ಕಾಲುವೆಗೆ ವಿದ್ಯುತ್ ಗೇಟ್ ಅಳವಡಿಸಲು ಆಗ್ರಹಿಸಿ ರೈತ ಸಂಘ ಮನವಿ

0
11

ಸುರಪುರ: ತಾಲೂಕಿನ ಕರ್ನಾಳ ಕುಪಗಲ್,ರುಕ್ಮಾಪುರ,ಚಂದಲಾಪುರ,ಬೇವಿನಾಳ,ಶೆಳ್ಳಗಿ ಮತ್ತಿತರೆ ಗ್ರಾಮಗಳ ಜಮೀನುಗಳಿಗೆ ನೀರು ಸರಬರಾಜಾಗುವ ವನದುರ್ಗದಿಂದ ಸೂಗೂರು ವರೆಗಿನ ಡಿ೬ ಗೇಟ್‌ಗೆ ವಿದ್ಯುತ್ ಗೇಟ್ ಅಳವಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಒತ್ತಾಯಿಸಿದರು.

ನಗರದ ಹಸನಾಪುರ ಕ್ಯಾಂಪ್‌ಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ರೈತರು ಈಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ,ಆದರೆ ವಿದ್ಯುತ್ ಗೇಟ್ ಅಳವಡಿಕೆ ವಿಳಂಬದಿಂದ ರೈತರಿಗೆ ತೀವ್ರ ತೊಂದರೆಯಾಗಲಿದೆ ಆದ್ದರಿಂದ ಕೂಡಲೇ ಗೇಟ್ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದರು.

Contact Your\'s Advertisement; 9902492681

ಅಲ್ಲದೆ ಗೇಟ್ ೨೧ರ ಕಾಲುವೆಯಲ್ಲಿ ಹೂಳು ತುಂಬಿದ್ದು ಕೊನೆ ಭಾಗದ ರೈತರ ಜಮೀನುಗಳಿಗೆ ಕಾಲುವೆಯಲ್ಲಿ ನೀರು ಸರಾಗವಾಗಿ ಹೋಗುವುದಿಲ್ಲ ಆದ್ದರಿಂದ ಹೂಳು ತೆಗೆಯಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಕಚೇರಿ ಸಿರಸ್ತೆದಾರರ ಮೂಲಕ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ,ಹುಣಸಗಿ ತಾಲೂಕು ಗೌರವಾಧ್ಯಕ್ಷ ಸಾಹೇಬಗೌಡ ಮದಲಿಂಗನಾಳ,ವೆಂಕಟೇಶ ಕುಪಗಲ್,ರಾಘು ಕುಪಗಲ್,ಯಂಕೋಬ ದೊರೆ ಕುಪಗಲ್,ವಿಶ್ವರಾಜ ಚಂದಲಾಪುರ,ನಾಗಪ್ಪ ಕುಪಗಲ್,ದೇವೆಂದ್ರಪ್ಪ,ಮಾನಪ್ಪ,ಭಿಮಣ್ಣ ದೊಡ್ಮನಿ,ನಿಂಗಣ್ಣ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here