ಶಹಾಬಾದ: ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚು ಮೈಗೂಡಿಸಿಕೊಂಡು ಪ್ರಾಮಾಣಿಕತೆ ಪ್ರದರ್ಶಿಸಿದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ ಎಂದುಶಾಸಕ ಬಸವರಾಜ ಮತ್ತಿಮಡು ಅಭಿಪ್ರಾಯಪಟ್ಟರು.
ಅವರು ಬುಧವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ “ಭಂಡಾರ ಸೇವಾ ರತ್ನ “ಪ್ರಶಸ್ತಿ ಪಡೆದುಕೊಂಡ ಬಿಜೆಪಿ ಮುಖಂಡ ಬಸವರಾಜ ಮದ್ರಕಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ. ಸಮಾಜ ಸೇವೆ ಒಂದು ಪುಣ್ಯದ ಕೆಲಸವಾಗಿದೆ. ಮನುಷ್ಯ ಇಂದು ಕೇವಲ ಹಣ ಗಳಿಕೆಗೆ ಮಾತ್ರ ಸೀಮಿತನಾಗಿರುವುದರ ಜತೆಗೆ ಸ್ವಾರ್ಥಿಗಳಾಗಿದ್ದಾರೆ.
ಕೇವಲ ತಾವು ಹಾಗೂ ತಮ್ಮ ಕುಟುಂಬಕ್ಕಷ್ಟೇ ಸೀಮಿತರಾಗಿದ್ದು, ಸಮಾಜದ ಅಭಿವೃದ್ಧಿಗೆ ಹಣವುಳ್ಳವರು ಶ್ರಮಿಸುತ್ತಿರುವುದು ವಿರಳವಾಗಿದೆ. ಆದರೆ ಬಸವರಾಜ ಮದ್ರಕಿ ಅವರು ಕುರುಬ ಸಮಾಜಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.ಅಲ್ಲದೇ ಸಮಾಜ ಸೇವೆ ನಮ್ಮ ಪಕ್ಷದ ಮುಖ್ಯ ಉದ್ದೇಶವೂ ಇದಾಗಿದೆ.ಇಂತಹ ಮುಖಂಡರು ನಮ್ಮ ಪಕ್ಷದಲ್ಲಿರುವುದು ನಮಗೆ ಸಂತೋಷ ತಂದಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ, ಕನಕಪ್ಪ ದಂಡಗುಳಕರ್,ನಿಂಗಣ್ಣ ಹುಳಗೊಳ್ಕರ್,ಬಸವರಾಜ ಬಿರಾದಾರ, ಸಿದ್ರಾಮ್ ಕುಸಾಳೆ,ಚಂದ್ರಕಾಂತ ಗೊಬ್ಬುರ್, ಡಿ. ಸಿ. ಹೊಸಮನಿ, ಸುಭಾμï ಜಾಪುರ, ಸಂಜಯ ವಿಠಕರ್,ಭೀಮಯ್ಯ ಗುತ್ತೇದಾರ್, ದತ್ತು ಫಂಡ ಶ್ರೀನಿವಾಸ್ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.