ಸುರಪುರ:ಭೂ ಮಾಪಕರಿಂದ ರೈತನಿಗಾದ ಅನ್ಯಾಯ ಸರಿಪಡಿಸುವಂತೆ ಡಿಎಸ್‍ಎಸ್ ಪ್ರತಿಭಟನೆ

0
41

ಸುರಪುರ: ನಗರದ ವೆಂಕಟಾಪುರ ಗ್ರಾಮದ ರೈತನೊಬ್ಬನಿಗೆ ಭೂ ಮಾಪಕರಿಂದ ಅನ್ಯಾಯವಾಗಿದ್ದು ಇದನ್ನು ಸರಿಪಡಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಸುರಪುರ ಹೋಬಳಿ ನಗರದ ವೆಂಕಟಾಪುರದ ಬಡ ರೈತ ತಾಯಪ್ಪ ಗೋಪಣ್ಣ ಹೆಮ್ಮಡಗಿ ಎಂಬುವವರ ಗುಡಿಹಾಳ ಜೆ.ಗ್ರಾಮದ ಸರ್ವೇ ನಂಬರ್ 33/1 ರಲ್ಲಿ ಒಟ್ಟು 8 ಎಕರೆ ಜಮೀನಿದ್ದು,ಇದರಲ್ಲಿ ವಾಡಿ ಗದಗ ರೈಲ್ವೆ ಯೋಜನೆಗಾಗಿ 5 ಎಕರೆ 10 ಗುಂಟೆ ಜಮೀನು ಗಡಿಯನ್ನು ಗುರುತಿಸಲಾಗಿದೆ.

Contact Your\'s Advertisement; 9902492681

ಆದರೆ ಭೂ ಮಾಪಕ ಕೇವಲ 1 ಎಕರೆ 36 ಗುಂಟೆ ದಾಖಲಾತಿ ಮಾಡಿ ಬಡ ರೈತನಿಗೆ ಅನ್ಯಾಯ ಮಾಡಿದ್ದಾರೆ.ಆದ್ದರಿಂದ ರೈತ ತಾಯಪ್ಪ ಹೆಮ್ಮಡಗಿಗೆ ಸೇರಿದ 8 ಎಕರೆ ಜಮೀನಿನ ದಾಖಲಾತಿ ತಯಾರಿ ಮಾಡಿಕೊಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಬಿಜಾಸಪುರ,ಬುದ್ಧಿವಂತ ನಾಗರಾಳ,ಜೆಟ್ಟೆಪ್ಪ ನಾಗರಾಳ,ಖಾಜಾಹುಸೇನ ಗುಡಗುಂಟಿ,ಬಾಗಪ್ಪ ದೇವಿಕೇರಿ,ದೇವಪ್ಪ ಪಟ್ಟೇದಾರ,ಮರಿಲಿಂಗಪ್ಪ ಹುಣಸಗಿ,ಮರಿಲಿಂಗಪ್ಪ ದೇವಿಕೇರಿ,ಮಹೇಶ ಸುಂಗಲ,ಮಹ್ಮದ್ ಹನೀಪ್,ಜಾವೇದ್ ಹುಸೇನಿ,ತಮ್ಮಣ್ಣ ಹೆಬ್ಬಾಳ,ಪರಶುರಾಮ ಚಿಕ್ಕನಹಳ್ಳಿ,ದೇವಪ್ಪ ಚಿಕ್ಕನಹಳ್ಳಿ ಸೇರಿದಂತೆ ರೈತ ತಾಯಪ್ಪ ಕುಟುಂಬಸ್ಥರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here