ಕಲಬುರಗಿ: ಪಲ್ಲಾಪೂರ, ಜಾಫರಾಬಾದ, ಪಂಡಿತ ದೀನ ದಯಾಳ ಉಪಾಧ್ಯಾಯ ನಗರ ಹಾಗೂ ಎಸ್.ಎಮ್ . ಕೃಷ್ಣಾ ಆಶ್ರಯ ಕಾಲೋನಿಗಳಿಗೆ ನಿಯಮಿತವಾಗಿ ನೀರು ಸರಬುರಾಜು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ನೇತೃತ್ವದಲ್ಲಿ ನಗರ ನೀರು ಸರಬುರಾಜು ಮತ್ತು ಒಳಚರಂಡಿ ವಿಭಾಗದ ಎದುರು ಪ್ರತಿಭಟನೆ ನಡೆಸಿ ಎಲ್ ಎನ್ ಟಿ ಕಂಪನಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಲ್ಲಾಪೂರ, ಜಾಫರಾಬಾದ, ಪಂಡಿತ ದೀನ ದಯಾಳ ಉಪಾಧ್ಯಾಯ ನಗರ ಹಾಗೂ ಎಸ್.ಎಮ್. ಕೃಷ್ಣಾ ಆಶ್ರಯ ಕಾಲೋನಿಗಳಿಗೆ ನಿಯಮಿತವಾಗಿ ನೀರು ಸರಬುರಾಜು ಮಾಡದೇ ವಾರಕ್ಕೊಮ್ಮೆ ಹಾಗೂ ೧೫ ನೇ ದಿವಸಗಳಿಗೊಮ್ಮೆ ನೀರು ಸರಬುರಾಜು ಆಗುತ್ತಿದ್ದು, ಇದರಿಂದ ಅಲ್ಲಿಯ ಬಡ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಕಾರಣ ಸದರಿ ಕಾಲೋನಿಗಳಲ್ಲಿ ಹೆಚ್ಚಾಗಿ ಬಡ ಹಾಗೂ ಕೂಲಿ ಕಾರ್ಮಿಕರಿಂದ್ದು, ದಿನನಿತ್ಯ ಕುಡಿಯುವ ನೀರಿಗಾಗಿ ಅಲೆದಾಡುತ್ತಿದ್ದು, ಇದರಿಂದ ಅವರ ದೈನಂದಿನ ಕೂಲಿ ಕೆಲಸಕ್ಕೆ ತುಂಬಾ ತೊಂದರೆಯಾಗುತ್ತಿದೆ. ಹಾಗೂ ವಾರ ಹಾಗೂ ೧೫ ದಿನಗಳಗೊಮ್ಮೆ ನೀರು ಬಿಡುವುದರಿಂದ ನೀರಿಲ್ಲದೇ ಖಾಸಗಿ ಟ್ಯಾಂಕರ್‌ಗಳು ನೀರು ಸರಬುರಾಜು ಮಾಡಲು ದುಡ್ಡಿನ ಡಿಮ್ಯಾಂಡ್ ಇದ್ದು ಇದರಿಂದ ಕಡುಬಡವರಿಗೆ ನಿಲುಕಾರದಷ್ಟು ತುಂಬಾ ತೊಂದರೆಯಾಗುತ್ತಿದೆ.
ಆದ್ದರಿಂದ ದಯಾಳುಗಳಾದ ತಾವುಗಳು ಅರ್ಜಿಗೆ ಮಾನ್ಯಮಾಡಿ, ವಾರಕ್ಕೊಮ್ಮೆ ಹಾಗೂ ೧೫ ದಿನಗಳಿಗೊಮ್ಮೆ ನೀರು ಸರಬುರಾಜು ಆಗುತ್ತಿರುವ ಮೇಲ್ಕಂಡ ಬಡಾವಣೆಗಳಿಗೆ ನಿಯಮಿತವಾಗಿ ನೀರು ಸರಬುರಾಜು ಮಾಡುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಮನವಿ. ಒಂದುವೇಳೆ ನಮ್ಮ ಮನವಿಗೆ ತಾವುಗಳು ಸ್ಪಂದಿಸದೇ ಹೋದರೆ ಇದ್ದರೆ ಆಳಂದ-ಕಲಬುರಗಿ ಮುಖ್ಯ ರಸ್ತೆಯನ್ನು ತಡೆದು ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದರು.
ಕರವೇ ತಾಲೂಕಾಧ್ಯಕ್ಷ ಪುನೀತರಾಜ ಕವಡೆ, ನಿಸಾರ ಅಹ್ಮದ್ ಖಾನ್, ಅಶೋಖ ಭೀಮಳ್ಳಿ, ಅಲ್ಲಿಸಾಬ, ಪೃತ್ವಿರಾಜ ರಾಂಪುರೆ, ವಾಸಂಬಿ ಕಡಗಂಚಿ, ಆಕಾಶ ರಾಠೋಡ, ಶರಣಗೌಡ ಪಾಟೀಲ, ಸಿದ್ದಣಗೌಡ ಪಾಟೀಲ ಇದ್ದರು.