ಕಲಬುರಗಿ- ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಸತತ ೨ನೇ ಬಾರಿಗೆ ಬಿ ಜಿ ಪಾಟೀಲರು ಆಯ್ಕೆಯಾಗಿರುವುದಕ್ಕೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ತಿನ ಗೆಲುವಿನೊಂದಿಗೆ ಪರಿಷತ್ತಿನಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಪಡೆದುಕೊಂಡಿದೆ ಇನ್ಮುಂದೆ ವಿಧೇಯಕಗಳು ಯಾವ ಅಡ್ಡಿ ಆತಂಕಗಳು ಇಲ್ಲದೇ ಪಾಸ್ ಆಗಲು ಸಾಧ್ಯವಿದೆ. ಬಿ ಜಿ ಪಾಟೀಲರ ಗೆಲುವಿಗೆ ಮತ ಚಲಾಯಿಸಿದ ಎಲ್ಲ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಗೆ ಹಾಗೂ ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.