ಸುರಪುರ:ಸಾಮೂಹಿಕ ಸಂಘಟನೆಗಳಿಂದ ಮಹಾ ಪರಿನಿರ್ವಾಣ ದಿನಾಚರಣೆ

0
14

ಸುರಪುರ: ಸಂವಿಧಾನ ಶಿಲ್ಪಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ನಗರದ ಡಾ:ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರು ಮೊದಲಿಗೆ ಅಂಬೇಡ್ಕರ್‌ರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮೇಣದಬತ್ತಿಯನ್ನು ಬೆಳಗಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ನಂತರ ಪಂಚಶೀಲ ಪಠಣದೊಂದಿಗೆ ಧಮ್ಮ ವಂದನೆ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಜಗತ್ತಿಗೆ ಜ್ಞಾನದ ದೀವಿಗೆಯಾಗಿ ಕಂಡವರು ಡಾ:ಬಾಬಾ ಸಾಹೇಬ್ ಅಂಬೇಡ್ಕರ್‌ರು ಅವರು ನಮ್ಮ ಭಾರತದ ಎಲ್ಲಾ ದೀನ ದಲಿತ ಶೋಷಿತರ ಸೂರ್ಯನಿದ್ದಂತೆ,ಅವರು ಬರೆದು ಕೊಟ್ಟ ಸಂವಿಧಾನ ದೇಶದ ಎಲ್ಲರು ಸಮಾನತೆಯ ಮತ್ತು ನೆಮ್ಮದಿಯ ಬದುಕಿಗೆ ಮಾರ್ಗವಾಗಿದೆ.ಅವರು ಬರೆದ ಸಂವಿಧಾನವನ್ನು ಇಡೀ ಜಗತ್ತು ಮೆಚ್ಚಿದೆ ಅಲ್ಲದೆ ಅವರು ಪಡೆದಷ್ಟು ಪದವಿಗಳನ್ನು ಜಗತ್ತಿನಲ್ಲಿ ಇನ್ನೂ ಯಾರು ಪಡೆಯಲಾಗಿಲ್ಲ,ಆದ್ದರಿಂದ ಇಂದು ೧೬೦ ದೇಶಗಳಲ್ಲಿ ಅಂಬೇಡ್ಕರರನ್ನು ಸ್ಮರಿಸಲಾಗುತ್ತಿದೆ ಎಂದರು.

ಆದರೆ ಅಂತಹ ಮಹಾನ್ ಪುರುಷ ಕೊಟ್ಟಿರುವ ಸಂವಿಧಾನವನ್ನು ವಿರೋಧಿಸುವ ಮನಸ್ಸುಗಳು ದೇಶದಲ್ಲಿ ತಲೆ ಎತ್ತುತ್ತಿವೆ ಅವುಗಳನ್ನು ಮಟ್ಟ ಹಾಕಲು ನಾವೆಲ್ಲರು ಒಂದಾಗಿ ಹೋರಾಟ ನಡೆಸಬೇಕಿದೆ ಎಂದರು.ವೆಂಕೋಬ ದೊರೆ ಬೊಮ್ಮನಹಳ್ಳಿ,ದೇವಿಂದ್ರಪ್ಪ ಪತ್ತಾರ,ನಾಗಣ್ಣ ಕಲ್ಲದೇವನಹಳ್ಳಿ, ಗೋಪಾಲ ವಜ್ಜಲ್,ಆದಪ್ಪ ಹೊಸ್ಮನಿ ಹಾಗು ರಾಹುಲ್ ಹುಲಿಮನಿ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಹೊಸ್ಮನಿ,ಭೀಮರಾಯ ಸಿಂದಗೇರಿ,ಮಾಳಪ್ಪ ಕಿರದಹಳ್ಳಿ,ನಿಂಗಣ್ಣ ಗೋನಾಲ,ವೀರಭದ್ರಪ್ಪ ತಳವಾರಗೇರಾ,ಶಿವಶಂಕರ ಹೊಸ್ಮನಿ,ರಾಜು ಕುಂಬಾರ,ವೆಂಕಟೇಶ ಸುರಪುರ,ಶಿವಲಿಂಗ ಹಸನಾಪುರ,ಶಿವರಾಜಕುಮಾರ್ ಪಾಣೆಗಾಂವ್,ಪರಶುರಾi ಮಲ್ಲಿಬಾವಿ, ಹಣಮಂತ ಆರ್.ಕೆ.ಕಾಲೋನಿ,ಭೀಮಣ್ಣ ಬನಸೋಡೆ,ವೈಜನಾಥ ಹೊಸ್ಮನಿ,ರಮೇಶ ಬಾಚಿಮಟ್ಟಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here