ಸುರಪುರ: ಇಲ್ಲಿಯ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ ನಂ. ೧೯ ಮಲಮುತ್ತೇರ ದೊಡ್ಡಿಯ ಹಲವಾರು ಬಿಜೆಪಿ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಶಾಸಕರು ಮುಂದೆ ಎಲ್ಲರು ಒಟ್ಟಗಿನಿಂದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಕರೆ ನೀಡಿದರು.
ನಂತರ ಮುಖಂಡರಾದ ನಾಗಪ್ಪ ಮಲಮುತ್ತೇರ, ನಂದಪ್ಪ ಇಂಡ್ರಿಗಿ, ಮಹಾದೇವ ಮಲಮುತ್ತೆ, ಪರಮಣ್ಣ, ನಂದಪ್ಪ ಮಲಮುತ್ತೆ, ಪರಮಣ್ಣ ಮುಂದಲೊರ, ರಾಮಯ್ಯ ಮಲಮುತ್ತೆ, ಚಿದಾನಂದ ಮಲಮುತ್ತೆ, ಈರಪ್ಪ, ನಂದಪ್ಪ, ನಂದಪ್ಪ ಆಟೊ, ದೇವಪ್ಪ ಜಾಲಿಬೆಂಚಿ, ಶರಣಪ್ಪ ಕಕ್ಕೇರಾ ಸೇರಿದಂತೆ ಅನೇಕರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಯುವ ಮುಖಂಡ ರಾಜಾ ವೇಣುಗೊಪಾಲ ನಾಯಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ, ಗುಂಡಪ್ಪ ಸೋಲ್ಲಾಪೂರ, ಪಿ.ಬಿ.ಕುಂಬಾರ, ಬಸಯ್ಯ ಸ್ವಾಮಿ, ಮಾನಪ್ಪ ಸಾಹು ಬಂಡೋಳ್ಳಿ ಇನ್ನಿತರರು ಉಪಸ್ಥಿತರಿದ್ದವರು,