ಸುರಪುರ: ಇಲ್ಲಿನ ಗುಹಾಂತರ ಬುದ್ಧ ವಿಹಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಬೌದ್ಧ ಉಪಾಸಕ ದೇವಿಂದ್ರ ಹೆಗ್ಗಡೆ ಹೇಳಿದರು.
ನಗರದ ಗುಹಾಂತರ ಬುದ್ಧ ವಿಹಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 128ನೇ ಜಯಂತ್ಯೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಮತ್ತು ಕೋ- ಆಪರೇಟಿವ್ ಸೋಸಾಯಿಟಿ ಪದಾಧಿಕಾರಿಗಳ ರಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾ.ಬಾಬಾ ಸಾಹರೆಬ್ ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ನಾವೆಲ್ಲರೂ ಸ್ವಾಭಿಮಾನ ಬದುಕು ಸಾಗಿಸುವಂತಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗೌರವದಿಂದ ಸ್ವತಂತ್ರವಾಗಿಯೂ ಬದುಕಬೇಕು.
ಸಮಾಜದ ಏಳಿಗೆಗಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದು ನುಡಿದರು. ಸಮಾಜದ ಸುಭದ್ರ ಅಭಿವೃದ್ಧಿಗಾಗಿ ಮತ್ತು ಯುವ ಪೀಳಿಗೆಯ ಭವಿಷ್ಯದ ಯಶಸ್ವಿಗಾಗಿ ಟ್ರಸ್ಟ್ ಮೂಲಕ ಕಾರ್ಯೋನ್ಮುಖರಾಗಬೇಕಿದೆ ಎಂದರು. ದಲಿತ ಮುಖಂಡ ರಾಹುಲ್ ಹುಲಿಮನಿ, ಕ್ರೋ- ಆಪ್ರೆಟಿವ್ ಬ್ಯಾಂಕ್ ನೀತಿ ನಿಯಮಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೀದರ್ ನ ಅಣದೂರ ಬುದ್ಧ ವಿಹಾರದ ಭಂತೆ ವರಜ್ಯೋತಿ ಅವರು ಸಾನಿಧ್ಯ ವಹಿಸಿದ್ದರು.
ನಗರಸಭಾ ಸದಸ್ಯ ಶಿವಕುಮಾರ ಕಟ್ಟಿಮನಿ, ಮಾಜಿ ಸದಸ್ಯ ವೆಂಕಟೇಶ್ ಹೊಸ್ಮನಿ, ಡಿಎಸ್ಎಸ್ ಮುಖಂಡರಾದ ರಾಮಚಂ್ರ ವಾಗಣಗೇರಾ, ನಿಂಗಣ್ಣ ಗೋನಾಲ, ಭೀಮರಾಯ ಸಿಂದಗೇರಿ, ಮಾಳಪ್ಪ ಕಟ್ಟಿಮನಿ , ರಮೇಶ್ ಅರಕೇರಾ, ಮಲ್ಲಿಕಾರ್ಜುನ ವಾಗಣಗೇರಾ, ಮಹಾದೇವ ಬೊಮ್ಮನಹಳ್ಳಿ, ಮೂರ್ತಿ ಬೊಮ್ಮನಹಳ್ಳಿ, ಮಹೇಶ್ ಕರಡಕಲ್ , ಆರ್.ಎಸ್ ಮಾಲಗತ್ತಿ, ಶಿವಶಂಕರ್ ಹೊಸ್ಮನಿ ಬೊಮ್ಮನಹಳ್ಳಿ, ಮಲ್ಲಪ್ಪ ದೊಡ್ಮನಿ ತಳವಾರಗೇರಾ, ವೀರಭದ್ರ ತಳವಾರಗೇರಾ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.