖಿಲ ಕರ್ನಾಟಕ ಕೋಲಿ ಕಬ್ಬಲಿಗ ಅಂಬಿಗ ಬೋಯಿ ಬೆಸ್ತ ಬುಡಕಟ್ಟು ಹೋರಾಟ ಸಂಘದಿಂದ ತಹಸೀಲ್ದಾರ ಕಚೇರಿ ಮುಂದೆ ಕಬ್ಬಲಿಗ ಸಮುದಾಯದ ಅನೇಕ ಮುಖಂಡರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಖಿಲ ಕರ್ನಾಟಕ ಕೋಲಿ ಕಬ್ಬಲಿಗ ಅಂಬಿಗ ಬೋಯಿ ಬೆಸ್ತ ಬುಡಕಟ್ಟು ಹೋರಾಟ ಸಂಘದಿಂದ ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ನಮ್ಮ ಕಬ್ಬಲಿಗ ಸಮುದಾಯದ ಮುಖಂಡರಾದ ದುಂಡಪ್ಪ ಜಮಾದಾರ್ ಅವರ ಮೇಲೆ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ವಿನಾಕಾರಣ ಹಲ್ಲೆ ನಡೆಸಿದ ಪೊಲೀಸ್ ಇನ್ಸ್ಪೇಕ್ಟರ್ ಹಾಗು ಪೊಲೀಸ್ ಪೇದೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ನಂತರ ಮುಖ್ಯಮಂತ್ರಿಗಳು ಹಾಗು ಗೃಹ ಸಚಿವರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುರಪುರ ತಾಲೂಕು ಗೌರವ ಅಧ್ಯಕ್ಷರಾದ ಹೊನ್ನಪ್ಪ ತಳವಾರ್, ತಾಲೂಕು ಅಧ್ಯಕ್ಷರಾದ ದೇವಿಂದ್ರಪ್ಪಗೌಡ ಬಿ ಮಾಲಿ ಪಾಟೀಲ್ ದೇವರಗೋನಾಲ, ತಾಲೂಕು ಉಪಾಧ್ಯಕ್ಷರಾದ ವೆಂಕಟೇಶ ದೊಡ್ಡಮನಿ, ವೆಂಕಟೇಶ ಚಟ್ನಳ್ಳಿ, ಖಜಾಂಚಿ ಯಲ್ಲಪ್ಪ ನಗನೂರ್, ನಗರ ಘಟಕದ ಅಧ್ಯಕ್ಷರಾದ ಮಲ್ಲು ವಿಷ್ಣು ಸೇನಾ , ಲಕ್ಷ್ಮಣ್ಣ ಕಮತಗಿ, ವಾರ ಸಿದ್ದಾಪುರ, ದೇವಿಂದ್ರಪ್ಪ ಕವಡಿಮಟ್ಟಿ, ದೊಡ್ಡಪ್ಪ ಮುನ್ನೂರು, ಮಂಜುನಾಥ ಮುದ್ನೂರು, ಗೋಪಾಲಸಿಂಗ್ ಹಜಾರೆ, ಕೆಂಭಾವಿ ಹೋಬಳಿ ಅಧ್ಯಕ್ಷರಾದ ಕೃಷ್ಣಾ ಪರಸನಹಳ್ಳಿ, ಪ್ರಶಾಂತ ಜೈನಾಪೂರ, ಜೆಟ್ಟಪ್ಪಾ ಸದಬ, ಮಲ್ಲಿನಾಥಗೌಡ ಹೆಗ್ಗನದೊಡ್ಡಿ, ಸಣ್ಣ ಯಲ್ಲಪ್ಪ ರತ್ತಾಳ, ದೊಡ್ಡ ಯಲ್ಲಪ್ಪ ರತ್ತಾಳ, ಆದಪ್ಪ ರತ್ತಾಳ, ಗೋವಿಂದಪ್ಪ ಕವಡಿಮಟ್ಟಿ ,ಯಲ್ಲಪ್ಪ ತೆಲ್ಕರ್, ನಿಂಗು ಕಮತಗಿ ವಾರಿ ಸಿದ್ದಾಪುರ, ಮಲ್ಲಪ್ಪ ಜಿಗಳಿ ಸೇರಿದಂತೆ ಅನೇಕರಿದ್ದರು.