ಸುರಪುರ: ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಪೌಷ್ಠಿಕತೆ ಇರುವಂತೆ ನೋಡಿಕೊಳ್ಳಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ರುಚಿಯಿಲ್ಲದೆ ಆಹಾರ ನೀಡಬೇಡಿ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಮೂಡಲದಿನ್ನಿ ಸಲಹೆ ನೀಡಿದರು.
ತಾಲೂಕಿನ ದೇವಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಪರಿಶೀಲಿಸಿ ಮಾತನಾಡಿ,ಸರಕಾರ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ದೂರಗೊಳಿಸಲು ಅನೇಕ ಯೋಜನೆಗಳನ್ನು ಮತ್ತು ಕೈತೋಟದ ಮೂಲಕ ಪೌಷ್ಠಿಕಾಂಶಯುಕ್ತ ಬಿಸಿಯೂಟ ನೀಡುವಂತೆ ಯೋಜನೆ ರೂಪಿಸಿದೆ.ಅದರಂತೆ ಮಕ್ಕಳಿಗೆ ನೀಡುವ ಆಹಾರದಲ್ಲಿ ತರಕಾರಿ ಮತ್ತು ಬೇಳೆ ಕಾಳುಗಳ ಹಾಕಿ ಒಳ್ಳೆಯ ರುಚಿಯಾದ ಊಟವನ್ನು ನೀಡುವಂತೆ ತಿಳಿಸಿದರು.
ಅಲ್ಲದೆ ಇದೇ ಸಂದರ್ಭದಲ್ಲಿ ತಾವೇ ಸ್ವತಃ ಮಕ್ಕಳಿಗೆ ಅಡುಗೆಯನ್ನು ಬಡಿಸುವ ಮೂಲಕ ಮಕ್ಕಳಿಂದ ಬಿಸಯೂಟದ ಕುರಿತು ಮಾಹಿತಿಯನ್ನು ಪಡೆದುಕೊಂಡರು.ನಂತರ ನೂತನವಾಗಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣ ಕಾಮಗಾರಿಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿ ಚಂದಪ್ಪ ನಾಯಕ ಹಾಗು ಶಾಲೆಯ ಮುಖ್ಯಗುರು ಮತ್ತು ಶಿಕ್ಷಕರು ಹಾಗು ಸಿಬ್ಬಂದಿಗಳಿದ್ದರು.