ಮಾಲತಿ ಎಂಬ ಸಮುದಾಯ ಪ್ರಜ್ಞೆ ಮತ್ತು ಕಾರಂತ ಪ್ರಶಸ್ತಿ

0
86

YES.,ಈ ಹೆಸರೇ ಕನ್ನಡ ರಂಗಭೂಮಿಯಲ್ಲಿ ಯಾವತ್ತೂ ಸಂಘರ್ಷಮಯದ ಹೆಸರು. ಈ ಸಂಘರ್ಷಶೀಲತೆಯನ್ನು ಅವರು ತಮ್ಮ ಸಾವಿನೊಂದಿಗೆ ಕಟ್ಟಿಕೊಂಡು ಹೋದವರಲ್ಲ. Yes.. ಮಾಲತಿ, ಸಂಘರ್ಷಮಯ ಬದುಕಿನ ಹೋರಾಟಗಳನ್ನೇ ಬದುಕಿನುದ್ದಕ್ಕೂ ಬದುಕಿದವರು. ಸತ್ತಮೇಲೂ ಅವರ ಸಂಘರ್ಷ ಸಾಯಲಿಲ್ಲ. ಅದು ಸಾವಿಲ್ಲದ ಸಂಘರ್ಷ. ಅವರಿಗೆ ಇಹದ ಬಗ್ಗೆ ಅನನ್ಯ ಪ್ರೀತಿ ಇದ್ದುದಕ್ಕೆ ಅದನ್ನಿಲ್ಲೇ ಬಿಟ್ಟು ಹೋಗಿದ್ದಾರೆ. ಪರಲೋಕದ ಪರಿವೆಗಿಂತ ಇಹದಲ್ಲೆ ಎಲ್ಲ ಹುಡುಕಿಕೊಂಡವರು ಅವರು. ಅವರೊಬ್ಬ ರಂಗಕರ್ಮಿ ಮಾತ್ರವಲ್ಲ ಸೃಜನಶೀಲ ಲೇಖಕಿಯೂ ಆಗಿದ್ದರು. ಕನ್ನಡ ಸಾಂಸ್ಕೃತಿಕ ಲೋಕಪ್ರ ಜ್ಞೆಯ ಗಟ್ಟಿಗಿತ್ತಿ ನಮ್ಮ ಮಾಲತಿ.

Contact Your\'s Advertisement; 9902492681

ಅವರ ಪಾರ್ಥಿವ ಶರೀರ ಇರುವಾಗಲೇ ೦೧.೦೪.೨೦೧೯ ರಂದು ಶುರುವಾದ ಸಾಮಾಜಿಕ ಜಾಲತಾಣಗಳ ಶೀತಲ ಸಮರ., ಮತ್ತೆ ನಿನ್ನೆಯಿಂದ ಚುರುಕುಗೊಂಡಿದೆ. ನಿನ್ನೆಯಷ್ಟೇ ಸರ್ಕಾರ ಸಾಂಸ್ಕೃತಿಕ ಲೋಕದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಉನ್ನತ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಶಸ್ತಿಗೆ ಭಾಜನರಾದ ಎಲ್ಲರು ಸಾಂಸ್ಕೃತಿಕ ಲೋಕದ ಅನನ್ಯರು ಮತ್ತು ಅಭಿನಂದನಾರ್ಹರು.

