ಸುರಪುರ: ನಗರದ ರಂಗಂಪೇಟೆಯ ಬಸವಪ್ರಭು ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸಗರನಾಡು ಯುವಕ ಸಂಘದ ವತಿಯಿಂದ ಗ್ರಾಮಿಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಗಾರ ಆರಂಭಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ನೆಹರು ಯುವ ಕೇಂದ್ರದ ಹಿರಿಯ ಅಧಿಕಾರಿ ಸಿದ್ರಾಮಪ್ಪ ಮಾಳ ಮಾತನಾಡಿ, ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲು ಕಂಪ್ಯೂಟರ್ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ಇದ್ದು ಆ ದೀಶೆಯಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆಯುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿ ಹರ್ಷಲ್ ತಲಸ್ಕರ್ ಮಾತನಾಡಿ ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಸಗರನಾಡು ಯುವಕ ಸಂಘದಿಂದ ಉಚಿತವಾಗಿ ತರಬೇತಿ ನೀಡುತ್ತಿರುವುದು ಶ್ಲಾಘನಿಯ ಕಾರ್ಯ ಎಂದು ಹೇಳಿದರು.
ಸಗರನಾಡು ಯುವಕ ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಧರ್ಮರಾಜ ಬಡಿಗೇರ, ಮಲ್ಲು ಬಾದ್ಯಾಪೂರ, ಕಲ್ಯಾಣ ಶೆಟ್ಟಿ ಅಂಗಡಿ, ಪ್ರವೀಣ ಜಕಾತಿ ವೇದಿಕೆ ಮೇಲಿದ್ದರು, ಸಲಿಂ ಅಡ್ಡೊಡಗಿ ನಿರೂಪಿಸಿದರು, ಸಂತೋಷ ಬಿಶೇಟ್ಟಿ ಸ್ವಾಗತಿಸಿದರು, ಶೃತಿ ಸಂಗಡಿಗರು ಪ್ರಾರ್ಥಿಸಿದರು, ಸಿದ್ದಪ್ರಸಾದ ಪಾಟೀಲ್ ವಂದಿಸಿದರು.