ಮಣೂರ ಆಸ್ಪತ್ರೆಯ ಸಿಬ್ಬಂದಿಗಳಿಂದ ‘ಹಸಿರು ಕಲಬುರಗಿಗೆ ಕೈಜೋಡಿಸಿ’ ಅಭಿಯಾನ

0
42

ಕಲಬುರಗಿ: ಸ್ವಚ್ಚ ಭಾರತ ಅಭಿಯಾನ, ಸ್ವಚ್ಚ ಸರ್ವೇಕ್ಷಣ-೨೦೨೨ರ ಅಂಗವಾಗಿ ಸ್ಥಳೀಯ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಂದ ಸ್ವಚ್ಚತಾ ಕಾರ್ಯ ನಡೆಯಿತು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರುಖ ಅಹ್ಮದ್ ಮಣೂರ ನೇತೃತ್ವದಲ್ಲಿ ನಗರದ ಸೂಪರ್ ಮಾರ್ಕೆಟ್‌ನ ಜನತಾ ಬಜಾರ, ತರಕಾರಿ ಮಾರ್ಕೆಟ್, ಚಪ್ಪಲ ಬಜಾರ, ಬಾಂಡೆ ಬಜಾರ, ಕಪಡಾ ಬಜಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊರಕೆ ಹಿಡಿದು ಕಸಗೂಡಿಸಲಾಯಿತು.

Contact Your\'s Advertisement; 9902492681

ಇದೇ ವೇಳೆಗೆ ನಗರದಲ್ಲಿ ಸ್ವಚ್ಚತೆ, ಶುಚಿತ್ವ ಕಾಪಾಡಿಕೊಂಡು ಕಲಬುರಗಿಯನ್ನು ಸ್ಮಾರ್ಟ್ ಸಿಟಿಯತ್ತ ಹೆಜ್ಜೆ ಇರಿಸೋಣ. ನಗರ ಸೌಂದರ್ಯ ಹೆಚ್ಚಿಸಿಕೊಂಡು ಹಸಿರು ಕಲಬುರಗಿಯನ್ನಾಗಿಸಲು ನಗರದ ಜನತೆ ಕೈಜೋಡಿಸಬೇಕು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರುಖ ಅಹ್ಮದ್ ಮಣೂರ ಕರೆ ನೀಡಿದರು.

ಈ ಸಂದರ್ಭದಲ್ಲಿ ವೈದ್ಯರಾದ ಡಾ. ಅನಿಲ್ ಎಸ್.ಕೆ, ಡಾ. ಸುಮಿಯಾ ಸನ್ನಾ, ಡಾ. ಶಫೀಯಾ ತರನ್ನುಮ್, ಡಾ. ಜುಬೇದಾ, ಮಹ್ಮದ್ ಇಸ್ಮಾಯಿಲ್, ಮುಬೀನ್ ಅಹ್ಮದ್, ಮ್ಯಾನೇಜರ್ ಜೆ.ಪಿ. ಸೂರ್ಯರಡ್ಡಿ, ಬಾಬುರಾವ್, ಲಕ್ಷ್ಮೀಕಾಂತ ಮೇತ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here