ವಿಶ್ವ ಚಿನ್ನ ಪರಿಷತ್ತು ಇದೇ ಮೊದಲ ಬಾರಿಗೆ ಭೂತಕಾಲ, ವರ್ತಮಾನ ಹಾಗೂ ಭವಿಷ್ಯದ ಮಾನವೀಯತೆಯ ಮೇಲೆ ಚಿನ್ನದ ಪರಿಣಾಮವನ್ನು ಬಿಂಬಿಸುವ ಸಾಕ್ಷ್ಯಾಚಿತ್ರದ ಸರಣಿ ‘ದಿ ಗೋಲ್ಡನ್ ಥ್ರೆಡ್’ ಅನ್ನು ಬಿಡುಗಡೆಗೊಳಿಸಿದೆ. 5 ಸಂಚಿಕೆಗಳನ್ನು ಒಳಗೊಂಡಿರುವ ಈ ಸರಣಿಯಲ್ಲಿ ಚಿನ್ನದ ಇತಿಹಾಸ, ಸಾಂಸ್ಕೃತಿಕ ಮಹತ್ವ ಮತ್ತು ತಂತ್ರಜ್ಞಾನಗಳ ಬಳಕೆಯ ಮೇಲೆ ಬೆಳಕು ಚೆಲ್ಲಲಾಗಿದೆ.
ಇದರಲ್ಲಿ ಜಗತ್ತಿನಾದ್ಯಂತ ತಜ್ಞರ ಅಭಿಪ್ರಾಯಗಳು ಹಾಗೂ ಇಂಜಿನಿಯರಿಂಗ್ ಸೂಪರ್-ಮೆಟೀರಿಯಲ್, ಜೈವಿಕ ಉಪಕರಣ, ಸಾಂಕೇತಿಕ ಸೃಜನಾತ್ಮಕ ಮಾಧ್ಯಮ ಮತ್ತು ಆರ್ಥಿಕ ಸ್ತಂಭವಾಗಿ ಜಗತ್ತಿನ ಮೇಲೆ ಪರಿಣಾಮ ಬೀರಿದ ಚಿನ್ನದ ಕಥೆಯನ್ನು ಹಂಚಿಕೊಳ್ಳಲಾಗಿದೆ.
ಇದನ್ನು ಪ್ರಸಿದ್ಧ ಲೇಖಕ ಹಾಗೂ ಪ್ರಶಸ್ತಿ ವಿಜೇತ ಟಿವಿ ನಿರೂಪಕ ಮೆಥಮೆಟಿಕ್ಸ್ ಆಫ್ ಸಿಟೀಸ್‌ನ ಪ್ರೊಫೆಸರ್ ಹನಾಯ್ ಫ್ರೈ ಎಂಬುವವರು ನಿರೂಪಣೆ ಮಾಡಿದ್ದಾರೆ. ಇದು ಕ್ಲೀನ್-ಟೆಕ್‌ನ ಪ್ರವರ್ತಕ ಫಿಲ್ ದೆ ಲೂನಾ ಅವರಂತಹ ತಜ್ಞರನ್ನು ಒಳಗೊಂಡಿದೆ. ಜೊತೆಗೆ, ಗೋಲ್ಡ್ ಲೀಫ್‌ನೊಂದಿಗೆ ಕೆಲಸ ಮಾಡಿದ ಕಲಾವಿದ ಟಾವ್ನಿ ಚಾಟ್ಮನ್ ಮತ್ತು ಮಾಜಿ ಎಫ್1 ಚಾಂಪಿಯನ್‌ಶಿಪ್- ವಿಜೇತ ಮೆಕ್ಯಾನಿಕ್ ಕೂಡ ಇದ್ದಾರೆ.
ಪ್ರತಿ ಸಂಚಿಕೆ ಕೂಡ 10 ನಿಮಿಷಗಳ ಅವಧಿಯದ್ದಾಗಿದ್ದು, ಗೋಲ್ಡನ್ ಥ್ರೆಡ್. ಗೋಲ್ಡ್.ಆರ್ಗ್(GoldenThread.gold.org) ವೆಬ್‌ಸೈಟ್‌ನಲ್ಲಿ 2021ರ ನವೆಂಬರ್ 16ರಿಂದ ಲಭ್ಯವಿರಲಿದೆ. ಮೊದಲ ಸಂಚಿಕೆ ಯೂಟ್ಯೂಬ್‌ನಲ್ಲಿ ಕೂಡ ಬಿಡುಗಡೆಗೊಳ್ಳಲಿದೆ. ನಂತರ ಉಳಿದ 4 ಸಂಚಿಕೆಗಳು ಪ್ರತಿವಾರ ಅಪ್‌ಲೋಡ್ ಆಗಲಿವೆ. ಕೆಲ ಸಮಯದ ನಂತರ ವೆಬ್‌ಸೈಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುವುದು. ವೀಕ್ಷಕರು ಅದರಿಂದ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.
