ಶಹಾಬಾದ: ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ ಬುಧವಾರ ಭಾರತೀಯ ಜನತಾ ಪಾರ್ಟಿ, ಎಸ್.ಸಿ ಮೋರ್ಚಾದ ನಗರಾಧ್ಯಕ್ಷ ಸಂಜಯ ವಿಠಕರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ನಗರದ ನೆಹರು ವೃತ್ತದ ಬಳಿ ಸಿದ್ದರಾಮಯ್ಯ ಪ್ರತಿಕೃತಿ ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣು ವಸ್ತ್ರದ ಮತ್ತು ಚಂದ್ರಕಾಂತ ಗೊಬ್ಬೂರಕರ, ಸಿದ್ಧರಾಮಯ್ಯನವರು ಅಹಿಂದ ಸೋಗಿನಲ್ಲಿ ಜನತಾ ದಳವನ್ನು ತ್ಯಜಿಸಿ ಅಧಿಕಾರದ ದಾಹಕ್ಕಾಗಿ ಕಾಂಗ್ರೇಸ್ ಸೇರಿ, ಕಾಂಗ್ರೆಸ್‌ನಲ್ಲಿದ್ದ ವಿ.ಶ್ರೀನಿವಾಸ ಪ್ರಸಾದ ಹಾಗೂ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಹೆಚ್. ಮುನಿಯಪ್ಪಾ, ಮೊದಲಾದ ಹೆಸರಾಂತ ದಲಿತ ರಾಜಕಾರಣಿಗಳನ್ನು ಮುಖ್ಯಮಂತ್ರಿ ಗಾದಿಯಿಂದ ವಂಚಿಸಿ ಮುಖ್ಯಮಂತ್ರಿಯಾಗಿ ತಮ್ಮ ಮಗನನ್ನು ಕೂಡ ಶಾಸಕನಾಗಿ ಮಾಡಿದ ಸಿದ್ರಾಮಯ್ಯರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಕೂಡಲೇ ದಲಿತ ಸಮುದಾಯದ ಕ್ಷಮೆಯನ್ನು ಕೇಳಬೇಕು ಎಂದರು.
ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷರಾದ ಅಣವೀರ ಇಂಗಿನ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾನಂದ ಕುಂಬಾರ, ಎಸ್.ಸಿ.ಮೊರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಅಮರ ಕೋರೆ, ಸುಭಾ? ಕುಸಾಳೆ, ಉಮೇಶ ಪೋಚಟ್ಟಿ, ಸಂತೋಷ ಹುಲಿ, ಪ್ರಮುಖರಾದ ಕನಕಪ್ಪ ದಂಡಗುಲಕರ, ಸೂರ್ಯಕಾಂತ ವಾರದ, ಸುಭಾ? ಜಾಪೂರ, ಪರಶುರಾಮ ದಂಡಗುಲಕರ, ನಿಂಗಣ್ಣ ಹುಳಗೊಳಕರ, ಬಸವರಾಜ ಬಿರಾದಾರ, ನಗರಸಭೆಯ ಸದಸ್ಯರಾದ ಪಾರ್ವತಿ ಪವಾರ, ಅನೀಲ ದತ್ತಾ, ಅಣ್ಣಪ್ಪ ದಸ್ತಾಪೂರ, ಶಂಕರ ಭಗಾಡೆ, ಭೀಮಯ್ಯ ಗುತ್ತೆದಾರ, ಯುವ ಮೋರ್ಚಾ ಅಧ್ಯಕ್ಷ ದಿನೇಶ ಗೌಳಿ, ಶ್ರೀನಿವಾಸ ನೇದಲಗಿ,ರೇವಣಸಿದ್ಧ ಮತ್ತಿಮಡು, ಶರಣು ಕವಲಗಿ,ಪ್ರಭು ಹಳ್ಳಿ, ನಾರಾಯಣ ಕಂದಕೂರ,ಮನೋಹರ ಮೇತ್ರೆ, ರಾಮು ಕುಸಾಳೆ,ಶ್ರೀನಿವಾಸ ದೇವಕರ್,ಅರುಣ ದೇವಕರ್, ಅಂಬಾದಾಸ ಗುರೂಜಿ,ಯಲ್ಲಪ್ಪ ದಂಡಗುಲಕರ್,ದೇವೆಂದ್ರ ಯಲಗೋಡಕರ್,ದತ್ತು ಘಂಟಿ,ಯಲ್ಲಪ್ಪ ಜಾಲಹಳ್ಳಿ,ಬಸವರಾಜ ರ‍್ಯಾಪನೂರ,ಶ್ರೀಧರ ಜೋಷಿ, ಶಾಂತಕುಮಾರ ಮಾಣಿಕ,ನೀಂಗಾರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ಸೂಡಿ,ಲತಾ ಸಂಜೀವ, ಆರತಿ ಕೂಡಿ, ಶಶಿಕಲಾ ಸಜ್ಜನ್, ಪಾರ್ವತಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.