ಡಾ.ನಂಜುಂಡಪ್ಪ ವರದಿಯ ಸಮಗ್ರ ಅನುಷ್ಠಾನ ಅಗತ್ಯ

0
20

ಕಲಬುರಗಿ: ರಾಜ್ಯದ ಹಿಂದುಳಿದ 114 ತಾಲ್ಲೂಕುಗಳಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಪತ್ತೆ ಹಚ್ಚಿ ಯಾವ್ಯಾವ ತಾಲ್ಲೂಕು ಯಾವ್ಯಾವ ಕ್ಷೇತ್ರದಲ್ಲಿ ಹಿಂದುಳಿದಿವೆ, ಆ ತಾಲ್ಲೂಕುಗಳಲ್ಲಿ ಯಾವ್ಯಾವ ರೀತಿಯಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು ಎಂದು ವರದಿ ನೀಡಿದ ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವಿಸ್ತೃತ ವರದಿಯನ್ನು ಸಮಗ್ರ ವಾಗಿ ಅನುಷ್ಠಾನಕ್ಕೆ ತರಲು ಸರ್ಕಾರಗಳು ಇಚ್ಛಾಶಕ್ತಿ ಹೊಂದಬೇಕು ಎಂದು ಷ.ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ನಗರದ ಕಲಾ ಮಂಡಳದಲ್ಲಿ ಹೆಚ್. ಶಿವರಾಮೇಗೌಡರ ಕರವೇ ಆಯೋಜಿಸಿದ್ದ ೬೬ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಹಿಂದುಳಿದ ತಾಲ್ಲೂಕುಗಳ ಬವಣೆಗಳು ನೀಗಿ ಅವು ಅಭಿವೃದ್ಧಿ ಹೊಂದಿ ಕಂಗೊಳಿಸಬೇಕು. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮತ್ತು ಡಾ. ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ಸರ್ಕಾರ ಗಂಭೀರ ಪ್ರಯತ್ನ ನಡೆಸಬೇಕು ಎಂದ ಅವರು ಕಲಬುರಗಿಗೆ ರಾಜಕೀಯವಾಗಿ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಇಲ್ಲದೇ ಹೋದಲ್ಲಿ ಜನರೊಂದಿಗೆ ಮಠಾಧೀಶರು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರದಿಂದ ನೀಡುವ ಪ್ರಶಸ್ತಿಯಷ್ಟೇ ಸಂಘ ಸಂಸ್ಥೆಗಳು ಪ್ರದಾನ ಮಾಡುವ ಪ್ರಶಸ್ತಿಯೂ ಅಷ್ಟೇ ಮಾನ್ಯತೆ ಇದೇ. ಪ್ರಾಮಾಣಿಕರಿಗೆ ಎಲ್ಲ ಕಡೆಯೂ ಮಾನ್ಯವಿದೆ. ಪ್ರಾಮಾಣಿಕತೆ ಮೈಗೂಡಿಸಿ ಕೊಳ್ಳಿ ಎಂದು ಹೇಳಿದರು.

ಹೆಚ್. ಶಿವರಾಮೇಗೌಡರ ಕರವೇ ಸಂಘಟನೆಯೂ ಜಿಲ್ಲೆಯಲ್ಲಿ ಉತ್ತಮ ಮತ್ತು ಪ್ರಸಂಶಾರ್ಹವಾಗಿ ಕಾರ್ಯಕ್ರಮ ಮಾಡುತ್ತಿದ್ದು. ನಗರ ಮತ್ತು ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡುತ್ತಿದೆ. ಪ್ರಾಮಾಣಿಕ ಘಟನೆಗಳಿಗೆ ತಾವು ಬೆನ್ನುಲುಬಾಗಿ ನಿಲ್ಲುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯಿಂದ ಕೇವಲ ಒಬ್ಬರನ್ನೇ ಆಯ್ಕೆ ಮಾಡಿದೆ. ಇನ್ನೂ ಹಲವಾರು ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ದುಡಿದವರು, ದುಡಿಯುತ್ತಿರುವವರು ಬೇಕಾದಷ್ಟು ಜನರಿದ್ದರು. ಆದರೆ ಒಬ್ಬರನ್ನೆ ಆಯ್ಕೆ ಮಾಡಿರುವುದಕ್ಕೆ ವಿಷಾದಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಲಕ್ಷ್ಮಣ ದಸ್ತಿ, ಡಾ. ಎಸ್. ಎಸ್. ಪಾಟೀಲ್, ಡಾ. ಶಿವಶಂಕರ ಬಿರಾದಾರ, ಪರ್ವೀನಾ ಸುಲ್ತಾನಾ, ಡಾ. ಪಿ. ಪರಶುರಾಮ, ಕೃಷ್ಣಾ ಗೌಳಿ, ಸಂದೀಪ ಹುಲಿ, ದೇವೀಂದ್ರ ಕರಗುಂಡಗಿ, ಚಂದ್ರಶೇಖರ ಕವಲಗಾ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಸ್.ಬಿ.ಯು ಕುಲಸಚಿವ ದಿ.ಡಾ. ಲಿಂಗರಾಜ ಶಾಸ್ತ್ರೀ ಅವರಿಗೆ ನುಡಿ ನಮನದಲ್ಲಿ ಶಾಸ್ತ್ತೀ ಅವರ ಕುರಿತು ಬರೆದ ಗೀತೆಯನ್ನು ಡಾ. ಶಿವಶಂಕರ ಬಿರಾದಾರ ಸುಶ್ರಾವ್ಯವಾಗಿ ಹಾಡಿದರು. ಇದೇ ಸಂದರ್ಭದಲ್ಲಿ ನಟ ಪುನೀತ ರಾಜಕುಮಾರ್ ಅವರ ನಿಧನಕ್ಕೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಧುರಿಣರಾದ ಶಾಮರಾವ್ ಪ್ಯಾಟಿ, ಜಗನ್ನಾಥ ಸೂರ್ಯವಂಶಿ. ಖ್ಯಾತ ವೈದ್ಯ ಡಾ. ಸಂತೋಷ ಮಂಗಶೆಟ್ಟಿ, ಒಕ್ಕೂಟದ ಜಿಲ್ಲಾಧ್ಯಕ್ಷ ಸಚಿನ್ ಫರತಾಬಾದ, ಸಂಘಟನೆಯ ಮುಖಂಡರಾದ ರವಿ ವಾಲಿ, ಪ್ರಹ್ಲಾದ್ ಹಡಗಿಲಕರ್, ಚರಣರಾಜ ರಾಠೋಡ, ಯಲ್ಲಯ್ಯ ಗುತ್ತೇದಾರ, ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here