ವಿಶ್ವ ಚಿನ್ನ ಪರಿಷತ್ತಿನ ಡಿಜಿಟಲ್ ಮಾರ್ಕೆಟಿಂಗ್‌ನ ಜಾಗತಿಕ ಮುಖ್ಯಸ್ಥ ಜೇಮ್ಸ್ ಸ್ಪೇಕ್, ““ಸಾಕ್ಷ್ಯಚಿತ್ರ ಸರಣಿಯು ನಮ್ಮ ಹಿಂದಿನ ಸಮಯ, ವರ್ತಮಾನ ಮತ್ತು ಭವಿಷ್ಯದ ಕಲೆ, ಸಂಸ್ಕೃತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನದವರೆಗಿನ ಕ್ಷೇತ್ರದಲ್ಲಿ ಚಿನ್ನದ ಪಾತ್ರವನ್ನು ಪ್ರದರ್ಶಿಸುತ್ತದೆ, ಹೂಡಿಕೆದಾರರು ಮತ್ತು ಗ್ರಾಹಕರ ಮನಸ್ಸಿನಲ್ಲಿ ಚಿನ್ನದ ಪ್ರಸ್ತುತತೆ ಮತ್ತು ಮಹತ್ವವನ್ನು ಹೆಚ್ಚಿಸುವುದು ಸಾಕ್ಷ್ಯಚಿತ್ರದ ಉದ್ದೇಶವಾಗಿದೆ” ಎಂದರು.
“ಈ ಸರಣಿಯ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ಇದು ಇಲ್ಲಿಯವರೆಗೆ ತಯಾರಾಗಿರುವ ಅತ್ಯಂತ ಮಹತ್ವಾಕಾಂಕ್ಷೆಯ ವಿಡಿಯೋಗಳಲ್ಲಿ ಒಂದಾಗಿದೆ. ಚಿನ್ನ ನಮ್ಮ ಜೀವನದ ಪ್ರತಿ ಭಾಗದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ನಮ್ಮ ಜೀವನಕ್ಕೆ ಹೆಚ್ಚಿನ ಗುಣಮಟ್ಟ ನೀಡುವ ಆಹ್ಲಾದಕರ ಅನುಭವವಾಗಿದೆ.ಈ ವೆಬ್‌ಸೈಟ್ ಚಿನ್ನದ ಲೋಹಕ್ಕಾಗಿಯೇ ಮೀಸಲಾಗಿದ್ದು, ಇದು ಚಿನ್ನದ ಉತ್ಪನ್ನಗಳ ಪ್ರದರ್ಶನ ಹಾಗೂ ಗ್ರಾಹಕರಿಗೆ ಮಾಹಿತಿ ಒದಗಿಸಲಿದೆ” ಎಂದರು.
ಗೋಲ್ಡನ್ ಥ್ರೆಡ್, ಪ್ರೊಡಕ್ಷನ್ ಏಜೆನ್ಸಿ ‘ದಿ ಪ್ರೋಗ್ರೆಸ್ ಫಿಲ್ಮ್ ಕಂಪನಿ’ಯೊಂದಿಗೆ ವಿಶ್ವ ಚಿನ್ನ ಪರಿಷತ್ತಿನ ಸಜೃನಾತ್ಮಕ ಏಜೆನ್ಸಿ ಎಕೆಕ್ಯೂಎದೊಂದಿಗೆ ಕೂಡ ಪಾಲುದಾರಿಕೆ ಮಾಡಿಕೊಂಡಿದೆ.
ಎಕಕ್ಯೂಎ ಸಮೂಹದ ಸೃಜನಾತ್ಮಕ ನಿರ್ದೇಶಕ ಪೌಲ್ ಓಸ್ಟ್ರಿಜ್ನಿಯೂಕ್, “ ಗೋಲ್ಡನ್ ಥ್ರೆಡ್‌ನೊಂದಿಗೆ ನಾವು, ಬಹುತೇಕ ಎಲ್ಲಾಜನರು ಗುರುತಿಸುವ, ಹಲವು ಜನರು ಹೊಂದಿರುವ, ಆದರೆ, ಕೆಲವೇ ಜನರು ಮಾನವೀಯತೆಗೆ ನೀಡಿರವ ಕೊಡುಗೆಯನ್ನು ಅರಿತಿರುವಂತಹ ಲೋಹದ ಕಥೆಯನ್ನು ಹಂಚಿಕೊಳ್ಳುತ್ತಿದ್ದೇವೆ. ಇದರ ಚಿತ್ರೀಕರಣದ ವೇಳೆ, ನಮ್ಮ ತಂಡ ಪದೇಪದೇಈ ದಂತಕತೆಯ ಇತಿಹಾಸ ಮತ್ತು ಭವಿಷ್ಯವನ್ನು ಅರಿತು ವಿಸ್ಮಿತರಾಗುತ್ತಿದ್ದರು. ಇದರ ಕಥೆ ಹೇಳುವುದೆಂದರೆ ನಮ್ಮ ಅಚ್ಚರಿಗೆ ಧ್ವನಿಯಾಗುವುದಷ್ಟೇ. ನಮ್ಮ ಸ್ಟುಡಿಯೋದ ಕಥೆ ನಿರೂಪಣೆಗೆ ಬ್ರಾಂಡ್-ಫಸ್ಟ್ ನೀಡಲು ವಿಶ್ವ ಚಿನ್ನದ ಪರಿಷತ್ ಮುಂದಾಗಿರುವುದು ಸಂತಸ ತಂದಿದೆ” ಎಂದರು.
ಐದು ಸಂಚಿಕೆಗಳನ್ನು ಸಂಪೂರ್ಣವಾಗಿ ವೀಕ್ಷಿಸಲು https://thegoldenthread.gold.org/