ಮತಾಂತರ ನಿಷೇಧ ಕಾಯ್ದೆ ,ಗಣತಿಯನ್ನು ಕೈಬಿಡಬೇಕೆಂದು ಮನವಿ

0
26

ಶಹಾಬಾದ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಸಮುದಾಯದ ಮಿಶನರಿಗಳ ಗಣತಿಯನ್ನು ಕೈ ಬಿಡಬೇಕೆಂದು ಅಖಿಲ ಕರ್ನಾಟಕ ಕ್ರೈಸ್ತ ಒಕ್ಕೂಟದಿಂದ ಸ್ಥಳೀಯ ಕ್ರೈಸ್ತ ಸಮುದಾಯದವರು ಒತ್ತಾಯಿಸಿ ಗ್ರೇಡ್ -೨ ತಹಸೀಲ್ದಾರ ಗುರುರಾಜ ಸಂಗಾವಿಗೆ ಮನವಿ ಪತ್ರ ಸಲ್ಲಿಸಿದರು.

ಈ ಕುರಿತು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿರುವ ಅವರು, ಬೃಹತ್ ಹೋರಾಟಕ್ಕೆ ಅವಕಾಶ ಮಾಡಿಕೊಡದಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ರಾಜ್ಯದಲ್ಲಿನ ಕ್ರೈಸ್ತ ಮಿಶಿನರಿಗಳ ಗಣತಿ ಮಾಡಲು ಆದೇಶಿಸಿರುವುದು ಅನಾವಶ್ಯಕ ಕ್ರಮ.

Contact Your\'s Advertisement; 9902492681

ಇದರಿಂದ ರಾಜ್ಯಕ್ಕೆ ಎಳ್ಳ? ಪ್ರಯೋಜನವಿಲ್ಲ. ಮತಾಂತರ ಮಿಥ್ಯೆ ಹಾಗೂ ಕೋಮು ವಿರೋಧಿ ವಾತಾವರಣವು ತೀವ್ರವಾಗಿರುವ ಸಮಯದಲ್ಲಿ ಇಂತಹ ಗಣತಿಯನ್ನು ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಈ ಗಣತಿಯನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಚರ್ಚುಗಳು, ಯಾಜಕರು (ಪಾದ್ರಿಗಳು, ಪಾಸ್ಟರ್ಗಳು) ಮತ್ತು ಕ್ರೈಸ್ತ ಸನ್ಯಾಸಿನಿಯರನ್ನು ಕೋಮುವಾದಿ ಶಕ್ತಿಗಳು ಅನಗತ್ಯವಾಗಿ ಟಾರ್ಗೆಟ್ ಮಾಡುವುದನ್ನೂ ಸಹ ತಳ್ಳಿ ಹಾಕುವಂತಿಲ್ಲ.

ಕ್ರೈಸ್ತ ಸಮುದಾಯವು ನಡೆಸುತ್ತಿರುವ ಶಾಲಾ – ಕಾಲೇಜುಗಳು ಮತ್ತು ಆಸ್ಪತ್ರೆಗಳ ಲೆಕ್ಕ ತೆಗೆದುಕೊಂಡರೆ ರಾ? ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಸಮುದಾಯವು ನೀಡುತ್ತಿರುವ ಅಪರಿಮಿತ ಸೇವೆಯ ಅಂದಾಜು ದೊರೆಯುತ್ತದೆ. ನಾವು ಎಂದಿಗೂ ಸಹ ಬಲವಂತದ, ಆಮಿ?ಗಳನ್ನು ಒಡ್ಡಿ ಮಾಡುವ ಮತಾಂತರವನ್ನು ವಿರೋಧಿಸುತ್ತೇವೆ. ಕ್ರೈಸ್ತ ಸಮುದಾಯವು ಸದಾ ದೇಶ ಪ್ರೇಮಿಯಾಗಿದೆ.

ಮಾತ್ರವಲ್ಲದೇ ಈ ನೆಲದ ಕಾನೂನುಗಳನ್ನು ಚಾಚೂ ತಪ್ಪದೇ ಪಾಲಿಸುತ್ತದೆ. ಅದಲ್ಲದೇ ಈ ದೇಶದಲ್ಲಿನ ಬಡವರ ಮತ್ತು ಹಿಂದುಳಿದವರ ಸೇವೆಗೆ ಸದಾ ಸಿದ್ಧವಿದೆ. ಈ ನಿಟ್ಟಿನಲ್ಲಿ ನಮಗೆ ಸರ್ಕಾರದಿಂದ ಬೆಂಬಲ ಹಾಗೂ ಪ್ರೋತ್ಸಾಹದ ಅಗತ್ಯತೆ ಇದೆ ಎಂದೂ ಈ ವೇಳೆ ಅವರು ಕೇಳಿಕೊಂಡಿದ್ದಾರೆ.ಅಲ್ಲದೇ ಮತಾಂತರ ನಿ?ಧ ಕಾಯ್ದೆ ಹಾಗೂ ಗಣತಿಯನ್ನು ಕೈಬಿಡಬೇಕೆಂದು ಮನವಿ ಮಾಡಿದರು.

ಫಾದರ್ ಸ್ಟ್ಯಾನಿ ಗೋವಿಯಾಸ್, ಕಾರ್ಯದರ್ಶಿ ಇಮಾನುವೆಲ್ ಜಾನಪಾಲ್, ಆರೋಗ್ಯಸ್ವಾಮಿ, ಸದಸ್ಯರಾದ ಸ್ಟ್ಯಾನ್ಲಿ ಹಟನ್, ಅಮಲ್, ವಿದ್ಯಾಭಗತ್, ಸತೀಶ ವೈದ್ಯ, ಶಾಂತರಾಜ ಬಾಗೋಡಿ, ವಿದ್ಯಾಸಗರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here