ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದಿಂದ ಹಮ್ಮಿಕೊಂಡಿದ್ದ ೧೭ನೇ ವರ್ಷದ ರವೇ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ನರಸಿಂಹ ನಾಯಕ (ರಾಜುಗೌಡ) ಉದ್ಘಾಟಿಸಿದರು.
ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಲಕ್ಷ್ಮೀಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಿದ್ದರಾಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡುಕೋಟೆ ಅಧ್ಯಕ್ಷತೆ ವಹಿಸಿದ್ದರು.ವೇದಿಕೆ ಮೇಲೆ ಮುಖಂಡರಾದ ರಾಜಾ ಮುಕುಂದ ನಾಯಕ್, ಕಿಶೋರ್ ಚಂದ್ ಜೈನ್,ಸಯ್ಯದ್ ಖಾದ್ರಿ,ಬಲಭಿಮನಾಯಕ ಬೈರಿಮಡ್ಡಿ, ಮಹೇಶ ಪಾಟೀಲ್,ವೇಣುಮಾಧವ ನಾಯಕ,ನರಸಿಂಹಕಾಂತ ಪಂಚಮಗಿರಿ,ಟಿ.ಎನ್.ಭೀಮುನಾಯಕ,ಶರಣು ನಾಯಕ ಬೈರಿಮಡ್ಡಿ ಹಾಗೂ ವಿಶೇಷವಾಗಿ ಸರಿಗಮಪ ಖ್ಯಾತಿಯ ಸುನೀಲ್ ಗಜಗೊಂಡ,ಸಾಕ್ಷಿ ಕಲ್ಲೂರ್ ಹಾಗೂ ಜ್ಞಾನೇಶ ಭಾಗವಹಿಸಿ ತಮ್ಮ ಗಾಯನದ ಮೂಲಕ ಎಲ್ಲರನ್ನು ರಂಜಿಸಿದರು.
ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ಭೀಮು ನಾಯಕ ಮಲ್ಲಿಬಾವಿ, ವೆಂಕಟೇಶ ಪ್ಯಾಪ್ಲಿ ಸೇರಿದಂತೆ ಸಹಸ್ರಾರು ಜನ ಕರವೇ ಕಾರ್ಯಕರ್ತರು ಹಾಗೂ ಕನ್ನಡಭಿಮಾನಿಗಳಿದ್ದರು.