ಸುರಪುರ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ,ರಾಜ್ಯ ಕಾನೂನು ಸೇವಾ ಪ್ರಾಧಿಕಾರ,ಜಿಲ್ಲಾ ಕಾನೂನು ಸೇವಾ ಸಮಿತಿ ಹಾಗು ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘದ ವತಿಯಿಂದ ಕಳೆದ ೪೫ ದಿನಗಳಿಂದ ನಿರಂತರಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ನಗರದ ನ್ಯಾಯಾಲಯದ ಆವರಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ದಿವಾಣಿ ನ್ಯಾಯಾಧೀಶರಾದ ತಯ್ಯಬಾ ಸುಲ್ತಾನವರು ಮಾತನಾಡಿ, ಕಳೆದ ೪೫ ದಿನಗಳಿಂದ ನಿರಂತರವಾಗಿ ಇಡೀ ತಾಲೂಕಿನಾದ್ಯಂತ ಪ್ರತಿ ಗ್ರಾಮದಲ್ಲೂ ಹೋಗಿ ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವಂತ ಮತ್ತು ವಿವಿಧ ಕಾನೂನುಗಳ ಬಗ್ಗೆ ತಿಳಿಸಿಕೊಡುವಂತ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ ನ್ಯಾಯಾಧೀಶರಾದ ಚಿದಾನಂದ ಬಡಿಗೇರವರಿಗೂ ಎಲ್ಲಾ ವಕೀಲರಿಗೂ ಮತ್ತು ಸಹಕರಿಸಿದ ಎಲ್ಲಾ ಇಲಾಖೆಗು ವಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಿವಾಣಿ ನ್ಯಾಯಾಧೀಶರಾದ ಚಿದಾನಂದ ಬಡಿಗೇರವರು ಮಾತನಾಡಿ,ತಮ್ಮ ಕಾರ್ಯಕಲಾಪದ ಜೊತೆಗೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ವಹಿಸಿದ್ದ ಜವಬ್ದಾರಿಯಯನ್ನು ತುಂಬಾ ಸುವ್ಯವಸ್ಥಿತವಾಗಿ ನೆರವೇರಲು ಕಾರಣೀಭೂತರಾದ ಮಾನ್ಯ ಹಿರಿಯ ದಿವಾಣಿ ನ್ಯಾಯಾಧೀಶರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.ಅಲ್ಲದೆ ಇಡೀ ತಾಲೂಕಿನ ಪ್ರತಿ ಗ್ರಾಮಕ್ಕೂ ಕಾನೂನು ಸೇವಾ ಪ್ರಾಧಿಕಾರದ ಕಾರ್ಯವನ್ನು ತಲುಪಿಸುವಲ್ಲಿ ನಮ್ಮ ವಕೀಲರ ಸಂಘ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗು ಪ್ಯಾನಲ್ ವಕೀಲರ ಕಾರ್ಯ ಶ್ಲಾಘನೀಯವಾಗಿದೆ.ದಿನವಿಡೀ ಕೆಲಸ ಕಾರ್ಯವನ್ನು ಬದಿಗೊತ್ತಿ ತುಂಬಾ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದ ವಕೀಲರ ಸಂಘದ ಅಧ್ಯಕ್ಷರಾದಿಯಾಗಿ ಎಲ್ಲಾ ವಕೀಲರಿಗೆ ಧನ್ಯವಾದ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಡಾ:ದೇವರಾಜ ಬಿ ಅವರು ಹಾಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಬಸವರಾಜ ಕಿಲ್ಲೇದಾರ,ಹಿರಿಯ ವಕೀಲರಾದ ನಿಂಗಣ್ಣ ಚಿಂಚೋಡಿ,ದೇವಿಂದ್ರಪ್ಪ ಬೇವಿನಕಟ್ಟಿ ಇವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಕಾನೂನು ಅರಿವು ನೆರವು ಅಭಿಯಾನದ ಯಶಸ್ಸಿಗೆ ಸೇವೆ ಸಲ್ಲಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಮತ್ತು ವಕೀಲರಿಗೆ ಹಾಗೂ ಪತ್ರಕರ್ತರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ,ಸರಕಾರಿ ಸಹಾಯಕ ಅಭೀಯೋಜಕರಾದ ರಾಘವೇಂದ್ರ ಜಹಾಗೀರದಾರ,ದಿವ್ಯಾರಾಣಿ,ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀದೇವಿ ಪಾಟೀಲ್,ಹಿರಿಯ ವಕೀಲರಾದ ಬಸವಲಿಂಗಪ್ಪ ಪಾಟೀಲ್,ಜಿ.ಎಸ್.ಪಾಟೀಲ್,ಟಿಹೆಚ್‌ಒ ಡಾ:ಆರ್.ವಿ.ನಾಯಕ,ಸಿಡಿಪಿಒ ಲಾಲಸಾಬ್ ಪೀರಾಪುರ,ಪಿಎಸ್‌ಐ ಕೃಷ್ಣಾ ಸುಬೇದಾರ ಸೇರಿದಂತೆ ಹುಣಸಗಿ,ಕೆಂಭಾವಿ ಮತ್ತು ಕೊಡೇಕಲ್ ಠಾಣೆಯ ಪಿಎಸ್‌ಐಯವರು,ಕಾರಾಗೃಹ ಇಲಾಖೆ,ಅಬಕಾರಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲಾ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ವಜ್ಜಲ್ ನಿರೂಪಿಸಿದರು,ಜಿ.ಆರ್.ಬನ್ನಾಳ ಸ್ವಾಗತಿಸಿದರು,ಆದಪ್ಪ ಹೊಸ್ಮನಿ ವಂದಿಸಿದರು.