-
ಕೆ.ಶಿವು.ಲಕ್ಕಣ್ಣವರ
ಧಾರವಾಡ ವಿಧಾನ ಪರಿಷತ್ ಚುನಾವಣೆಯೂ..! ಕಾಂಗ್ರೆಸ್ ನ ಸಲೀಂ ಅಹಮ್ಮದ್ ವಿರುದ್ಧ ಬಿಜೆಪಿಯ ಪ್ರದೀಪ್ ಶೆಟ್ಟರ್ ರೂ..!!–
ವಿಧಾನ ಪರಿಷತ್ ಧಾರವಾಡ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ದಿನಾಂಕ 25 ರಂದು 12 ಜನ ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದವರು. ಈವರೆಗೆ ಒಟ್ಟು 24 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ನವೆಂಬರ್ 17 ರಂದು ಒಂದು ನಾಮಪತ್ರ, ನವೆಂಬರ್ 18 ರಂದು 2 ನಾಮಪತ್ರಗಳು ಮತ್ತು ಕೊನೆಯ ದಿನವಾದ ಮೊನ್ನೆ ಮಂಗಳವಾರದಂದು 21 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ವರೆಗೆ ಒಟ್ಟು 12 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪಕ್ಷೇತರ ಅಭ್ಯರ್ಥಿಗಳಾದ ಈರಪ್ಪ ಬಸನಗೌಡ ಗುಬ್ಬೇರ, ನಾಗೇಶಪ್ಪ ಶಿವರುದ್ರಪ್ಪ ಪಡೆಪ್ಪನವರ, ಬಸವರಾಜ ಶಂಕ್ರಪ್ಪ ಕೊಟಗಿ, ಮಲ್ಲಿಕಾರ್ಜುನ ಚನ್ನಬಸಪ್ಪ ಹಾವೇರಿ, ಮಹೇಶ ಗಣೇಶಭಟ್ಟ ಜೋಶಿ, ಮಹೇಶ ಬಸೆಟ್ಟೆಪ್ಪ ಹೋಗೆಸೊಪ್ಪಿನ, ಮಂಜುನಾಥ ಗಣೇಶಪ್ಪ ಅಡ್ಮನಿ, ವೀರುಪಾಕ್ಷಗೌಡ ಗೌಡಪ್ಪಗೌಡ ಪಾಟೀಲ, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಪ್ರಧೀಪ ಶಿವಪ್ಪ ಶೆಟ್ಟರ್, ಜನತಾ ಪಾರ್ಟಿಯ ಅಭ್ಯರ್ಥಿ ಫಕ್ಕೀರಡ್ಡಿ ವೀರಪ್ಪ ಅತ್ತಿಗೇರಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ಸಲೀಮ್ ಅಹ್ಮದ್ ಅಜೀಜ ಅಹಮ್ಮದ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನವೆಂಬರ್ 24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಹೀಗೆದೂ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಹೇಳಿದ್ದಾರೆ.
