ದೇಶದ್ರೋಹಿಗಳನ್ನು ಗಡಿಪಾರು ಮಾಡಿ : ಸಂವಿಧಾನವೇ ಅಕ್ಷಯ ಪಾತ್ರ-ಧರ್ಮಗ್ರಂಥ

0
32

ಶಹಾಬಾದ :ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ವಿಶ್ವದಲ್ಲಿಯೇ ವಿಶಿಷ್ಟ ವೈವಿಧ್ಯಮಯವಾಗಿದ್ದು ಸರ್ವ ಸಮುದಾಯಗಳಿಗೆ ಸಮಾನತೆಯನ್ನು ನೀಡುವುದರ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ನಗರದ ಸಮಾಜ ಕಲ್ಯಾಣ ಇಲಾಖೆಯ ಹನುಮಾನ ನಗರದ ಬಾಲಕರ ವಸತಿ ನಿಲಯದಲ್ಲಿ ಸಂವಿಧಾನ ಸಮರ್ಪಣೆ ದಿನದ ನಿಮಿತ್ತ ಸಂವಿಧಾನದ ಮಹತ್ವದ ಕುರಿತು ಆಯೋಜಿಸಲಾದ ವಿಚಾರ ಸಂಕೀರಣ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ಅಂಬೇಡ್ಕರ್ ಅವರು ಹಲವಾರು ದೇಶಗಳನ್ನು ಸುತ್ತಿ, ಹಗಲಿರುಳು ಶ್ರಮಿಸಿ ಭಾರತಕ್ಕೆ ಬೇಕಾದ ಸಂವಿಧಾನ ರಚಿಸಿದ್ದರಿಂದಲೇ ಇಂದು ನಾವು ನಿವೇಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದೆವೆ.ಇದು ನಮಗೆ ಅಕ್ಷಯ ಪಾತ್ರೆ ಇದ್ದಂತೆ.ನಮ್ಮ ಪಾಲಿಗೆ ಸಂವಿಧಾನವೇ ಧರ್ಮಗ್ರಂಥವಾಗಿದ್ದು ಸರ್ವಸ್ವವೂ ಆಗಿದೆ ಎಂದರು.

Contact Your\'s Advertisement; 9902492681

ವಸತಿ ನಿಲಯದ ಮೇಲ್ವಿಚಾರಕ ರವಿಕುಮಾರ ಮುತ್ತಗಿ ಮಾತನಾಡಿ, ಸಂವಿಧಾನ ಇಡೀ ದೇಶದ ಜನತೆಯ ಜೀವನವನ್ನು ರೂಪಿಸುವ ಸಾಮರ್ಥ್ಯ ಹೊಂದಿದೆ.ಕೇಂದ್ರ, ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿ, ತುರ್ತು ಪರಿಸ್ಥಿತಿ ಹೇರಿಕೆ, ರಾಷ್ಟ್ರಪತಿ ಆಳ್ವಿಕೆಯ ಬಗ್ಗೆ ಸೂಕ್ತ ನಿದೇರ್ಶನ ನೀಡಿದೆ.ವಿದ್ಯಾರ್ಥಿಗಳು ಇದರ ಅಧ್ಯಯನ ಮಾಡಬೇಕು.ಅಲ್ಲದೇ ಸೂಕ್ತ ಸಂವಿಧಾನ ಹೊಂದದ ನೆರೆಯ ಪಾಕಿಸ್ತಾನ, ಚೈನಾದಲ್ಲಿ ಆಡಳಿತಗಾರರು ಹಲವು ಬಾರಿ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.ಪಾಕ್‌ನಲ್ಲಿ ಕೆಲವೊಮ್ಮೆ ಸೈನ್ಯಾಡಳಿಯ ಹೇರಲಾಗುತ್ತದೆ.ಚೈನಾದಲ್ಲಿ ಸ್ವಾತಂತ್ರ್ಯ ಕೇಳಿದರೆ ಜನರ ಧ್ವನಿಯನ್ನು ಹೊಸಕಿ ಹಾಕಲಾಗುತ್ತದೆ.ಇಂತಹ ದುಸ್ಥಿತಿ ಭಾರತದಲ್ಲಿ ಬಾರದೇ ಇರಲು ಶ್ರೇಷ್ಠ ಸಂವಿಧಾನವೇ ಕಾರಣವಾಗಿದೆ.

ಉಪನ್ಯಾಸಕ ಪೂಜಾರಿ ಮೇತ್ರೆ ಮಾತನಾಡಿ, ಶಾಂತಿ ಸೌಹಾರ್ದತೆಯ ಪ್ರತೀಕ, ಸಮಾನತೆಯಿಂದ ಕೂಡಿದ ಭಾರತದ ಸಂವಿಧಾನ ಇತರ ದೇಶಗಳಿಗೆ ಮಾದರಿಯಾಗಿದೆ.ಇಂತಹ ಸಂವಿಧಾನವನ್ನು ಅರ್ಥೈಸದ ಕೆಲ ಕೋಮುವಾದಿಗಳು ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡುತ್ತಿದ್ದಾರೆ.ಇದು ದೇಶದ್ರೋಹಿ ಹೇಳಿಕೆಯಾಗಿದೆ ಅಂಥವರನ್ನು ಗಡಿಪಾರು ಮಾಡಬೇಕು. ಸಂವಿಧಾನದ ರಕ್ಷಣೆಗಾಗಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದರು. ಅತಿಥಿಗಳಾಗಿ ಅಲ್ಲಮಪ್ರಭು ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಹಾಜರಿದ್ದರು.

ಸಿದ್ದು ನಿರೂಪಿಸಿದರು, ಮರಲಿಂಗಪ್ಪ ಸ್ವಾಗತಿಸಿದರು, ಶ್ರೀಧರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here