ಕಲಬುರಗಿ: ಸಿರನೂರ್ ಗ್ರಾಮದ ಹತ್ತಿರ ಸಂತ ಜೇವಿಯರ್ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಾಲು, ಹಣ್ಣುಗಳು ಮತ್ತು ಮೊಳಕೆ ಧಾನ್ಯಗಳನ್ನು ಶಾಲೆಯ ವ್ಯವಸ್ಥಾಪಕರಾದ ಫಾದರ್ ರಾಬರ್ಟ್ ಎಸ್ .ಜೆ ರವರು ವಿದ್ಯಾರ್ಥಿಗಳಿಗೆ ವಿತರಿಸಿದರು.
ನಂತರ ಅವರು ಮಾತನಾಡುತ್ತಾ ಕರ್ನಾಟಕ ಜೆಸ್ಯೂಟ್ ಎಜುಕೇಶನ್ ಸೊಸೈಟಿ ಬೆಂಗಳೂರ ಇವರ ನೇತೃತ್ವದಲ್ಲಿ ಈ ಶಾಲೆ ೨೦೧೯ ರಿಂದಲೂ ಆರಂಭಿಸಿದ್ದು ಇಲ್ಲಿ ಗ್ರಾಮೀಣ ಪ್ರದೇಶದ ನೂರಾರು ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಕರೋನಾ ಮಹಾಮಾರಿ ಯಿಂದ ತತ್ತರಿಸಿ ಪ್ರಾಥಮಿಕ ಶಾಲೆ ಆರಂಭಿಸಿರಲಿಲ್ಲ ಪ್ರಸ್ತುತ ಶಾಲೆ ಆರಂಭ ವಾಗಿದೆ ನೀತಿ ಆಯೋಗದ ಬಹುಆಯಾಮದ ಬಡತನ ಸೂಚ್ಯಂಕ ವರದಿಯಲ್ಲಿ ಘೋಷಣೆ ಮಾಡಿದೆ ಅದರಲ್ಲಿ ಆರೋಗ್ಯ ಶಿಕ್ಷಣ ಜೀವನಮಟ್ಟ ಈ ಮೂರು ಅಂಶಗಳ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಿದೆ ಮಕ್ಕಳಲ್ಲಿ ಅಪೌಷ್ಟಿಕತೆ ಕೊರತೆ ಹೆಚ್ಚು ಕಂಡುಬಂದಿದೆ ಶಿಶು ಮರಣದ ಸಂಖ್ಯೆಯ ಜೊತೆಗೆ ಮಕ್ಕಳು ಕೂಡ ಶಾಲೆಯಿಂದ ದೂರ ಉಳಿಯುತ್ತಿದ್ದಾರೆ.
ಪ್ರಮುಖವಾಗಿ ನಮ್ಮ ಕಲ್ಯಾಣ ಕರ್ನಾಟಕದ ಹೆಚ್ಚು ಜಿಲ್ಲೆಗಳು ಬಡತನದಿಂದ ಕೂಡಿಕೊಂಡಿವೆ ಸರ್ಕಾರವೂ ಕೂಡ ವಿದ್ಯಾರ್ಥಿಗಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ನೀಡುವ ಯೋಜನೆ ಜಾರಿಗೆ ತಂದಿದೆ ಹಾಗಾಗಿ ಅನುದಾನರಹಿತ ವಾದ ನಮ್ಮ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಿನಾಲೂ ಹಾಲು, ಹಣ್ಣುಗಳು ಮತ್ತು ಮೊಳಕೆ ಧಾನ್ಯಗಳು ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಉಚಿತವಾಗಿ ನಮ್ಮ ಸಂಸ್ಥೆಯ ಕಡೆಯಿಂದ ನೀಡಲಾಗುತ್ತಿದೆ. ಏಕೆಂದರೆ ಗ್ರಾಮೀಣ ಪ್ರದೇಶದ ಮಕ್ಕಳ ದೈಹಿಕ ಶಕ್ತಿಯನ್ನು ಹೆಚ್ಚಿಸುವುದರ ಮೂಲಕವಾಗಿ ಮಕ್ಕಳ ಆರೋಗ್ಯ ಜೊತೆಗೆ ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವುದು ಎಂದು ಫಾದರ್ ರಾಬರ್ಟ್ ಎಸ್ .ಜೆ ರವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರಿ ಯಾದ ಸಿಸ್ಟರ್ ಹಿಲ್ಡಾ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.