ಕಲಬುರಗಿ: ವಿಧಾನಪರಿಷತ್ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಇದೇ ನ. 10 ರ ಬುಧವಾರ ಜೇವರ್ಗಿ ತಾಲೂಕಿನ ಅಳಗುಂಡಗಿಯಲ್ಲಿ ನಡೆಸಲು ಉz್ದÉೀಶಿಸಲಾಗಿದ್ದ ತಮ್ಮ 5 ನೇಯ ಗ್ರಾಮ ವಾಸ್ತವ್ಯವನ್ನು ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ಮುಂದೂಡಿದ್ದಾರೆ.
ಚುನಾವಣಾ ಆಯೋಗದ ನಿದೇರ್ಶನದ ಪ್ರಕಾರ ನೀತಿ ಸಂಹಿತೆ ಜಾರಿಯಲಿz್ದÁಗ ಯಾವುದೇ ರೀತಿಯ ಸರಕಾರಿ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂಬ ನಿಯಮವಿದೆ.
ಹೀಗಾಗಿ ಇದೇ ನ. 10 ರಂದು ಅರಳಗುಂಡಗಿಯಲ್ಲಿ ನಡೆಯಲಿದ್ದ ತಮ್ಮ ಗ್ರಾಮ ವಾಸ್ತವ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಡಾ. ಅಜಯ್ ಸಿಂಗ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿz್ದÁರೆ.