ಎತ್ತುಗಳ ಕಳ್ಳತನ ಪ್ರಕರಣ: ಮೂವರ ಬಂಧನ

0
41

ಕಲಬುರಗಿ: ಎತ್ತುಗಳ ಕಳ್ಳತನ ಪ್ರಕರಣಗಳನ್ನು ನರೋಣಾ ಠಾಣೆಯ ಪೋಲಿಸರು ಬೇಧಿಸಿದ್ದು, ಒಟ್ಟು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕೊಪ್ಪಳ್ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಿದ್ದಾಪುರದ ದನದ ವ್ಯಾಪಾರಿ ಭಾಷಾ ತಂದೆ ಸುಲೇಮಾನಸಾಬ್ ಖಟಗುರ್ (೨೮), ಬಳ್ಳಾರಿ ಜಿಲ್ಲೆಯ ಕೊಡಗಲ್?ನ ದನಗಳ ವ್ಯಾಪಾರಿ ಭಾಷಾ ತಂದೆ ಹುಸೇನಸಾಬ್ ಸೈಯದ್ (೨೯) ಹಾಗೂ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಯಲ್ಲಮ್ಮ ದೇವಿ ದೇವಸ್ಥಾನದ ಬಳಿ ಇರುವ ನಿವಾಸಿ ಹಾಗೂ ಗೌಂಡಿ ಕೆಲಸಗಾರ ಮೊಹ್ಮದ್ ರಫಿಕ್ ತಂದೆ ಹುಸೇನಸಾಬ್ ಪಠಾಣ್ ಅಲಿಯಾಸ್ ಪೈಲ್ವಾನ್ (೨೮) ಎಂದು ಗುರುತಿಸಲಾಗಿದೆ.

Contact Your\'s Advertisement; 9902492681

ಬಂಧಿತರು ೨೦೨೧ನೇ ಸಾಲಿನಲ್ಲಿ ಕಲಬುರ್ಗಿ, ಬೀದರ್ ಜಿಲ್ಲೆಗಳ ಮೂರು ಪ್ರಕರಣಗಳಲ್ಲಿ ಎತ್ತುಗಳನ್ನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ೮೫೦೦೦ರೂ.ಗಳ ಮೌಲ್ಯದ ಎರಡು ಕಿಲಾರಿ ಬಿಳಿ ಎತ್ತುಗಳು, ಐದು ಲಕ್ಷ ರೂ.ಗಳ ಮೌಲ್ಯದ ಒಂದು ಮಹೀಂದ್ರಾ ಬುಲೇರೋ ಪಿಕಪ್ ವಾಹನ, ೨೦,೦೦೦ರೂ.ಗಳ ನಗದು ಹಾಗೂ ಕೃತ್ಯಕ್ಕೆ ಬಳಸಿದ ಕರಗಸವನ್ನು ಪೋಲಿಸರು ವಶಪಡಿಸಿಕೊಂಡರು.

ವಿಶೇಷ ರಾತ್ರಿ ಗಸ್ತು ತಪಾಸಣೆ ಕರ್ತವ್ಯದಲ್ಲಿರುವಾಗ ಬಾಳಿ ಕ್ರಾಸ್ ಹತ್ ತಿರ ಸಂಶಯಾಸ್ಪದವಾಗಿ ನಂಬರ್ ಪ್ಲೇಟ್ ಇಲ್ಲದ ಒಂದು ಗೂಡ್ಸ್?ಪಿಕಪ್ ವಾಹನ ಬಂದಾಗ ಅದನ್ನು ಸಂಶಯದ ಮೇಲೆ ವಾಹನ ಸಮೇತ ವಶಕ್ಕೆ ಪಡೆದಾಗ ಎತ್ತುಗಳ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದವು. ಕಾರ್ಯಾಚರಣೆಯನ್ನು ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here