ಅನುಭವ ಮಂಟಪ ಭಾರತದ ಮೊದಲ ಕಮ್ಯೂನಿಕೇಶನ್ ಸೆಂಟರ್: ರಂಜಾನ್ ದರ್ಗಾ

0
46

ಕಲಬುರಗಿ: ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಹಾಗೂ ಜ್ಞಾನಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತಿದ್ದು, ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅವರ 87ನೇ ಹುಟ್ಟು ಹಬ್ಬದ ಅಂಗವಾಗಿ ಐದು ದಿನದ ಕಾರ್ಯಕ್ರಮ ಹಮ್ಮಿಕೊಳ್ಖಲಾಗಿದೆ.‌ ಕಾರ್ಯಕ್ರಮ ಔಚಿತ್ಯ ಹಾಗೂ ಅರ್ಥಪೂರ್ಣವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ‘ಮೀಡಿಯಾ ವ್ಯಾಲ್ಯೂಸ್ ಇನ್ ದಿ ಪ್ರ ಸೆಂಟ್ ಸಿನೆರಿಯೋ’ ವಿಷಯ ಕುರಿತು ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಪತ್ರಕರ್ತ ರಂಜಾನ್ ದರ್ಗಾ ಮಾತನಾಡಿ, ಪ್ರಶ್ನೆ ಮಾಡುವ ನೈತಿಕ ಶಕ್ತಿ ಇರುವ ಪತ್ರಕರ್ತ ಮನುಷ್ಯರನ್ನು ಒಂದಾಗಿ ನೋಡುವ ಪರಿಪಾಠ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

12ನೇ ಶತಮಾನದ ಬಸವಣ್ಣನವರಂತೆ ಶರಣಬಸವೇಶ್ವರರು ಅರಿವನ್ನು ಬರವಣಿಗೆಯಲ್ಲಿ ತರಲಿಲ್ಲ. ಆದರೆ ಅರಿವನ್ನು ಆಚರಣೆಗೆ ತಂದರು.‌ ಅನುಭವ ಮಂಟಪ ಭಾರತದ ಮೊದಲ ಕಮ್ಯೂನಿಕೇಶನ್ ಸೆಂಟರ್ ಎಂದು ತಿಳಿಸಿದರು.

ವಚನಗಳು ಕೂಡ ಮೀಡಿಯಾಗಳೆ. ವಚನಗಳನ್ನು ಉಳಿಸಲು ಅವರು ಬಸವಕಲ್ಯಾಣದಿಂದ ಉಳವಿವರೆಗೆ ಮಾನವೀಯತೆಯ ಮಹತ್ವಾಕಾಂಕ್ಷೆ ಇಟ್ಟುಕೊಂಡು ನಡೆದು ನುಡಿದರು.

ಎಡಿಟರ್ ಆಗುವುದು ಸುಲಭ. ಆದರೆ ಪತ್ರಕರ್ತರಾಗುವುದು ಕಷ್ಟ. ಸರಳವಾಗಿ ಬರೆಯುವುದೂ ಕಠಿಣ. ಸತ್ಯ, ನ್ಯಾಯ, ನೀತಿ ಕಾಪಾಡಿಕೊಂಡು ಬರುವುದು ಪತ್ರಿಕೋದ್ಯಮದ ಮುಖ್ಯ ಧ್ಯೇಯವಾಗಿದೆ ಎಂದರು.ಅತಿಥಿಯಾಗಿದ್ದ ಶರಣಬಸವ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್ ಟಿ.ವಿ. ಶಿವಾನಂದನ್ ಮಾತನಾಡಿದರು.

ಡಾ.‌ ಸೀಮಾ ಪಾಟೀಲ ಪ್ರಾರ್ಥಿಸಿದರು. ಡಾ. ಸಿದ್ದಮ್ಮ ಗುಡೇದ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂಹನ ವಿಭಾಗದ ಸಂಚಾಲಕ ಕೃಪಾಸಾಗರ ಗೊಬ್ಬೂರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಾನಕಿ ಹೊಸೂರ ವೇದಿಕೆಯಲ್ಲಿದ್ದರು ಕಾಲೇಜಿನ ಪ್ರಾಚಾರ್ಯರಾದ ಡಾ. ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here