ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಬುಧವಾರ ಎಐಡಿಎಸ್‌ಓ ಸಂಘಟನೆ ವತಿಯಿಂದ ಚಿತ್ತಾಪೂರ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಹೊನಗುಂಟ ಗ್ರಾಮದಿಂದ ಹಲವಾರು ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹಾಗೂ ಸಾiನ್ಯ ಜನರು ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಬರುವುದು ಶಹಾಬಾದ ನಗರಕ್ಕೆ ಬರುತ್ತಾರೆ. ಲಾಕ್ ಡೌನ್ ಮುಗಿದ ನಂತರ ಶಾಲಾ-ಕಾಲೇಜುಗಳು ಪ್ರಾರಂಭವಾಗಿರುವುದು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರದ ಬಹುತೇಕ ವಿದ್ಯಾರ್ಥಿಗಳು ಬಸ್ ಮೂಲಕ ಪ್ರಯಣಿಸುತ್ತಾರೆ.
ಹೀಗಾಗಿ ವಿದ್ಯಾರ್ಥಿಗಳು ಸರಿಯಾಗಿ ಶೈಕ್ಷಣಿಕ ವಿದ್ಯಾಭ್ಯಾಸ ಮಾಡಬೇಕಾದರೇ ಅವರಿಗೆ ಸಾರಿಗೆ ಅನುಕೂಲ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮದ ವಿದ್ಯಾರ್ಥಿಗಳು ಅಲ್ಲಿಯೇ ಪ್ರೌಢ ಶಿಕ್ಷಣ ಮುಗಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಹಾಬಾದ, ಜೇವರ್ಗಿ,ಚಿತ್ತಾಪೂರ, ಕಲಬುರಗಿ ನಗರಕ್ಕೆ ಹಲವಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರ ಬಳಿ ಬಸ್ ಪಾಸ್ ಇದ್ದರು ಕೂಡ ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಅವರು ಖಾಸಗಿ ವಾಹನಗಳಿಗೆ ದಿನಾಲೂ ಹಣ ಕೊಟ್ಟು ಬರುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗುತ್ತಿದೆಯಲ್ಲದೇ ವಿದ್ಯಾಭ್ಯಾಸಕ್ಕೂ ಹೊಡೆತ ಬೀಳುತ್ತಿದೆ.
ಹೊನಗಂಟಾ ಗ್ರಾಮದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊನಗುಂಟದಿಂದ ಶಹಾಬಾದ ಗೆ ಬೆಳಗ್ಗೆ ೬:೦೦ ಕ್ಕೆ, ೮:೦೦ಕ್ಕೆ ಹಾಗೂ ಶಹಾಬಾದಿಂದ ಹೊನಗುಂಟಕ್ಕೆ ಮಧ್ಯಾನ ೧:೩೦ಕ್ಕೆ, ೪:೩೦ ಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಚಿತ್ತಾಪೂರ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.ಮನವಿ ಪತ್ರ ಸ್ವಿಕರಿಸಿ ಮಾತನಾಡಿದ ಅಧಿಕಾರಿಗಳು ಎರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು. ಈ ಒಂದು ನಿಯೋಗ ಬೇಟಿಯಲ್ಲಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ.ಎನ್.ಕೆ, ತಾಲೂಞಂ ಅಧ್ಯಕ್ಷ ಕಿರಣ್.ಜಿ.ಮಾನೆ, ಉಪಾಧ್ಯಕ್ಷ ದೇವರಾಜ ಹೊನಗುಂಟ, ವಿದ್ಯಾರ್ಥಿಗಳಾದ ಮನುಗಿರಿ,ಸಿದ್ದು ಕೊಲೆ, ಕೃಷ್ಣ, ರೇವಣಸಿದ್ದು ಇದ್ದರು.