ಶಹಾಬಾದ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ನೈಪುಣ್ಯತೆ ಹೆಚ್ಚಿಸುವಲ್ಲಿ ಕೋಚಿಂಗ್ ಕೇಂದ್ರಗಳು ಬಹು ಮುಖ್ಯ ಪಾತ್ರ ಮಹತ್ವದ್ದಾಗಿದೆ ಎಂದು ಅನೀಲ ಮಹಾರಾಜ ಹೇಳಿದರು.
ಅವರು ನಗರದ ಲಕ್ಷ್ಮಿ ಗಂಜ್ ಬಡಾವಣೆಯಲ್ಲಿ ಜ್ಞಾನಗಂಗಾ ಕೋಚಿಂಗ್ ಕೇಂದ್ರವನ್ನು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಧುನಿಕ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಮನೋಧೈರ್ಯ ತುಂಬುವ ಮೂಲಕ ಶಿಕ್ಷಣದ ಮೂಲಾರ್ಥವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕಾಗಿದೆ ಎಂದರು.
ನಗರಸಭೆಯ ಸದಸ್ಯ ಶರಣು ವಸ್ತ್ರದ್ ಮಾತನಾಡಿ, ಜ್ಞಾನ ಮತ್ತು ಕಲಿಕೆಗೆ ಮಹತ್ವ ನೀಡುವ ದಿಸೆಯಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬುದ್ಧಿಮಟ್ಟವನ್ನು ಪ್ರಬಲಗೊಳಿಸಬೇಕು. ಮಕ್ಕಳಲ್ಲಿ ವಿ?ಯದ ಸಮಗ್ರತೆ ಮತ್ತು ಆಸಕ್ತಿ ಹೆಚ್ಚಿಸಬೇಕು.
ಕೂಲಿ ಕಾರ್ಮಿಕರ ಪ್ರದೇಶವಾದ ನಗರದಲ್ಲಿ ಬಡ ಕುಟುಂಬಗಳ ಮಕ್ಕಳಿಗೆ ಆದಷ್ಟು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಶಹಾಬಾದ ನಗರದಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಸುವಂತ ಕೆಲಸ ನಿಮ್ಮ ಕೋಚಿಂಗ್ ಕೇಂದ್ರಗಳಿಂದ ಆಗಲಿ ಎಂದು ಹೇಳಿದರು.
ಜ್ಞಾನಗಂಗಾ ಕೋಚಿಂಗ್ ಕೇಂದ್ರದ ನಿರ್ದೇಶಕ ಮಹಾದೇವ ಮತ್ತು ಕೋಮಲ, ಅತಿಥಿಗಳಾಗಿ ವಾಸು ಚವ್ಹಾಣ, ಅವ್ವಮ್ಮ ನಾಯಿಕೊಡಿ, ಕೀರ್ತಿ ಚವ್ಹಾಣ, ಫೌಝಿಯಾಬೇಗಂ, ಶ್ರೀಶೈಲ, ಹಣಮಂತು ಶಹಾಪೂರ ಇದ್ದರು.