ಕಲಬುರಗಿ: ಆಮ್ ಆದ್ಮಿ ಪಾರ್ಟಿ ನಗರ ಅಧ್ಯಕ್ಷ ಸಜ್ಜಾದ ಅಲಿ ಇನಾಮದಾರ ನೇತ್ರತ್ವದಲ್ಲಿ ರವಿವಾರ ಪಕ್ಷದ ಕಚೇರಿಯಲ್ಲಿ ಆಮ್ ಆದ್ಮಿ ಪಾರ್ಟಿ ಪಕ್ಷದ ಸಭೆ ನಡೆಸಿ ಈ ಸಭೆಯಲ್ಲಿ ಝೋನ್ 1 ರ ಅಧ್ಯಕ್ಷರಾಗಿ ಡಾ. ಅಬ್ದುಲ್ ಖಯುಮ, ಝೋನ್ 11 ರ ಮುಹಿಳಾ ಅಧ್ಯಕ್ಷರಾಗಿ ಚಂದ್ರ ಲೀಲಾ, ಝೋನ್ 11 ರ ಅಧ್ಯಕ್ಷರಾಗಿ ರಿಯಾಜ ಪಟೇಲ್ ರವರಿಗೆ ನೇಮಕ ಮಾಡಲಾಯಿತು.
ತೆಜಸ್ವಿನಿ ಸಿಂಧೆ, ಶಾಂತಲಿಂಗ ಕಾಂಬಳೆ, ಪಾನು ಪಾರಿತ, ಅಜೀಮ, ಸಬೂರ ಇವರುಗಳು ಕಾಂಗ್ರೇಸ್, ಮತ್ತು ಜೆಡಿಎಸ್ ಪಕ್ಷವನ್ನು ಬಿಟ್ಟು ಆಮ್ ಆದ್ಮಿ ಪಾರ್ಟಿ ಸೇರರ್ಪಡೆಯಾದರು.
ಸಜ್ಜಾದ ಅಲಿ ಇನಾಮದಾರ ಅವರು ಮಾತನಾಡಿ ಜನರ ಸಮಸ್ಯಗಳಾದ ಕುಡಿಯುವ ನೀರು, ಶಾಲೆ ವಿದ್ಯಾರ್ಥಿಗಳ ಫೀಸ ಸಮಸ್ಯಗಳು, ಕಲಬುರಗಿ ಮಹಾ ನಗರ ಪಾಲೀಕೆ ರವರು ಆಸ್ತಿ ಕರ ವೃಧಿಸಿದ ಬಗ್ಗೆ ಚರ್ಚಿಸಿ ಹೋರಾಟದ ಬಗ್ಗೆ ನಿರ್ಧರಿಸಲಾಗುವದು ಎಂದರು.