ಕಲಬುರಗಿ: ನಗರದ ನಳಂದಾ ಪಿ.ಯು. ಕಾಲೇಜಿನಲ್ಲಿ ಜೇವರ್ಗಿ ತಾಲೂಕಿನ ಕಲಬುರಗಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಡಿಯಲ್ಲಿ ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ೧೧ನೇ ವಾರ್ಷಿಕ ಮಹಾ ಸಭೆಯಲ್ಲಿ ಎಚ್ಕೆಇ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ, ಮಹಾನಗರ ಪಾಲಿಕೆ ಸದಸ್ಯರಾದ ಡಾ. ಶಂಭುಲಿಂಗ ಪಾಟೀಲ್ ಬಳಬಟ್ಟಿ, ಅರ್ಚನಾ ಬಿ. ಪಾಟೀಲ್ ಇವರನ್ನು ಸನ್ಮಾನಿಸಲಾಯಿತು.
ಜೇವರ್ಗಿ ತಾಲೂಕಿನ ಕಲಬುರಗಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿಜಯಕುಮಾರ ದುದ್ದಗಿ, ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಪಿತಾಂಬರ್ ಪಾಟೀಲ್, ಉಪಾಧ್ಯಕ್ಷ ರಾಘವೆಂದ್ರ ಜೋಶಿ, ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾರ್ಜುನ್ ಕೆ. ಪಾಟೀಲ್, ಹುಲಿಕಂಠರಾಯ ಎಸ್.ಎಂ. ಬಸವರಾಜ.ಜಿ.ಪಾಟೀಲ್, ಬಸವರಾಜ ಎಂ.ಪಾಟೀಲ್, ಶಾಂತಗೌಡ ಪಾಟೀಲ್, ಭೀಮರಾಯ ಪೂಜಾರಿ ಮದ್ರಿ, ಹಣಮಂತಪ್ಪಾ ಬಿರಾಳ, ಅಂಬಲಪ್ಪಾ ದೇಸಾಯಿ, ಖೈಸರ್ ಜಹಾನ್ ಶರೀನ್, ನಿರ್ಮಲ ಜಿ. ಸಿಕೇದ್, ಪ್ರಭುಗೌಡ ಎಂ.ಪಾಟೀಲ್, ಹಾಗೂ ಸಿಬ್ಬಂದಿ ವರ್ಗದವರು ಇದ್ದರು.