ಕಲಬುರಗಿ: ಜೀವಪರ, ಜನಪರ ಚಿಂತನೆಗಳನ್ನು ಇಂದಿನ ಸಂದರ್ಭಕ್ಕೆ ಅನ್ವಯಿಸಿ ನಮ್ಮ ಎದುರಿಗಿರುವ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಹೊಸತು ಮಾಸಿಕ ಪತ್ರಿಕೆ ಕಾರ್ಯನಿರ್ವಹಿಸುತ್ತಿದೆ ಎಂದು ಸಂಪಾದಕ ಡಾ. ಸಿದ್ಧನಗೌಡ ಪಾಟೀಲ ತಿಳಿಸಿದರು.
ಹೊಸತು ಚಿಂತನ ಬಳಗ, ಶ್ರೀನಿವಾಸ ಗುಡಿ ಮೆಮೋರಿಯಲ್ ಟ್ರಸ್ಟ್, ಭೂಮಿಯೋಗ ಫೌಂಡೇಶನ್ ಟ್ರಸ್ಟ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಹಾಗೂ ಅನ್ನದಾತನ ಋಣಭಾರ ಕುರಿತ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ ಎಂದು ಹೇಳಿದರು.
ಹೊಸಬರಲ್ಲಿನ ಶ್ರೇಷ್ಠತೆಯ ವ್ಯಸನ ತೆಗೆದು ಹಾಕುವ ಕೆಲವನ್ನು ಹಿರಿಯ ಲೇಖಕರು ಮಾಡಬೇಕಿದ್ದು, ಪತ್ರಿಕೆಯಲ್ಲಿ ಈ ನೆಲದ ಸಾಂಸ್ಕೃತಿಕ ಸಂಘರ್ಷ ಇರಬೇಕು. ಹೊಸ ಜನರಿಗೆ ಕೈಪಿಡಿ ಆಗುವಂತೆ ಓದುಗರ ಮನೆ-ಮನ ತಲುಪಿಸಲಾಗುವುದು. ಎಂದು ಹೇಳಿದರು.
ಕಳೆದ 23 ವರ್ಷಗಳಿಂದ ಪ್ರಕಟವಾಗುವ ಹೊಸತು ಪತ್ರಿಕೆಗೆ ಸದಸ್ಯರಾಗುವ ಮೂಲಕ ಸಮಾಜದ ಒಳಿತಿಗೆ ಕಾರಣರಾಗಬೇಕು. ಹೊಸ ಪೀಳಿಗೆಗೆ ಮುನ್ನೋಟ ಒದಗಿಸಲು ಸಹಕರಿಸುವಂತೆ ಅವರು ಕೋರಿದರು.
ಪ್ರೊ. ಆರ್.ಕೆ. ಹುಡಗಿ, ಡಾ. ಅಪ್ಪಗೆರೆ ಸೋಮಶೇಖರ, ಮೌಲಾ ಮುಲ್ಲಾ, ಡಾ. ಬಸವರಾಜ ಸಬರದ, ಡಾ. ಕಾಶಿನಾಥ ಅಂಬಲಗಿ, ಪದ್ಮಾವತಿ, ಹಣಂತ ಅಟ್ಟೂರ, ಮಹಾಂತೇಶ ಗೋನಾಲ, ರಾಘವೇಂದ್ರ ಹಳಪೇಟೆ, ಡಾ. ರಾಜೇಂದ್ರ ಯರನಾಳೆ, ಅರ್ಜುನ ಭದ್ರೆ, ಸಿದ್ದಪ್ಪ ಮೂಲಗೆ, ಭೀಮಾಶಂಕರ ಮಾಡ್ಯಾಳ, ಮಹ್ಮದ ಹುಸೇನ, ಕಲ್ಯಾಣಿ ಮತ್ತಿತರರು ಭಾಗವಹಿಸಿ ತಮ್ಮ ಸಲಹೆ, ಸೂಚನೆಗಳನ್ನು ನೀಡಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಪ್ರೊ. ಕಾಶಿನಾಥ ಅಂಬಲಗೆ, ಡಾ. ಶಿವರಂಜನ್ ಸತ್ಯಂಪೇಟೆ, ಡಾ. ಸಂದೀಪ ಬಿ., ಸಂಗಮನಾಥ ರೇವತಗಾಂವ ಇತರರು ಕವಿತೆ ವಾಚಿಸಿದರು. ಸೂರ್ಯಕಾಂತ ಸೊನ್ನದ, ಡಾ. ಮಹೇಶಕುಮಾರ ರಾಠೋಡ, ಸಿ.ಎಸ್. ಆನಂದ, ನಾಗರಾಜ ಸಾಲೊಳ್ಳಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.