‘ಮಹಾದಾಯಿ’ ಹೋರಾಟಗಾರರ ಮೇಲೆ ಮತ್ತೆ ಮತ್ತೇ ಕೇಸುಗಳು ದಾಖಲು..! —

0
4
  • ಕುಶಲ

ವಿಧಾನ ಪರಿಷತ್​ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮ್ಮುಖದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹೊಸ ತಲೆಬೇನೆ ಶುರುವಾಗಿದೆ. ಮಹದಾಯಿ ಹೋರಾಟ ಪ್ರಕರಣದಲ್ಲಿ ಸರ್ಕಾರ ಪ್ರಕರಣ ಹಿಂಪಡೆದಿದ್ದರೂ ಹೋರಾಟಗಾರರಿಗೆ (Mahadayi water dispute) ಮತ್ತೆ ಮತ್ತೇ ಸಮನ್ಸ್ ಜಾರಿಯಾಗುತ್ತಿದೆ.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ 13 ಕ್ಕೂ ಹೆಚ್ಚು ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿದ್ದು, ನಾಳೆ ಡಿಸೆಂಬರ್ 7 ರಂದು ನವಲಗುಂದ ಜೆಎಂಎಫ್‌ಸಿ ಕೋರ್ಟ್ ಗೆ ಹಾಜರಾಗಲು ಸಮನ್ಸ್ ಜಾರಿಮಾಡಲಾಗಿದೆ.

Contact Your\'s Advertisement; 9902492681

ಗಮನರ್ಹವೆಂದರೆ ಖುದ್ದು ಬಸವರಾಜ ಬೊಮ್ಮಾಯಿ ಅವರೇ ವಿಶೇಷ ಆಸಕ್ತಿ, ಮುತುವರ್ಜಿ ವಹಿಸಿದ್ದರು ಈ ಹೋರಾಟದಲ್ಲಿ. ಆದರೆ ಈಗ ಮತ್ತೆ ಅಂದಿನ ಮಹದಾಯಿ ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿರುವುದು ಇಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಗೆ ಹೊಸ ತಲೆ ನೋವು ತಂದಿತ್ತಿದೆ.

2015 ರಲ್ಲಿ ನಡೆದಿದ್ದ ಮಹದಾಯಿ ಹೋರಾಟದ ಪ್ರಕರಣ ಅದಾಗಿದ್ದು, ಈ ವೇಳೆ 187 ರೈತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೇಸ್ ವಾಪಸ್ ತೆಗೆದುಕೊಳ್ಳುವ ನಿರ್ಧಾರವಾಗಿತ್ತು. ಆದರೂ ಕೆಲವು ರೈತರಿಗೆ ಕೋರ್ಟ್‌ನಿಂದ ಈಗಲೂ ಸಮನ್ಸ್ ಜಾರಿಯಾಗುತ್ತಿದೆ. ನವಲಗುಂದ ಜೆಎಂಎಫ್‌ಸಿ ಕೋರ್ಟ್‌ನಿಂದ ನಾಳೆ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ.

# ಹೋರಾಟದಲ್ಲಿ ಭಾಗಿದ್ದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದೇನು? –ಮಹದಾಯಿ ಹೋರಾಟಗಾರರಿಗೆ ಸಮನ್ಸ್ ಜಾರಿ ವಿಚಾರವಾಗಿ ಧಾರವಾಡದಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿದ್ದು, ಮಹದಾಯಿಗಾಗಿ ರೈತರು ಹೋರಾಟ ಮಾಡಿದ್ದರು. ಆಗ ಹೋರಾಟಗಾರರ ಮೇಲೆ ಕೇಸು ದಾಖಲಾಗಿದ್ದವು. ಬಳಿಕ ರಾಜ್ಯ ಸರಕಾರ ಕೇಸ್ ವಾಪಸ್ ಪಡೆದಿತ್ತು. ಎಲ್ಲ ಕೇಸ್ ವಾಪಸ್ ಪಡೆಯಲಾಗಿತ್ತು. ಈ ಬಗ್ಗೆ ಸರಕಾರದಿಂದ ಆದೇಶವೂ ಆಗಿತ್ತು.

ಅದನ್ನು ಕೋರ್ಟ್‌ಗೆ ಸಹ ಸಲ್ಲಿಸಲಾಗಿತ್ತು. ಇದೀಗ ಅನೇಕ ರೈತರಿಗೆ ಸಮನ್ಸ್ ಬಂದಿವೆ. ಒಮ್ಮೆ ಕೇಸ್ ಮರಳಿ ಪಡೆದ ಮೇಲೆ ಸಮನ್ಸ್ ಬಂದಿದ್ದು ಹೇಗೆ..? ಸರಕಾರ ಯಾವುದೇ ಇರಲಿ, ಕೇಸ್ ರೀ ಓಪೆನ್ ಮಾಡೋದು ಬೇಡ. ಕೇಸ್ ಕ್ಲೋಸ್ ಮಾಡಿಸಿದ್ದು ನಾನೇ. ಆದರೆ ಇದೀಗ ಸಮನ್ಸ್ ಬರುತ್ತಿವೆ. ಅಂದರೆ ಹೇಗೆ..? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕೂಡ ಮಹದಾಯಿಗಾಗಿ ಹೋರಾಟ ಮಾಡಿದವರು. ಕೂಡಲೇ ಈ ಬಗ್ಗೆ ಅವರು ಪರಿಶೀಲನೆ ಮಾಡಲಿ, ತಾಂತ್ರಿಕ ಸಮಸ್ಯೆಯಿದ್ದರೆ ಕೂಡಲೇ ಪರಿಹರಿಸಲಿ ಎಂದೆಲ್ಲಾ ಹೇಳಿದ್ದಾರೆ ಎ.ಎಚ್.ಕೋನರೆಡ್ಡಿ ಅವರು.

ಹೀಗೆ ಎನ್.ಎಚ್.ಕೋನರೆಡ್ಡಿ ಹೇಳಿರುವದಲ್ಲಿ ಯಾವ ತಪ್ಪು ಇಲ್ಲ. ಅದು ನ್ಯಾಯಬದ್ಧ ಹೇಳಿಕೆಯಾಗಿದೆ. ಈ ಮಹದಾಯಿ ಹೋರಾಟ ಈ ಕ್ಷಣಕ್ಕೆ ಮುಗಿದ ಅಧ್ಯಾಯವಾಗಿದೆ. ಹೀಗಿರುವ ಸ್ಥಿತಿಯಲ್ಲಿ ಮತ್ತೆ ಮತ್ತೇ ರೈತರ ಮೇಲಿರುವ ಕೇಸ್ ಗಳು ಧಾಖಲಾಗುವುದು ಅನ್ಯಾಯದ ಪರಮಾವಧಿಯೇ ಸರಿ..!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here