ಕಲಬುರಗಿ: ಕರ್ನಾಟಕ ರಾಜ್ಯ ಎಸ್.ಸಿ/ಎಸ್ಟಿ ಗುತ್ತಿಗೆದಾರರ ಸಂಘ ಸಭೆಯನ್ನು ನಗರದ ಹಳೆ ಅತಿಥಿಗೃಹದಲ್ಲಿ ಜುಲೈ 14 ರಂದು ಬೆಳಿಗ್ಗೆ 11.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಉದಯಕುಮಾರ ಎಸ್.ಖೇಳಗಿಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಸ್ಸಿ./ಎಸ್ಟಿ ಗುತ್ತಿಗೆದಾರರ ಮೇಲೆ ಕೆಲ ಶಾಸಕರು ಹಾಗೂ ಕೆಲ ಇಲಾಖೆಯ ಅಧಿಕಾರಿಗಳು ನಡೆಸುತ್ತಿರುವ ದಬ್ಬಾಳಿಕೆಯನ್ನು ಗುತ್ತಿಗೇದಾರರು ತಡೆಯಲು ಅನುಸರಿಸಬೇಕಾದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸುವಗೋಸ್ಕರ ಗುತ್ತಿಗೆದಾರರ ಸಭೆಯನ್ನು ಕರೆಯಲಾಗಿದ್ದು ಜಿಲ್ಲೆಯ ಎಲ್ಲಾ ತಾಲೂಕಿನ ಗುತ್ತಿಗೆದಾರರು ಸಭೆಯಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9844061449/ 897869630 ಗೆ ಸಂಪರ್ಕಿಸಬಹುದೆಂದು ಖೇಳಗಿಕರ್ ತಿಳಿಸಿದ್ದಾರೆ.