ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ರವಿವಾರ ಇಂಡಿಯನ್ ಸ್ಕೂಲ್ ಆಫ್ ಕರಾಟೆ, ಯೋಗ, ಪ್ರಾಣಾಯಾಮ ಮತ್ತು ಕರಾಟೆ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಬಡಾವಣೆಯ ಮಕ್ಕಳಿಗೆ ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಕರಾಟೆ ತರಬೇತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ವಿವಿಧ ಬಣ್ಣದ ಬೆಲ್ಟನ್ನು ವಿತರಿಸಿದರು.
ಕರಾಟೆ ಬೆಲ್ಟ್ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಕೆಂಪು ಬೆಲ್ಟ್ ಹೊಂದಿದ ಭಾರತೀಯ ಕರಾಟೆ ಸಂಸ್ಥಾಪಕ, ಗ್ರ್ಯಾಂಡ್ ಮಾಸ್ಟರ್ ಶ್ರೀ ಬಿ.ಎನ್. ನರಸಿಂಹನ್ ಕರಾಟೆ ಕೇವಲ ನಮ್ಮ ಆತ್ಮರಕ್ಷಣೆಗೆ ಅಲ್ಲದೇ ಮಾನಸಿಕ ಸ್ವಾಸ್ಥ್ಯ, ಶಾರಿರಿಕ ಸದೃಡತೆ, ಬೌದ್ಧಿಕ ಬೆಳವಣಿಗೆ ಮತ್ತು ಮನಸ್ಸಿನ ಏಕಾಗ್ರತೆಗೂ ಅವಶ್ಯಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಕುಮಾರ ಶೆಟ್ಟಿ ಅಧ್ಯಕ್ಷರು, ಕೆ.ಹೆಚ್.ಬಿ ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಇವರು ವಹಿಸಿದ್ದರು. ಬೆಲ್ಟ್ ವಿತರಣಾ ಕಾರ್ಯಕ್ರಮವನ್ನು ರಾಷ್ಟ್ರದ ಯೋಧನ ಮಗ, ಕಪ್ಪು ಬೆಲ್ಟ್ ಹೊಂದಿದ ಹಾಗೂ ಜಿಲ್ಲಾ ಮುಖ್ಯ ಬೋಧಕ ರಾಜವರ್ದನ ಜಿ ಚವ್ಹಾಣ ನೆರವೇರಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಅಂಬರೀಶ್ ಜೋಗಿ, ಪ್ರತಾಪ ಪವಾರ, ಬಾಲಕೃಷ್ಣ ಕುಲಕರ್ಣಿ, ಚಂದ್ರಕಾಂತ ತಳವಾರ, ಹಣಮಂತ್ರಾಯ ಅಟ್ಟೂರ, ಕವಿ ಅರಸನ್, ಮಹಾದೇವ ಹಿರೇಮಠ, ರಮೇಶ ಮೇಲಗಿರಿ, ಮಲ್ಲಣ್ಣ ಮಲ್ಲೇದ, ರಾಜಶೇಖರ ಜಕ್ಕಾ, ಲೋಕಯ್ಯ, ಕಲ್ಯಾಣರಾವ, ಸಿದ್ದರಾಮ ತಳವಾರ, ಬಸವರಾಜ ಹೆಳವರ ಯಾಳಗಿ, ಶಿವಶರಣಪ್ಪ ಅರಿಕೇರಿ ಹಾಗೂ ಬಡಾವಣೆಯ ಇನ್ನಿತರ ನಿವಾಸಿಗಳು ಭಾಗವಹಿಸಿದ್ದರು.