ಶೇಷ ಚೇತನರಿಗೆ ಸಾಂತ್ವನ ಬೇಡ, ಪ್ರೋತ್ಸಾಹ ನೀಡಿ

0
18

ಕಲಬುರಗಿ : ವಿಕಲಚೇತನರು ಸಹ ನಮ್ಮಂತೆ ಸೌಲಭ್ಯ ಪಡೆಯಲು ಅರ್ಹತೆ ಇದ್ದು, ಸಮಾಜದಲ್ಲಿ ಅವರಿಗೆ ಅನುಕಂಪ ತೋರುವ ಬದಲು ನಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಹೆಚ್. ಶಿರಾಮೇಗೌಡ ಹೇಳಿದರು

ಹೆಚ್.ಶಿರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಕಲಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ವಿಶೇಷ ಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡಬೇಕಿರುವುದು ನಮ್ಮ ಧರ್ಮ. ಅವರಿಗೆ ಸರಕಾರದಿಂದ ವಿಶೇಷ ಸವಲತ್ತುಗಳಿದ್ದು, ಅದು ಅರ್ಹರಿಗೆ ದೊರಕಬೇಕಿದೆ. ಈ ನಿಟ್ಟಿನಲ್ಲಿ ಅರ್ಹರು ಇದ್ದಲ್ಲಿ ಪತ್ತೆ ಹಚ್ಚಿ ಅವರ ಸೂಕ್ತ ದಾಖಲೆ ಸಂಗ್ರಹಿಸಿ, ಸೌಲಭ್ಯ ದೊರಕಿಸಿ ಕೊಡಲು ಸಂಘಟನೆಗಳು ಮುಂದಾಗಬೇಕು ಎಂದರು.

ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಹಜರತ್ ಸೈಯ್ಯದ್ ಶಾ ಮುಸ್ತಫಾ ಖಾದ್ರಿ, ವಿಶೇಷ ಚೇತನರಲ್ಲಿ ವಿಭಿನ್ನ ಪ್ರತಿಭಾವಂತರಿರುತ್ತಾರೆ. ಆದರೆ ಅವಕಾಶ ದೊರಕದೆ ಹಿಂದುಳಿದಿರುತ್ತಾರೆ. ಯಾವುದೇ ಅಂಗ ವೈಕಲ್ಯವಿದ್ದರೂ, ಅಂತಹವರಿಗೆ ನಾವು ವಿಶೇಷ ಸ್ಥಾನ ನೀಡಿ ನಮ್ಮ ಕೈಲಾದ ನೆರವು ನೀಡಬೇಕು. ಸರಕಾರ ಎಲ್ಲೆಡೆಯು ವಿಶೇಷ ಚೇತನರಿಗೆ ಅಗತ್ಯ ಸೌಲಭ್ಯ ನೀಡುತ್ತಿದ್ದು, ಅದರಂತೆ ಮತಗಟ್ಟೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದೆ. ಸಮಾಜದಲ್ಲಿ ನೆಮ್ಮದಿಯಿಂದ ಬದುಕು ನಡೆಸಲು ನಾವು ಸಹಕಾರ ನೀಡಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ವಿಶೇಷಚೇತನರನ್ನು ಸಮಾಜ ನೋಡುವ ಮನೋಭಾವ ಬದಲಾಗಬೇಕು. ವಿಶೇಷಚೇತನರಿಗೆ ಸಾಂತ್ವನದ ಮಾತುಗಳಿಗಿಂತಲೂ, ಪ್ರೋತ್ಸಾಹದ ಕೆಲಸವನ್ನು ಮಾಡುವ ಮನೋಭಾವ ಹೆಚ್ಚಾಗಬೇಕು. ವಿದ್ಯಾರ್ಥಿಗಳು ತಮ್ಮ ನಡುವಿನ ವಿಶೇಷಚೇತರನ್ನು ಪ್ರತ್ಯೇಕವಾಗಿ ನೋಡುವ ಬದಲು, ತಮ್ಮೊಳಗಿನ ವ್ಯಕ್ತಿಯನ್ನಾಗಿ ಪರಿಗಣಿಸಬೇಕೆಂದರು.

ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಬಿಜೆಪಿ ಮುಖಂಡ ಸುನೀಲ್ ವಂಟಿ, ಕಾಂಗ್ರೆಸ್ ಮುಖಂಡರಾದ ಲಿಂಗರಾಜ ತಾರಪೈಲ್, ಗಣೇಶ ವಳಕೇರಿ, ಜೈ ಕರವೇ ಜಿಲ್ಲಾಧ್ಯಕ್ಷ ಸಚಿನ್ ಫರತಾಬಾದ ಇದ್ದರು.

ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಪ್ರಲ್ಹಾದ್ ಹಡಗಿಲಕರ್, ಚರಣರಾಜ ರಾಠೋಡ, ನಾಗರಾಜ ಮಡಿವಾಳ, ದೀಪಕ ಶಹಾಪೂರಕರ್ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here