ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳು ಸೇರಿದಂತೆ ಅನೇಕ ಮುಖಂಡರ ಜಿಲ್ಲಾ ಜಾತಾತೀತ ಜನತಾ ದಳ ಪಕ್ಷಕ್ಕೆ ಸೇರ್ಪಡೆಯಾದರು.
ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸೀರ ಹುಸೇನ ಉಸ್ತಾದ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಜೆ.ಡಿ.ಎಸ್. ಪಕ್ಷ ಬಲಪಡಿಸಿ ಮತ್ತೆ ರಾಜ್ಯದಲ್ಲಿ ಜೆಡಿಎಸ್ ಸರಕಾರ ತರಲು ಜನರ ಬಳಿ ತೆರಳಿ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ವಿನಂತಿಸಿಕೊಳ್ಳುತ್ತಾ ಎಲ್ಲಾ ಸಮುದಾಯಗಳ ಇರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ಥಾನ ಮಾನ ನೀಡುವದರೊಂದಿಗೆ ಪಕ್ಷ ಶಕ್ತಿ ತುಂಬುವ ಕಾರ್ಯ ಪ್ರಾರಂಭವಾಗಲಿದೆ. ಜೆಡಿಎಸ್ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಯಾರೇ ಬಂದರು ಪಕ್ಷದ ಬಾಗೀಲು ಸದಾ ತೆರೆದಿರುತ್ತದೆ ಎಲ್ಲರೂ ಒಟ್ಟಾಗಿ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಸಂಕಲ್ಪ ಮಾಡೋಣ ಎಂದು ಉಸ್ತಾದ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶ್ಯಾಮರಾವ ಸೂರನ್, ಮಾಜಿ ಮಹಾಪೌರರಾದ ಜಿ.ಎಸ್. ರಹಮತ್, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲೀಂ ಇನಾಮದಾರ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಉಪಾಧ್ಯಕ್ಷ ಶಿವಾನಂದ ಧ್ಯಾಮಗೊಂಡ, ಮಹಾದೇವಿ ಕೆಸರಟಗಿ, ರಾಜ್ಯ ಸೇವಾ ದಳದ ಕಾರ್ಯದರ್ಶಿ ವಲಸನಕುಮಾರ, ಶಿಸ್ತು ಸಮಿತಿ ಅಧ್ಯಕ್ಷ ಜಿಯಾವುದ್ದಿನ್, ಉತ್ತರ ಮಂಡಲ ಮಹಿಳಾ ಘಟಕದ ಅಧ್ಯಕ್ಷೆ ಪರವೀನ್ ಅತ್ತರ ನಡಗೌಡ, ಮುಖಂಡರಾದ ಸಂಗಾಣಿ ಕುಸನೂರ, ಬಸವರಾಜ, ಸವಿತಾ ಠಾಕೂರ, ಆನಂದ ಪಾಟೀಲ್, ಶ್ರೀಗಿರಿ, ನಾಗರಾಜ ರೇವಣಕರ, ಹಣಮಂತ ಇಟಗಿ, ನಾಗಣ್ಣಾ ವಾರದ, ಸುನೀಲಕುಮಾರ ಬಿರಾದಾರ ಇದ್ದರು.