ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕಾರಿ ಸಭೆ

0
6

ಕಲಬುರಗಿ: ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹಾಗು ತಾಲೂಕಾಗಳಲ್ಲಿ ವೀರಶೈವ ಲಿಂಗಾಯತ ಭವನ ನಿರ್ಮಾಣಕ್ಕೆ ಪ್ರತಿ ಜಿಲ್ಲಾ ಕೇಂದ್ರಕ್ಕೆ ರೂ. ೫ಕೋಟಿ ಹಾಗು ತಾಲೂಕಾ ಕೇಂದ್ರಗಳಲ್ಲಿ ಭವನ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಮುಂದಾಗುವುದು ಸೇರಿದಂತೆ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವುದು ಮತ್ತು ಕಲಬುರಗಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಂಘನೆಗಾಗಿ ತಾಲೂಕಾ ಮತ್ತು ಹೋಬಳಿ ಕೇಂದ್ರಗಳಲ್ಲಿ ಜನಜಾಗೃತಿ ಕೈಗೊಳ್ಳುವುದು ಸಮುದಾಯದ ಪೂಜ್ಯನೀಯ ಮಠಾಧೀಶರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನ ಪಡೆಯಲು ಒಮ್ಮತದಿಂದ ನಿರ್ಧರಿಸಲಾಯಿತು.

ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಶರಣಕುಮಾರ ಮೋದಿಯವರ ಅಧ್ಯಕ್ಷತೆಯಲ್ಲಿ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಸಮುದಾಯ ಸಂಘಟನೆಗೆ ಸಮಯ ನೀಡಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದ ಮೋದಿಯವರು, ಜಿಲ್ಲೆಯಲ್ಲಿ ಸಮುದಾಯದ ಸಂಘಟನೆಯನ್ನು ಬಲಿಷ್ಠಗೊಳಿಸುವುದು ಅತ್ಯಗತ್ಯವಾಗಿದ್ದು, ಅದಕ್ಕಾಗಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ತಾಲೂಕಾ ಘಟಕಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿ ಹೋಬಳಿ ಹಾಗು ಗ್ರಾಮ ಮಟ್ಟದಲ್ಲಿಯೂ ಸಹ ಮಹಾಸಭಾದ ಘಟಕಗಳನ್ನು ರಚಿಸಲಾಗುವುದು ಈ ದಿಶೆಯಲ್ಲಿ ಕಾರ್ಯಂ iಜನೆಯೊಂದನ್ನು ಸಿದ್ದಪಡಿಸಿಕೊಂಡಿದ್ದು. ಮುಂದಿನ ತಿಂಗಳಿಂದ ಇದನ್ನು ಕಾರ್ಯಗತ ಮಾಡಲಾಗುವುದೆಂದು ತಿಳಿಸಿದರು.

Contact Your\'s Advertisement; 9902492681

ಸದಸ್ಯತ್ವ ಅಭಿಯಾನಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ ಕೋರಿದ ಅವರು ಇದರಲ್ಲಿ ವಿದ್ಯಾರ್ಥಿ ಘಟಕ ಮತ್ತು ಯುವಘಟಕದ ಪಾತ್ರ ಪ್ರಮುಖವಾಗಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಎಲ್ಲರನ್ನು ತೆಗೆದುಕೊಂಡು ರಾಜಕೀಯರಹಿತವಾದ ಮಹಾಸಭಾವನ್ನು ಜನಮನದ ಹತ್ತಿರ ತೆಗೆದುಕೊಂಡು ಹೋಗುವುದು ಎಂದು ನುಡಿದರು. ಸಮುದಾಯದ ಬಡವರ ಏಳಿಗೆಗಾಗಿ ಸರಕಾರ ರೂಪಿಸುವ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗುವಂತೆ ಅವರು ಕರೆ ನೀಡಿದರು.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹಾಸಭಾದ ಧರ್ಮಪ್ರಕಾಶ ಪಾಟೀಲ, ವಿನೋದಕುಮಾರ ಜೇನೆವರಿ, ಸಿದ್ದುಗೌಡ ಪಾಟೀಲ, ನಾಗಲಿಂಗಯ್ಯಾ ಮಠಪತಿ, ಜ್ಯೋತಿ ಪಾಟೀಲ, ಗೌರಿ ಚಿಚಕೋಟೆ, ಬೇಬಿ ನಂದಾ, ಶಾಂತರೆಡ್ಡಿ, ಆನಂದ ಪಾಟೀಲ, ಸಂತೋಷ ಪಾಟೀಲ, ಸೋಮಶೇಖರ ಹಿರೇಮಠ, ಶಿವರಾಜ ಪಾಟೀಲ ತಿಳಗೂಳ, ಮಹೇಶ ರೆಡ್ಡಿ, ಶರಣಪಾಟೀಲ ಟೆಂಗಳಿ, ಅಶೋಕ ಮಾನಕರ, ಶರಣ ಲೇಂಗಟಿ, ಜಿ.ಕೆ.ಪಾಟೀಲ, ಲತಾ ಬಿಲಗುಂದಿ, ಮಂಜುನಾಥ ಅಂಕಲಗಿ, ಲಕ್ಷ್ಮಿಕಾಂತ ಸ್ವಾಧಿ, ವಿಶ್ವನಾಥ ಅಂಕಲಗಿ, ವಿರುಪಾಕ್ಷಯ್ಯಾ ಮಠಪತಿ, ವೀರಣ್ಣಾ ಗೋಳಾದ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಡಾ. ಎಸ್.ಎಸ್. ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here