ಸುರಪುರ: ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ ಜುಮ್ಮೆರದೊಡ್ಡಿಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಗಳಿದ್ದು ಇಲ್ಲಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲವೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ಸಂಘಟನೆಯಿಂದ ಜೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶಿವಮೋನಯ್ಯ ಎಲ್.ಡಿ.ನಾಯಕ ಮಾತನಾಡಿ,ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾಗಿವೆ,ಆದರೆ ಇದುವರೆಗೂ ಅನೇಕ ಕುಟುಂಬಗಳಿಗೆ ಸರಿಯಾದ ವಿದ್ಯುತ್ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ ಎಂದರು.ಕಕ್ಕೇರಾ ಪುರಸಭೆ ವ್ಯಾಪ್ತಿಯ ಜುಮ್ಮೆರದೊಡ್ಡಿಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಗಳಿವೆ ಆದರೆ ಈ ಎಲ್ಲಾ ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಇಲ್ಲ ಎನ್ನುವುದು ನೋಡಿದರೆ ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂದು ಬೇಸರವಾಗುತ್ತದೆ.
ಕೂಡಲೇ ಜುಮ್ಮೆರದೊಡ್ಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಇಲ್ಲವಾದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ಸಂಘಟನೆಯು ನಮ್ಮ ರಾಜ್ಯಾಧ್ಯಕ್ಷರಾದ ಡಾ:ಚಲಪತಿಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿಯನ್ನು ಕಚೇರಿ ಸಿಬ್ಬಂದಿಗಳ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹುಣಸಗಿ ತಾಲೂಕು ಗೌರವಾಧ್ಯಕ್ಷ ಪ್ರಭು ನಾಯಕ ಟೇಲರ್,ಸುರಪುರ ತಾಲೂಕು ಉಪಾಧ್ಯಕ್ಷ ರಾಮನಗೌಡ ಹಾಲಗೇರಾ,ತಿಮ್ಮನಗೌಡ ಚೌಡೇಶ್ವರಿಹಾಳ,ಮಲ್ಲು ಎಸ್.ನಾಯಕ,ಸೋಮನಾಥ ನಾಯ್ಕೋಡಿ,ಸಾಬಣ್ಣ ನಾಯ್ಕೋಡಿ,ತಿಮ್ಮನಗೌಡ ಪಾಟೀಲ್,ಶರೀಫ್,ವೆಂಕಟೇಶ,ಮೂರ್ತಯ್ಯ,ಮಲ್ಲಯ್ಯ,ರಂಗನಾಥ,ಅಂಬ್ಲಯ್ಯ,ಮಾನಯ್ಯ,ಮಲ್ಲಿಕಾರ್ನುನ,ಭೀಮರಾಯ ಜಾಪರಳ್ಳಿ ಸೇರಿದಂತೆ ಅನೇಕರಿದ್ದರು.