ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್ ನ್ಯಾಯಧೀಶರಿಗೆ ಮನವಿ

0
16

ಸುರಪುರ : ನಗರದಲ್ಲಿರುವ ತಾಲೂಕು ನ್ಯಾಯಾಲಯದಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸುವಂತೆ ತಾಲೂಕು ನ್ಯಾಯವಾದಿಗಳ ಸಂಘದ ನಿಯೋಗ ಹೈಕೋರ್ಟ್ ಗೌರವಾನ್ವಿತ ನ್ಯಾಯಾಧೀಶರಾದ ಹಾಗೂ ಯಾದಗಿರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಇ. ಎಸ್, ಇಂದ್ರೇಶ್ ಅವರಿಗೆ ಮನವಿ ಸಲ್ಲಿಸಿದರು.

ಯಾದಗಿರಿ ನಗರಕ್ಕೆ ಆಗಮಿಸಿದ್ದ ನ್ಯಾಯಾಧೀಶರನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷರಾದ ಹಾಗೂ ವಕೀಲರಾದ ಬಿ. ಎಚ್, ಕಿಲ್ಲೇದಾರ ಅವರ ನೇತೃತ್ವದ ನಿಯೋಗ ಮನವಿ ಪತ್ರ ಸಲ್ಲಿಸಿ, ‘ಜಿಲ್ಲೆಯಲ್ಲಿ ಸುರಪುರ ತಾಲೂಕು ವ್ಯಾಪ್ತಿ ಹಿರಿದಾಗಿದೆ. ಸುರಪುರ ತಾಲೂಕನ್ನು ವಿಭಾಗಿಸಿ ಹುಣಸಗಿ ನೂತನ ತಾಲೂಕು ಸ್ಥಾಪನೆಯಾಗಿದೆ. ಹುಣಸಗಿ ಕಕ್ಷಿದಾರರು ಜಿಲ್ಲಾ ನ್ಯಾಯಾಲಯಕ್ಕೆ ಬರಬೇಕಾದರೆ ಕನಿಷ್ಠ ನೂರು ಕಿಲೋಮೀಟರ್ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.

Contact Your\'s Advertisement; 9902492681

ಹಾಗಾಗಿ, ಸುರಪುರದಲ್ಲಿಯೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆ ಮಾಡಿದರೆ ಎರಡೂ ತಾಲೂಕಿನ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಅನುಕೂಲವಾಗಲಿದೆ’ ಎಂದು ಸಂಘದ ಪದಾಧಿಕಾರಿಗಳು ಮಾನ್ಯ ನ್ಯಾಯಾಧೀಶರಿಗೆ ಮನವರಿಕೆ ಮಾಡಿದರು. ಅಲ್ಲದೆ ಪ್ರಸ್ತುತ ನ್ಯಾಯಾಲಯದ ಕಟ್ಟಡ ಪಟ್ಟಣದಿಂದ ಸ್ವಲ್ಪ ದೂರದಲ್ಲಿದ್ದು ರಾತ್ರಿಯ ವೇಳೆ ಮೀಸಲು ಪೊಲೀಸ್ ಭದ್ರತೆ ಒದಗಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಲಾಯಿತು.

ತಾಲೂಕು ನ್ಯಾಯಾಲಯದ ಕಟ್ಟಡ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದು ಯಾದಗಿರಿ ಜಿಲ್ಲೆಗೆ ಈಗಾಗಲೇ ಒಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರಾಗಿದ್ದು ಅದನ್ನು ಸುರಪುರದ ತಾಲೂಕು ನ್ಯಾಯಾಲಯದ ಕಟ್ಟಡದಲ್ಲಿ ಸ್ಥಾಪಿಸುವಂತೆ ವಕೀಲರ ನಿಯೋಗ ಒತ್ತಾಯಿಸಿತು.

ಸಂಘದ ಸದಸ್ಯರ ಮನವಿಯನ್ನು ಆಲಿಸಿದ ಮಾನ್ಯ ನ್ಯಾಯಾಧೀಶರು ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ, ಉದಯ್ ಸಿಂಗ್, ನಂದನಗೌಡ ಪಾಟೀಲ್, ಮಹಮ್ಮದ್ ಹುಸೇನ್, ರಮಾನಂದ ಕವಲಿ, ನಂದಣ್ಣ ಬಾಗ್ಲಿ, ವಿ.ಎಸ್. ಬೈಚಬಾಳ, ಯಲ್ಲಪ್ಪ ಹುಲಕಲ್, ಗೋಪಾಲ ತಳವಾರ, ಆದಪ್ಪ ಹೊಸಮನಿ, ಅಶೋಕ ಕವಲಿ, ಹಾಗೂ ಜಿ.ಆರ್. ಬನ್ನಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here