ಮಹಿಳಾ ಸಬಲೀಕರಣಕ್ಕೆ ಪೂಜ್ಯ ಅಪ್ಪಾಜಿಯವರ ಕೊಡುಗೆ ಅನನ್ಯ: ಸಂಗೀತಾ ಆರ್. ಕಂತಿ

0
11

ಕಲಬುರಗಿ : ಶರಣಬಸವೇಶ್ವರ ಸಂಸ್ಥಾನದ ಎಂಟನೆಯ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿನಿ, ಪತ್ರಕರ್ತೆ, ನಿರೂಪಕಿ ಕು.ಸಂಗೀತಾ ಆರ್. ಕಂತಿ ಹೇಳಿದರು.

ಮಹಾವಿದ್ಯಾಲಯದಲ್ಲಿ ರವಿವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ’ಇಟ್ಟ ಹೆಜ್ಜೆ ತೊಟ್ಟ ರೂಪ’ ಎನ್ನುವ ವಿಷಯದ ಮೇಲೆ ವಿದ್ಯಾರ್ಥಿನಿಯರ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಪೂಜ್ಯ ಡಾ.ಅಪ್ಪಾಜಿಯವರು ಇಟ್ಟ ಹೆಜ್ಜೆ ಶಿಕ್ಷಣಕ್ಕೆ ತೊಟ್ಟ ರೂಪ ಸಾಧುಸಂತರಾಗಿ, ಅವರು ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿ ಮಾಡದಿದ್ದರೆ ಈ ಭಾಗ ಇನ್ನೂ ಹಿಂದುಳಿಯುತ್ತಿತ್ತು. ಅವರು ಶೈಕ್ಷಣಿಕ ಅಭಿವೃದ್ಧಿ ಮಾಡಿ ಅದರಲ್ಲೂ ಮಹಿಳೆಯರು ಶೈಕ್ಷಣಿಕವಾಗಿ ಮುಂದೆ ಬರಲು ಕಾರಣಿಕರ್ತರಾಗಿದ್ದಾರೆ ಎಂದರು.

Contact Your\'s Advertisement; 9902492681

ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ಚಂದ್ರಕಲಾ ಪಾಟೀಲ ಅವರು ಆಶಯ ನುಡಿಗಳಾಡಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಶಿಕ್ಷಣವೆಂಬ ಗಿಡವನ್ನು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಹೆಮ್ಮರವಾಗಿ ಬೆಳೆಸಿದ್ದಾರೆ. ಅವರು ಶೈಕ್ಷಣಿಕವಾಗಿಲ್ಲದೆ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕೊಡುಗೆಗಳು ಅಪಾರವಾಗಿವೆ ಎಂದರು.

ಗೋಷ್ಠಿಯಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು.ರೋಹಿಣಿ ಬಿ.ಕೆ ಮಾತನಾಡಿ, ಕೆಜಿ ಯಿಂದ ಪಿಜಿಯವರೆಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ಖಾಸಗಿ ವಿಶ್ವವಿದ್ಯಾಲಯ ಆರಂಭಿಸಿರುವ ಕೀರ್ತಿ ಪೂಜ್ಯ ಅಪ್ಪಾಜಿಯವರಿಗೆ ಸಲ್ಲುತ್ತದೆ. ಚಿತ್ರಕಲೆ, ಸಂಗೀತ, ಪತ್ರಿಕೋದ್ಯಮ ಹೊಸ ಹೊಸ ಕೋರ್ಸುಗಳನ್ನು ಆರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಪೂಜ್ಯ ಅಪ್ಪಾಜಿಯವರು ಮಹಿಳೆಯರಿಗಾಗಿಯೇ ತಾಂತ್ರಿಕ ಇಂಜಿನಿಯರಿಂಗ್ ಮಹಾವಿದ್ಯಾಲಯಗಳನ್ನು ಆರಂಭಿಸಿ ಈ ಭಾಗದ ಮಹಿಳೆಯರು ತಂತ್ರಜ್ಞಾನದಲ್ಲಿ ಸಾಧನೆ ಮಾಡಲು ಕಾರಣರಾಗಿದ್ದಾರೆ.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ವಿದ್ಯಾರ್ಥಿನಿಯರ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜನೆ ಈ ಭಾಗದಲ್ಲಿಯೇ ಪ್ರಪ್ರಥಮವಾಗಿದ್ದು, ಪೂಜ್ಯ ಡಾ.ಅಪ್ಪಾಜಿಯವರು ಈ ನಾಡಿಗೆ ಕೊಟ್ಟ ಕೊಡುಗೆ ಅಮೋಘವಾದದ್ದು, ಶರಣಬಸವೇಶ್ವರ ಸಂಸ್ಥಾನ ಶಿಕ್ಷಣದ ಜೊತೆಗೆ ಕಾಯಕ, ದಾಸೋಹ ಮತ್ತು ಸಂಸ್ಕಾರವನ್ನು ತಿಳಿಸುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿದೆ. ಅಪ್ಪಾಜಿಯವರೊಂದಿಗೆ ಪೂಜ್ಯ ಡಾ.ದಾಕ್ಷಾಯಣಿ ಅವ್ವಾಜಿ ಮತ್ತು ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಶ್ರೀಮತಿ ಮಾಲಾಶ್ರೀ ಹರಳಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು, ಕು.ಮನೀಷಾ ಕೆ.ಸೂರ್ಯವಂಶಿ ನಿರೂಪಿಸಿದರು, ಕು.ನಿವೇದಿತಾ ಸ್ವಾಗತಿಸಿದರು, ಕು.ಲಕ್ಷ್ಮೀ ಬಿ.ಕೋನಾಪೂರ ಪ್ರಾರ್ಥಿಸಿದರು, ಕು.ವಚನಾ ವಂದಿಸಿದರು. ಕು.ಸನಾ ಬೇಗಂ ಮತ್ತು ಕು.ಪೂರ್ಣಿಮಾ ವೇದಿಕೆ ಮೇಲಿದ್ದರು.

ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಿದ್ದಮ್ಮ ಗುಡೇದ್, ಜಾನಕಿ ಹೊಸುರ, ಡಾ.ಸೀಮಾ ಪಾಟೀಲ, ಡಾ.ಪುಟ್ಟಮಣಿ ದೇವಿದಾಸ, ಕೃಪಾಸಾಗರ ಗೊಬ್ಬುರ, ಡಾ.ಸಂಗೀತಾ ಪಾಟೀಲ, ದಾಕ್ಷಾಯಣಿ ಕಾಡಾದಿ, ದೀಶಾ ಮೆಹತಾ, ಪದ್ಮಜಾ ವೀರಶೆಟ್ಟಿ, ಕಲ್ಪನಾ, ಗೌರಮ್ಮ ಹಿರೇಮಠ, ಡಾ. ಶಾಂತಲಿಂಗ ಘಂಟೆ, ಕು.ಶ್ರದ್ಧಾ ಪುರಾಣಿಕ, ಕು.ಅಶ್ವಿನಿ ಭದ್ರೆ, ವೀರಭದ್ರಯ್ಯ ಸ್ಥಾವರಮಠ ಮತ್ತು ಬೋಧಕೇತರಾದ ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಅನುಸೂಯ ಬಡಿಗೇರ, ಶಶಿಕಲಾ ಪಾರಾ, ಪ್ರಭಾವತಿ ಹೆಚ್ ಹಾಗೂ ವಿದ್ಯಾರ್ಥಿನಿಯವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here