ಅಂತೆಯೇ ಅನೇಕ ಗಣ್ಯರು ಅವರನ್ನು ಅಭಿನಂದಿಸಿದ್ದಾರೆ. ಆಧುನಿಕ ರಂಗಭೂಮಿಗೆ ಸಂಬಂಧಿಸಿದಂತೆ ಎಸ್. ಮಾಲತಿ ಅವರಿಗೆ ಬಿ.ವಿ.ಕಾರಂತ ಪ್ರಶಸ್ತಿ ಘೋಷಣೆ ಆಗದಿರುವುದಕ್ಕೆ ಕೆ.ಎಸ್.ವಿಮಲ, ಡಾ.ವಿಜಯಮ್ಮ, ಕಪ್ಪಣ್ಣ, ಸಿ.ಕೆ. ಗುಂಡಣ್ಣ, ಬಾರಿಘಾಟ್, ಮಹಾಮನೆ,ಸಾಸ್ವೆಹಳ್ಳಿ… ಹೀಗೆ ಅನೇಕರು ಮಾಲತಿ ಅವರಿಗೆ ಸರ್ಕಾರ ಕಾರಂತ ಪ್ರಶಸ್ತಿ ಪ್ರಕಟಿಸಬೇಕೆಂದು ಸಾ.ಜಾ.ತಾಣಗಳಲ್ಲಿ ಒತ್ತಾಯಿಸಿರುವುದನ್ನು ನಾನು ಆಯ್ಕೆ ಸಮಿತಿ ಸದಸ್ಯನಾಗಿ ಸ್ವಾಗತಿಸುತ್ತೇನೆ.

ನೆನಪಿರಲಿ; ಆಯ್ಕೆ ಸಮಿತಿಯು ಮರಣೋತ್ತರರನ್ನು ಆಯ್ಕೆ ಮಾಡಿಲ್ಲ. ದಿ: ೦೫.೦೨.೨೦೧೯ ರಂದು ಕಾರಂತ ಪ್ರಶಸ್ತಿಗೆ ಮಾಲತಿ ಅವರ ಹೆಸರನ್ನು ಆಯ್ಕೆ ಮಾಡಿದೆ. ಸುಮಾರು ಆರು ತಿಂಗಳು ತಡವಾಗಿ ಪ್ರಶಸ್ತಿ ಪ್ರಕಟವಾಗಿದೆ. ದಿ೦೧.೦೪.೨೦೧೯ರಂದು ಮಾಲತಿ ನಿಧನರಾದರು. ಸರ್ಕಾರದ ವಿಳಂಬದಿಂದಾಗಿ ಮಾಲತಿ ಅವರು ಪ್ರಶಸ್ತಿ ಪಡೆಯದೇ ನಿರ್ಗಮಿಸಿದರು. ಮರಣೋತ್ತರ ಅವರಿಗೆ ಪ್ರಶಸ್ತಿ ನೀಡುವ ಅವಕಾಶ ಕುರಿತು ಚರ್ಚೆಗಳು ಅಪ್ರಸ್ತುತ. ಏಕೆಂದರೆ ಆಯ್ಕೆ ಸಮಿತಿ ಮರಣೋತ್ತರರನ್ನು ಆಯ್ಕೆ ಮಾಡಿಲ್ಲ.

ಮಾಲತಿ ಮಹಿಳೆ ಎಂಬ ರಿಯಾಯಿತಿಯೂ ಪ್ರಸ್ತಾಪಗೊಳ್ಳಬೇಕಿಲ್ಲ. ಈ ಎಲ್ಲ ರಿಯಾಯಿತಿಗಳನ್ನು ಮೀರಿ ಬೆಳೆದವರು ಮಾಲತಿ. ಕುವೆಂಪು ಅವರಿಗೆ ನಾಡೋಜ ಪ್ರಶಸ್ತಿ ನೀಡಿದ ಅಪರೂಪದ ಸಾಂಸ್ಕೃತಿಕ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ…ಮಾಲತಿ ಅವರಿಗು ಮರಣೋತ್ತರ ಎಂದು ಹೆಸರಿಸದೆ ಕಾರಂತ ಪ್ರಶಸ್ತಿ ಸರ್ಕಾರ ಪ್ರಕಟಿಸಬೇಕೆಂದು ಕೋರುತ್ತೇನೆ. ಆ ಮೂಲಕ ಮರಣದ ನಂತರವೂ ಮಾಲತಿ ಅವರ ಹೆಸರಿಗೆ ಸಿಲುಕುತ್ತಿರುವ ಸಂಘರ್ಷದ, ತಳಕಿನ ಕವಲುಗಳಿಗೆ ವಿರಾಮ ದೊರಕಲಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here