ಇದರಲ್ಲಿ ಕಾಂಗ್ರೆಸ್ ನ ಸಲೀಂ ಅಹಮ್ಮದ್ ಮತ್ತು ಬಿಜೆಪಿಯ ಪ್ರದೀಪ್ ಶೆಟ್ಟರ್ ನಡುವೇ ಈ ಚುನಾವಣೆ ನಡೆಯಲಿದೆ. ಉಳಿದಂತೆ ಎಲ್ಲರೂ ಆಟಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದಾರೆ ಈ ಧಾರವಾಡ ವಿಧಾನ ಪರಿಷತ್ ಚುನಾವಣೆಯಲ್ಲಿ. # ಪರಿಷತ್ ಚುನಾವಣೆಗೆ ಧಾರವಾಡದಿಂದ ಅಲ್ಪಸಂಖ್ಯಾತರಿಗೆ ‘ಕೈ’ ಟಿಕೆಟೂ..? ಮುಂಚೂಣಿಯಲ್ಲಿ ಕಾಂಗ್ರೆಸ್ ನ ಸಲೀಂ ಅಹಮ್ಮದ್ ಟಿಕೆಟೂ..!–
ವಿಧಾನ ಪರಿಷತ್ ಚುನಾವಣೆಯಲ್ಲಿ ಧಾರವಾಡ ದ್ವಿಸದಸ್ಯ ಕ್ಷೇತ್ರದಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ. ಹಾವೇರಿ, ಗದಗ ಜಿಲ್ಲೆಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಗದಿರುವ ಹಿನ್ನೆಲೆಯಲ್ಲಿ ಈ ಸಲೀಂ ಅಹಮ್ಮದ್ ರಿಗೆ ಟಿಕೆಟ್ ನೀಡುವ ಈಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಈ ಚುನಾವಣೆಯಲ್ಲಿ ಧಾರವಾಡ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ ಅಲ್ಪಸಂಖ್ಯಾತರಿಗೆ ಮಣೆ ಹಾಕಲಿದೆ. ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಗದಿರುವ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನೇ ಕಣಕ್ಕೆ ಇಳಿಸಿದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ ಏನೂ ಸಲೀಂ ಅಹಮ್ಮದ್ ರಿಗೇ ಟಿಕೆಟ್ ನೀಡಿದೆ.
ಕಳೆದ 13 ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ 2014 ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸಲೀಂ ಅಹಮ್ಮದ್ ಸೋಲು ಅನುಭವಿಸಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಸಲೀಂ ಅಹಮ್ಮದ್ ಬದಲಾಗಿ ಡಿ.ಆರ್. ಪಾಟೀಲ್‌ಗೆ ಟಿಕೆಟ್ ನೀಡಿದರೂ ಗೆಲುವು ದಕ್ಕಿರಲಿಲ್ಲ.
ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ಬಾರಿಯೂ ಸೈಯದ್ ಅಜೀಮ್ ಪೀರ್ ಖಾದ್ರಿ ಅವರಿಗೆ ಟಿಕೆಟ್ ನೀಡಲಾಗಿತ್ತಾದರೂ ಅವರು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿರುದ್ಧ ಸತತವಾಗಿ ಸೋಲನ್ನು ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಈ ಬಾರಿ ಅಲ್ಪಸಂಖ್ಯಾತರ ಬದಲಾಗಿ ಬೇರೆ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿತ್ತು ಮೊದಲು. ಆದರೂ ಈ ಸಲೀಂ ಅಹಮ್ಮದ್ ರಿಗೇ ಈ ಬಾರಿ ಟಿಕೆಟ್ ನೀಡಿದೆ.
ಹಾವೇರಿ ಹಾಗೂ ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಲೋಕಸಭಾ ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಇಲ್ಲದಿರುವ ಕಾರಣದಿಂದ ಪರಿಷತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆಯೂ ದಟ್ಟವಾಗಿತ್ತು.
ಮೂರು ಜಿಲ್ಲೆಗಳನ್ನು ಒಳಗೊಳ್ಳುವ ಧಾರವಾಡ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಇಸ್ಲಾಯಿಲ್ ತಮಾಟಗಾರ, ಇಮ್ರಾನ್ ಕಳ್ಳಿಮನಿ, ಅಲ್ತಾಫ್ ಹಳ್ಳೂರ ಕಸರತ್ತು ನಡೆಸುತ್ತಿದ್ದರು. ಆದರೆ ಸದ್ಯ ಹಾನಗಲ್ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಡಿ.ಕೆ.ಶಿವಕುಮಾರ್ ಅವರ ಆಪ್ತರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಅಂತಿಮ ಸಲೀಂ ಅಹಮ್ಮದ್ ರನ್ನೇ ಕಣಕಿಳಿಸುವ ತೀರ್ಮಾನ ಇನ್ನಷ್ಟೇ ಈಗಷ್ಟೇ ಆಗಿದೆ.
