ತೊರ‍್ನಹಳ್ಳಿ: ಮಾಲೂರು ತಾಲ್ಲೂಕಿನ ಕಸಬಾ ಹೋಬಳಿ ತೊರ‍್ನಹಳ್ಳಿ ಗ್ರಾಮ ಪಂಚಾಯತಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕನ್ನಡ ರಾಜ್ಯೋತ್ಸವ, ಕನ್ನಡ ಭಾಷೆ ಒಂದು ದಿನಕ್ಕೆ ಸೀಮಿತವಾಗಿಲ್ಲ, ಅದು ವರ್ಷ ಪೂರ್ತಿಯಾಗಿ ನಮಗೆ ಕನ್ನಡದ ಬಗ್ಗೆ ಗೌರವ, ಅಭಿಮಾನ ಇರಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವು ಸದಾ ಸಿದ್ದರಾಗಿರಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಮುನಿಯಪ್ಪ, ಗ್ರಾಮ ಪಂಚಾಯಿತಿ ಪಿಡಿಒ ಎಚ್.ಜಿ.ಚೌಡರೆಡ್ಡಿ, ಉಪಾಧ್ಯಕ್ಷರಾದ ಸುಮಿತ್ರ ಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ, ಎ.ಮಂಜುನಾಥ್, ಸಿ.ವಿ. ವೆಂಕಟರಮಣಪ್ಪ, ಸೊಣ್ಣನಾಯಕನಹಳ್ಳಿ ನಾಗರಾಜಪ್ಪ, ಟಿ.ವಿ.ನಾರಾಯಣಸ್ವಾಮಿ, ವಿ.ವೀರಭದ್ರ, ನಾಗರತ್ನಮ್ಮ, ವೆಂಕಟರಮಣಪ್ಪ, ತಿಮ್ಮರಾಯಪ್ಪ, ಶಿಲ್ಪ.ಜಿ.ಎ, ಸುಜಾತ, ಬಿ.ಎಂ.ಎನ್. ನಾಗರಾಜ, ಅಮರಾವತಿ ಸಂತೋಷ್, ಚಂದ್ರಶೇಖರ್, ಗೇರುಪುರ ಸಂತೋಷ್, ಬೆಳ್ಳೂರಪ್ಪ ಹೆಡಗಿನಬೆಲೆ, ವಿ.ಮುರುಳಿ, ಬಿಲ್ ಕಲೆಕ್ಟರ್ ಎಂ.ನಾಗರಾಜ, ಟಿ.ಕೆ.ಮುನಿರಾಜ ಹಾಗೂ ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.