# ಜಗದೀಶ್ ಶೆಟ್ಟರ್ ತಮ್ಮ ಪ್ರದೀಪ್ ಶೆಟ್ಟರ್ ಗೇ ಬಿಜೆಪಿಯ ಮಣಿ ಹಾಕಿದೆಯೂ: ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದು ಮತ್ತೆ ಹಾಲಿ ನಿವೃತ್ತರಾಗಲಿರುವ 6 ಸದಸ್ಯರ ಪೈಕಿ ಅವಿಭಾಜ್ಯ ಧಾರವಾಡ ಜಿಲ್ಲೆಯಿಂದ ಪ್ರದೀಪ ಶೆಟ್ಟರ್ ಸಹಿತ ಐವರಿಗೆ ಟಿಕೆಟ್ ಪಕ್ಕಾ ಆಗಿತ್ತು. ಅದರಲ್ಲೂ ಮತ್ತೆ ಪ್ರದೀಪ್ ಶೆಟ್ಟರ್ ಗೇ ಬಿಜೆಪಿಯ ಟಿಕೆಟ್ ನೀಡಿದೆ.
ಪಕ್ಷಕ್ಕಾಗಿ ದುಡಿದ ಮೂಲ ಬಿಜೆಪಿಗೆರಿಗೆ ಆದ್ಯತೆ ನೀಡಲು ವರಿಷ್ಠರು ಚಿಂತನೆ ನಡೆಸಿದ್ದರು. ದುರ್ಬಲವಾಗಿರುವ ಕಡೆ ಮಾತ್ರ ವಲಸಿಗರಿಗೆ ಮಣೆ ಹಾಕುವರೆನ್ನಲಾಗಿತ್ತು, ಬೆಳಗಾವಿಯ ಎರಡೂ ಸ್ಥಾನಗಳಿಗೂ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು ಹಾಲಿ ವಿಧಾನಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರಾಗಿದ್ದ ಮಹಂತೇಶ್ ಕವಟಗಿಮಠ ಅವರ ಜೊತೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಬಿಜೆಪಿಯಿಂದಲೇ ಸ್ಪರ್ಧಿಸಲಿದ್ದಾರೆ.
ಈಗಾಗಲೇ ಕಾಂಗ್ರೆಸ್‌ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಸಹೋಧರ ಚನ್ನರಾಜ ಹಟ್ಟಿಹೊಳಿ ಅಂತಿಮಗೊಳಿಸಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಭಾರೀ ಜಿದ್ದಾ ಜಿದ್ದಿ ನಿಶ್ಚಿತವಾಗಿತ್ತು.
ದಕ್ಷಿಣ ಕನ್ನಡದಲ್ಲಿ ಹಾಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಭ್ಯರ್ಥಿಯಾಗುವುದು ನಿಕ್ಕಿಯಾಗಿದೆ. ಚಿಕ್ಕಮಗಳೂರಿನಿಂದ ಹಾಲಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಅವಿಭಾಜ್ಯ ಧಾರವಾಡ ಜಿಲ್ಲೆಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಕಲಬುರಗಿಯಿಂದ ಜಿ.ಟಿ.ಪಾಟೀಲ, ಶಿವಮೊಗ್ಗದಿಂದ ಸಿದ್ದರಾಮಪ್ಪ ಇಲ್ಲವೇ ಮಾಜಿ ಸಭಾಪತಿ ಶಂಕರಮೂರ್ತಿ ಪುತ್ರ ಅರುಣ್ ಅವರು ಅಂತಿಮಗೊಳ್ಳಬಹುದೆನ್ನಲಾಗಿದೆ.
ಆದರೆ ತುಮಕೂರು, ದಾವಣಗೆರೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಮುಂತಾದವುಗಳಿಗೆ ಅಂತಿಮ ಕ್ಷಣದಲ್ಲಿ ಘೋಷಣೆಯಾಗಬಹುದೆಂದೂ ಹೇಳಲಾಗಿದೆ. ಪಟ್ಟಿಯಲ್ಲಿ ಧಾರವಾಡ ಜಿಲ್ಲೆಯಿಂದ ಪ್ರದೀಪ ಶೆಟ್ಟರ್ ಹೆಸರು ಮಾತ್ರ ಇತ್ತು.
# ತಂತ್ರಗಾರಿಕೆ ಆರಂಭವೂ: ಆರಂಭದಿಂದಲೂ ಪ್ರದೀಪ ಶೆಟ್ಟರ್ ನಿಕ್ಕಿ ಎನ್ನಲಾಗುತ್ತಿದ್ದರೂ ಕುಟುಂಬದವರಿಗೆ ನೀಡಬಾರದೆನ್ನುವ ಅಪಸ್ವರ ಎದ್ದ ಕೂಡಲೇ ಲಿಂಗರಾಜ ಪಾಟೀಲ, ಹಾವೇರಿಯ ಪಾಲಾಕ್ಷಗೌಡ ಪಾಟೀಲ, ಭೋಜರಾಜ ಕೆರೂದಿ, ಎಂ.ಎಸ್.ಕರಿಗೌಡರ, ಅಶೋಕ ಕಾಟವೆ ಮುಂತಾದವರ ಹೆಸರು ಪ್ರಸ್ತಾಪಕ್ಕೆ ಬಂದಿದ್ದವು.
ಈ ಮೂರು ಜಿಲ್ಲೆಗಳ ಪಂಚಮಸಾಲಿ ಅಧ್ಯಕ್ಷರು ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಮನವಿ ಸಲ್ಲಿಸಿದ್ದರು. ನಂತರ ಲಿಂಗರಾಜ ಪಾಟೀಲರ ಹೆಸರು ಮುಂಚೂಣಿಗೆ ಬಂದಿತ್ತು.ಆದರೆ ಅಂತಿಮವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್ ಹೆಸರನ್ನು ಮಾತ್ರ ಶಿಫಾರಸು ಮಾಡಿದ್ದು ಅವರಿಗೆ ನಿಶ್ಚಿತವಾಗಿತ್ತು. ಈಗಾಗಲೇ ಅವರ ನಿವಾಸದಲ್ಲಿ ಸಭೆಗಳು, ತಂತ್ರಗಾರಿಕೆಗಳೂ ಆರಂಭಗೊಂಡಿದ್ದವು.
# ಈ ಪೈಕಿ ಬಿಜೆಪಿಯ ಪ್ರದೀಪ್ ಶೆಟ್ಟರ್ ರ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ನ ಸಲೀಂ ಅಹಮ್ಮದ್ ರ ನಡುವೇ ಈ ಚುನಾವಣೆ ನಡೆಯಲಿದೆಯಾದರೂ ಕಾಂಗ್ರೆಸ್ ನ ಸಲೀಂ ಅಹಮ್ಮದ್ ರು ಮೂಲತಃ ಬೆಂಗಳೂರಿನವರಾದ್ದರಿಂದ ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ಸೋತಿದ್ದರಲ್ಲದೇ ಈಗ ಮತ್ತೆ ಸ್ಪರ್ಧಿಸಿರುವ ಸಲೀಂ ಅಹಮ್ಮದ್ ಗೆಲುವು ಬಹಳ ಕಷ್ಟವೆನ್ನಲಾಗುತ್ತಿದೆ. ಆದರಿಂದ ಬಿಜೆಪಿಯ ಪ್ರದೀಪ್ ಶೆಟ್ಟರ್ ಗೆಲುವು ಬಹಳ ಸುಲಭವೂ ಎನ್ನಲಾಗುತ್ತಿದೆ.
ಹೀಗಾಗಿಯೇ ಅವಿಭಜಿತ ಧಾರವಾಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಸಲೀಂ ಅಹಮ್ಮದ್ ಮತ್ತು ಬಿಜೆಪಿಯ ಪ್ರದೀಪ್ ಶೆಟ್ಟರ್ ನಡುವೆಯೇ ಈ ಚುನಾವಣೆ ನಡೆಯಲಿದೆ..!